ಸ್ಪ್ಲೆಂಡರ್ ನಂ 1.. ಆಕ್ಟಿವಾ ಸೆಕೆಂಡ್.. ಬಲಿಷ್ಠ ಜೂಪಿಟರ್ & ಆಕ್ಸೆಸ್ ಸ್ಕೂಟರ್‌ಗೆ ಭಾರೀ ಡಿಮ್ಯಾಂಡ್!
ಭಾರತವು ವಿಶ್ವದಲ್ಲಿಯೇ ಅತಿ ದೊಡ್ಡ ದ್ವಿಚಕ್ರ ವಾಹನ (Two-Wheeler) ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಪ್ರತಿ ತಿಂಗಳು ಲಕ್ಷಾಂತರ ಸಂಖ್ಯೆಯಲ್ಲಿ ಬೈಕ್ ಹಾಗೂ ಸ್ಕೂಟರ್‌ಗಳು ಮಾರಾಟವಾಗುತ್ತಿವೆ. ಇತ್ತೀಚೆಗೆ, ಎಲ್ಲ ವಾಹನ ತಯಾರಕ ಕಂಪನಿಗಳು ಫೆಬ್ರವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದೆ. ದೇಶೀಯವಾಗಿ ಮಾರಾಟಗೊಂಡ ಪ್ರಮುಖ 10 ಪಟ್ಟಿಯಲ್ಲಿ ಎಂದಿನಂತೆ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದೆ. ಹೋಂಡಾ ಆಕ್ಟಿವಾ ಎರಡನೇ ಸ್ಥಾನದಲ್ಲಿದ್ದರೆ, ಹತ್ತನೇ ಸ್ಥಾನದಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಇದೆ.
ಮೊದಲಿಗೆ ನಂಬರ್ 1 ಸ್ಥಾನದಲ್ಲಿರುವ ಹೀರೋ ಸ್ಪ್ಲೆಂಡರ್ (Hero Splendor) ಮಾರಾಟದ ಅಂಕಿಅಂಶಗಳ ಬಗ್ಗೆ ಮಾತನಾಡೋಣ. ಕಳೆದ ತಿಂಗಳು (ಫೆಬ್ರವರಿ - 2025) 'ಹೀರೋ ಮೋಟೋಕಾರ್ಪ್' ಬರೋಬ್ಬರಿ 2,07,763 'ಸ್ಪ್ಲೆಂಡರ್' ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಿದೆ. ಅದೇ 2024ರ ಫೆಬ್ರವರಿ ತಿಂಗಳಲ್ಲಿ 2,77,939 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ -25.25% ಕುಸಿತವಾಗಿದೆ.

ಎರಡನೇ ಸ್ಥಾನದಲ್ಲಿ ಜನಪ್ರಿಯ ಹೋಂಡಾ ಆಕ್ಟಿವಾ (Honda Activa) ಇದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ತೀವ್ರ ಪೈಪೋಟಿ ನಡುವೆಯೂ ಈ ಫೆಬ್ರವರಿಯಲ್ಲಿ 1,74,009 ಯುನಿಟ್ ಆಕ್ಟಿವಾಗಳನ್ನು ಮಾರಾಟ ಮಾಡಲು 'ಹೋಂಡಾ' ಕಂಪನಿಯು ಯಶಸ್ವಿಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಲಾಗಿದ್ದ 2,00,134 ಯುನಿಟ್‌ಗಳಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣ ಶೇಕಡ -13.05% ಇಳಿಕೆಯಾಗಿದೆ.
ಮೂರನೇ ಸ್ಥಾನವನ್ನು ಹೋಂಡಾ ಶೈನ್ (Honda Shine) ಬೈಕ್ ತನ್ನದಾಗಿಸಿಕೊಂಡಿದೆ. ಹೋದ ತಿಂಗಳು (ಫೆಬ್ರವರಿ - 2025) ಹೋಂಡಾ ಕಂಪನಿಯು 1,54,561 ಯುನಿಟ್ 'ಶೈನ್' ಮೋಟಾರ್‌ಸೈಕಲ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ. 2024ರ ಫೆಬ್ರವರಿಯಲ್ಲಿ ಮಾರಲ್ಪಟ್ಟ 322 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 8.26% ಬೆಳವಣಿಗೆಯಾಗಿದೆ.

ಸದ್ಯ 'ಶೈನ್' ಬೈಕ್ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಮುಂದಾಗಿದೆ. ಸೋಮವಾರ ಹೊಚ್ಚ ಹೊಸ 'ಹೋಂಡಾ ಶೈನ್ 100' ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿದೆ. ಇದು ರೂ.68,767 ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. 98.98 ಸಿಸಿ ಒಬಿಡಿ-2ಬಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ನಾಲ್ಕನೇ ಸ್ಥಾನದಲ್ಲಿ ಟಿವಿಎಸ್ ಜೂಪಿಟರ್ (TVS Jupiter) ಸ್ಕೂಟರ್ ಇದೆ. ಕಳೆದ ತಿಂಗಳು ಸರಿ ಸುಮಾರು 1,03,576 ಯುನಿಟ್ ಜೂಪಿಟರ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಫೆಬ್ರವರಿಯಲ್ಲಿ ಮಾರಲ್ಪಟ್ಟ 73,860 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ 40.23% ಪ್ರಗತಿಯಾಗಿದೆ. ಅದರಲ್ಲೂ 'ಜೂಪಿಟರ್ 110' ಸ್ಕೂಟರ್‌ನ್ನು ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ.

ನೂತನ ಟಿವಿಎಸ್ ಜುಪಿಟರ್ 110 ಸ್ಕೂಟರ್, ರೂ.76,691 (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. 113.3 ಸಿಸಿ ಒಬಿಡಿ-2ಬಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 53 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇಂಟಲಿಜೆಂಟ್ ಸ್ಟಾರ್ಟ್/ ಸ್ಟಾಪ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಐದನೇ ಸ್ಥಾನದಲ್ಲಿ ಬಜಾಜ್ ಪಲ್ಸರ್ (Bajaj Pulsar) ಮೋಟಾರ್‌ಸೈಕಲ್ ಇದ್ದು, ಕಳೆದ ತಿಂಗಳು (ಫೆಬ್ರವರಿ - 2025) ಬಜಾಜ್ ಆಟೋ ಕಂಪನಿಯು 87,902 ಯುನಿಟ್ 'ಪಲ್ಸರ್' ಬೈಕ್‌ಗಳನ್ನು ಮಾರಾಟ ಮಾಡಿದೆ. ಅದೇ 2024ರ ಫೆಬ್ರವರಿಯಲ್ಲಿ 1,12,544 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಅದಕ್ಕೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣ -21.90% ಕುಸಿತವಾಗಿದೆ.

ಆರನೇ ಸ್ಥಾನವನ್ನು ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಬೈಕ್ ತನ್ನದಾಗಿಸಿಕೊಂಡಿದೆ. ಈ ಫೆಬ್ರವರಿಯಲ್ಲಿ ಹೀರೋ ಮೋಟೊಕಾರ್ಪ್ ಬರೋಬ್ಬರಿ 70,581 ಹೆಚ್ಎಫ್ ಡಿಲಕ್ಸ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಮಾರಲಾಗಿದ್ದ 76,138 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ -7.30% ಹಿನ್ನೆಡೆಯಾಗಿದೆ.
ನೂತನ ಹೀರೋ ಹೆಚ್ಎಫ್ ಡಿಲಕ್ಸ್ ಮೋಟಾರ್‌ಸೈಕಲ್, ರೂ.62,468 ರಿಂದ ರೂ.70,348 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 97.2 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಅನಲಾಗ್ - ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಐಡಲ್ ಸ್ಟಾಪ್/ ಸ್ಟಾರ್ಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಏಳನೇ ಸ್ಥಾನದಲ್ಲಿ ಸುಜುಕಿ ಆಕ್ಸೆಸ್ (Suzuki Access) ಇದೆ. ಹೋದ ತಿಂಗಳು ಸುಜುಕಿ ಕಂಪನಿಯು ಸರಿ ಸುಮಾರು 59,039 ಯುನಿಟ್ ಆಕ್ಸೆಸ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. 2024ರ ಫೆಬ್ರವರಿಯಲ್ಲಿ ಮಾರಾಟಗೊಳಿಸಿದ 56,473 ಯುನಿಟ್‌ಗಳಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ 4.54% ಬೆಳವಣಿಗೆಯನ್ನು ಸಾಧಿಸಲಾಗಿದೆ.
ದೇಶೀಯವಾಗಿ ಖರೀದಿಗೆ ಲಭ್ಯವಿರುವ ಹೊಸ ಸುಜುಕಿ ಆಕ್ಸೆಸ್ 125 (Suzuki Access 125) ಸ್ಕೂಟರ್, ರೂ.81,700 (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಇದು 125 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 45 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ & ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಎಂಟನೇ ಸ್ಥಾನವನ್ನು ಟಿವಿಎಸ್ ಅಪಾಚೆ (TVS Apache) ಮೋಟಾರ್‌ಸೈಕಲ್ ತನ್ನದಾಗಿಸಿಕೊಂಡಿದೆ. ಕಳೆದ ತಿಂಗಳು (ಫೆಬ್ರವರಿ - 2025) ಬಜಾಜ್ ಆಟೋ ಕಂಪನಿಯು 37,954 ಯುನಿಟ್ 'ಅಪಾಚೆ' ಬೈಕ್‌ಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 34,593 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 9.72% ಪ್ರಗತಿಯಾಗಿದೆ.
ಒಂಬತ್ತನೇ ಸ್ಥಾನದಲ್ಲಿ ರೈತರ ನೆಚ್ಚಿನ ಟಿವಿಎಸ್ ಎಕ್ಸ್ಎಲ್ (TVS XL) ಮೊಪೆಡ್ ಇದೆ. ಹೋದ ತಿಂಗಳು 'ಟಿವಿಎಸ್ ಮೋಟಾರ್' 33,572 ಯುನಿಟ್ 'ಎಕ್ಸ್ಎಲ್'ನ್ನು ಮಾರಾಟ ಮಾಡಿದೆ. 2024ರ ಫೆಬ್ರವರಿಯಲ್ಲಿ ಮಾರಾಟಗೊಳಿಸಿದ 41,059 ಯುನಿಟ್‌ಗಳಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ -18.23% ಕುಸಿತವನ್ನು ದಾಖಲಿಸಲಾಗಿದೆ.
ಹತ್ತನೇ ಸ್ಥಾನವನ್ನು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 (Royal Enfield Classic 350) ಮೋಟಾರ್‌ಸೈಕಲ್ ತನ್ನದಾಗಿಸಿಕೊಂಡಿದೆ. ಈ ಫೆಬ್ರವರಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 30,641ಯುನಿಟ್ 'ಕ್ಲಾಸಿಕ್ 350' ಬೈಕ್‌ಗಳನ್ನು ಮಾರಾಟ ಮಾಡಿದೆ. 2024ರ ಫೆಬ್ರವರಿ ತಿಂಗಳಲ್ಲಿ ಮಾರಲ್ಪಟ್ಟ 28,310 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 8.23% ಬೆಳವಣಿಗೆಯಾಗಿದೆ.
ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮೋಟಾರ್‌ಸೈಕಲ್, ರೂ.1.93 ಲಕ್ಷದಿಂದ ರೂ.2.30 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 349.34 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 41.55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications