ಯಮಹಾ ಆರ್‌ಎಕ್ಸ್ 100 ಬೈಕ್‌ನ್ನು ನೆನಪಿಸುತ್ತದೆ ಈ ಮೋಟಾರ್‌ಸೈಕಲ್.. ಕೇವಲ ರೂ.1.20 ಲಕ್ಷ.. 50 ಕಿ.ಮೀ ಮೈಲೇಜ್!
ಭಾರತದ ಯುವಕರಿಗೆ ದಶಕಗಳ ಹಿಂದೆ, ನಿಮ್ಮ ನೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುತ್ತಿದ್ದ ಒಂದೇ ಒಂದು ಉತ್ತರ ಯಮಹಾ ಆರ್‌ಎಕ್ಸ್ 100 (Yamaha RX 100) ಎಂದು. ಅಷ್ಟರಮಟ್ಟಿಗೆ ಇದು ಅನೇಕ ಯುವ ಮೋಟಾರ್‌ಸೈಕಲ್ ಪ್ರೇಮಿಗಳ ಹಾಟ್ ಫೆವರೇಟ್ ಆಗಿತ್ತು. 2000ಕ್ಕೂ ಮೊದಲು ದೇಶೀಯ ರಸ್ತೆಯಲ್ಲಿ ಅಬ್ಬರಿಸುತ್ತಿದ್ದ ಈ ಬೈಕ್, ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿತ್ತು. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಯಮಹಾ ಆರ್‌ಎಕ್ಸ್ 100 ಮೋಟಾರ್‌ಸೈಕಲ್ ಮಾರಾಟ ಸ್ಥಗಿತಗೊಳಿಸಿ ವರ್ಷಗಳಾಗಿವೆ. ಆದರೂ ಅಪರೂಪಕ್ಕೆ ಎಂಬಂತೆ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ನೀವು ಈ ಬೈಕ್‌ನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ.. ಅದೇ ರೀತಿಯ ರೆಟ್ರೋ ಲುಕ್ ಹೊಂದುರುವ ಹಂಗೇರಿ ಮೂಲದ 'ಕೀವೇ ಎಸ್ಆರ್125' ಮೋಟಾರ್‌ಸೈಕಲ್ ಉತ್ತಮ ಆಯ್ಕೆಯಾಗಲಿದೆ. ಬನ್ನಿ.. ಇದರ ವಿಶೇಷತೆಗಳು ಏನೆಂಬುದನ್ನು ತಿಳಿಯೋಣ.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೊಚ್ಚ ಹೊಸ ಕೀವೇ ಎಸ್ಆರ್125 (Keeway SR 125) ಬೈಕ್, ಅತ್ಯಂತ ಕೈಗೆಟುಕುವ ಬೆಲೆಯನ್ನು ಹೊಂದಿದೆ. ಇದು ರೂ.1.20 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಗ್ಲೋಸಿ ರೆಡ್, ಗ್ಲೋಸಿ ಬ್ಲ್ಯಾಕ್ ಮತ್ತು ಗ್ಲೋಸಿ ವೈಟ್ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಕೀವೇ ಎಸ್ಆರ್125 ಮೋಟಾರ್‌ಸೈಕಲ್, 125 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 9000 ಆರ್‌ಪಿಎಂನಲ್ಲಿ 9.8 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 7500 ಆರ್‌ಪಿಎಂನಲ್ಲಿ 8.2 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. 50 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ನೂತನ ಕೀವೇ ಎಸ್ಆರ್125 ಬೈಕ್, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಫುಲ್ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್ - ಸ್ಟ್ಯಾಂಡ್ ಎಂಜಿನ್, ಹ್ಯಾಲೊಜೆನ್ ಹೆಡ್ ಲೈಟ್, ಎಲ್‌ಇಡಿ, ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲೈಟ್ ಹಾಗೂ ಎಲ್ಇಡಿ ಇಂಡಿಕೇಟರ್‌ಗಳನ್ನು ಹೊಂದಿದೆ.

ಈ ಬೈಕ್ ಬರೋಬ್ಬರಿ 120 ಕೆಜಿ ತೂಕವಿದ್ದು, 14.5-ಲೀಟರ್ ಸಾಮರ್ಥ್ಯ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿದೆ. ಗ್ರೌಂಡ್ ಕ್ಲಿಯರೆನ್ಸ್ 160 ಎಂಎಂ ಹಾಗೂ ಸೀಟ್ ಹೈಟ್ 780 ಎಂಎಂ ಇದೆ. ಜೊತೆಗೆ 17-ಇಂಚಿನ ಸ್ಪೋಕ್ ವೀಲ್‌ಗಳನ್ನು ಒಳಗೊಂಡಿದ್ದು, ನಗರ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ.
ಹೊಸ ಮೋಟಾರ್‌ಸೈಕಲ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) 5-ಸ್ಟೆಪ್ ಪ್ರಿಲೋಡ್ ಅಡ್ಜಸ್ಟಬಲ್ ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸವಾರರ ರಕ್ಷಣೆಗಾಗಿ ಡಬಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದ್ದು, ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಕೂಡ ಇದೆ.

ಇನ್ನು, ಯಮಹಾ ಆರ್‌ಎಕ್ಸ್ 100 ಬೈಕ್ ಸಹ 2026ರ ಅಂತ್ಯದೊಳಗೆ ಮಾರಾಟಕ್ಕೆ ಬರಲಿದೆ ಎನ್ನಲಾಗಿದೆ. ಇದು ರೂ.1 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. 98 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಪಡೆದಿರಲಿದ್ದು, ಪ್ರಯಾಣಿಕರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ನ್ನು ಒಳಗೊಂಡಿರುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications