ಶೋರೂಂ ಮುಂದೆ ಸಾಲು ಕಟ್ಟಿದ ಗ್ರಾಹಕರು.. Hero Splendor ನಂಬರ್ 1, Honda Activa ನಂಬರ್ 2..!

ಜಿಎಸ್‌ಟಿ ಪರಿಷ್ಕರಣೆಗೊಳ್ಳುವ ಸುಳಿವು ಲಭ್ಯವಿದ್ದರೂ ಇದೇ ಆಗಸ್ಟ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳು (Two Wheelers) ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 12,50,328 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 11,26,138 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 11.03% ಪ್ರಗತಿಯಾಗಿದೆ. ಎಂದಿನಂತೆ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದ್ದರೆ, ಹೋಂಡಾ ಆಕ್ಟಿವಾ ಎರಡನೇ ಸ್ಥಾನದಲ್ಲಿದೆ.

ಹೀರೋ ಸ್ಪ್ಲೆಂಡರ್ (Hero Splendor):

ಈ ಆಗಸ್ಟ್‌ನಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಮೂಲಕ 'ಸ್ಪ್ಲೆಂಡರ್' ಪ್ರಪ್ರಥಮ ಸ್ಥಾನದಲ್ಲಿದೆ. ಸರಿ ಸುಮಾರು 3,11,698 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಆಗಸ್ಟ್ ತಿಂಗಳಲ್ಲಿ 3,02,934 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 7.39% ಬೆಳವಣಿಗೆಯಾಗಿದೆ.

Top 10 Two Wheelers August 2025 Sales Report Splendor Activa Shine Jupiter To Pulsar

ಹೋಂಡಾ ಆಕ್ಟಿವಾ (Honda Activa):

ಇದು ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಎರಡನೇ ಸ್ಥಾನದಲ್ಲಿದೆ. ಆಗಸ್ಟ್‌ನಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬರೋಬ್ಬರಿ 2,44,271 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2,27,458 ಯುನಿಟ್‌ಗಳನ್ನು ಮಾರಲಾಗಿದೆ. ಈ ಅಂಕಿಅಂಶಗಳನ್ನು ಗಮನಿಸಿದಾಗ ಮಾರಾಟ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇಕಡ 7.39% ಪ್ರಗತಿಯಾಗಿದೆ.

ಹೋಂಡಾ ಶೈನ್ (Honda Shine):

ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಬೈಕ್ ಆಗಿದ್ದು, ಮೂರನೇ ಸ್ಥಾನದಲ್ಲಿದೆ. ಈ ಆಗಸ್ಟ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 1,63,963 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಆಗಸ್ಟ್ ತಿಂಗಳಲ್ಲಿ 1,75,031 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಆದರೂ ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ 6.32% ಕುಸಿತವಾಗಿದೆ.

Top 10 Two Wheelers August 2025 Sales Report Splendor Activa Shine Jupiter To Pulsar

ಟಿವಿಎಸ್ ಜುಪಿಟರ್ (TVS Jupiter):

ಈ ಆಗಸ್ಟ್‌ನಲ್ಲಿ 'ಜುಪಿಟರ್' ಸ್ಕೂಟರ್ ಉತ್ತಮವಾಗಿಯೇ ಮಾರಾಟವಾಗಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಸರಿ ಸುಮಾರು 1,42,441 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 89,327 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶಗಳನ್ನು ಗಮನಿಸಿದಾಗ ಮಾರಾಟ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇಕಡ 59.43% ಪ್ರಗತಿಯಾಗಿದೆ.

ಬಜಾಜ್ ಪಲ್ಸರ್ (Bajaj Pulsar):

ಇದು ಯುವಕರ ನೆಚ್ಚಿನ ಮೋಟಾರ್‌ಸೈಕಲ್ ಆಗಿದ್ದು, ಐದನೇ ಸ್ಥಾನದಲ್ಲಿದೆ. ಆಗಸ್ಟ್‌ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬರೋಬ್ಬರಿ 1,09,384 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಆಗಸ್ಟ್‌ನಲ್ಲಿ 67,849 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 61.21% ಬೆಳವಣಿಗೆಯಾಗಿದೆ.

Top 10 Two Wheelers August 2025 Sales Report Splendor Activa Shine Jupiter To Pulsar

ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe):

ಮಧ್ಯಮ ವರ್ಗದ ಗ್ರಾಹಕರ ಇಷ್ಟದ ಬೈಕ್ ಎಂದೇ ಖ್ಯಾತಿ ಗಳಿಸಿದ್ದು, ಆರನೇ ಸ್ಥಾನದಲ್ಲಿದೆ. ಈ ಆಗಸ್ಟ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿದೆ. ಒಟ್ಟು 89,762 ಯುನಿಟ್‌ಗಳನ್ನು ಮಾರಲಾಗಿದೆ. 2024ರ ಇದೇ ಅವಧಿಯಲ್ಲಿ 84,607 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಅಂಶಗಳನ್ನು ಲೆಕ್ಕಹಾಕಿದಾಗ ಮಾರಾಟ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇಕಡ 6.09% ಅಭಿವೃದ್ಧಿಯಾಗಿದೆ.

ಸುಜುಕಿ ಆಕ್ಸೆಸ್ (Suzuki Access):

ಈ ಆಗಸ್ಟ್‌ನಲ್ಲಿ 'ಆಕ್ಸೆಸ್' ಉತ್ತಮವಾಗಿ ಮಾರಾಟಗೊಂಡಿದೆ. ಏಳನೇ ಸ್ಥಾನದಲ್ಲಿದೆ. ಸರಿ ಸುಮಾರು 60,807 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಆಗಸ್ಟ್‌ನಲ್ಲಿ 62,433 ಯುನಿಟ್‌ಗಳನ್ನು ಮಾರಲಾಗಿದೆ. ಆದರೂ ಈ ಈ ಅಂಕಿಸಂಖ್ಯೆಯನ್ನು ಗಮನಿಸದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 2.06% ಇಳಿಕೆಯಾಗಿದೆ.

ಟಿವಿಎಸ್ ಅಪಾಚೆ (TVS Apache) ಎಂಟನೇ ಸ್ಥಾನದಲ್ಲಿದೆ. ಒಟ್ಟು 45,038 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಟಿವಿಎಸ್ ಎಕ್ಸ್ಎಲ್ (TVS XL) ಒಂಬತ್ತನೇ ಸ್ಥಾನದಲ್ಲಿದ್ದು, 43,886 ಯುನಿಟ್‌ಗಳನ್ನು ಮಾರಲಾಗಿದೆ. ಬಜಾಜ್ ಪ್ಲಾಟಿನಾ (Bajaj Platina) ಹತ್ತನೇ ಸ್ಥಾನದಲ್ಲಿದ್ದು, 39,110 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ.

Article Published On: Monday, September 29, 2025, 11:13 [IST]
English summary
Top 10 two wheelers august 2025 sales report splendor activa shine jupiter to pulsar
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+