ಕಾಲೇಜು ಯುವತಿಯರಿಗಾಗಿ ಕೈಗೆಟುಕುವ ಬೆಲೆಯಲ್ಲಿ ಸಿಗುವ ಟಾಪ್-5 ಬೆಸ್ಟ್ ಸ್ಕೂಟರ್‌ಗಳು

ಕಾಲೇಜು ಯುವತಿಯರು ಹಾಗೂ ಆಫೀಸ್ ತೆರಳುವ ಮಹಿಳೆಯರಿಗಾಗಿ ಹಗುರವಾದ ವಿನ್ಯಾಸ, ಕಡಿಮೆ ಸೀಟ್ ಎತ್ತರ, ಸೊಗಸಾದ ಡಿಸೈನ್, ಉತ್ತಮ ಮೈಲೇಜ್ ಮತ್ತು ಕೈಗೆಟುಕುವ ಬೆಲೆಯಲ್ಲಿ ಸಿಗುವ ಬೆಸ್ಟ್ ಸ್ಕೂಟರ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸುಲಭವಾಗಿ ಓಡಿಸಲು ಇಷ್ಟಪಡುವ ಜನಪ್ರಿಯ ಮಾಡಲ್‌ಗಳನ್ನು ಆಯ್ಕೆ ಮಾಡಲಾಗಿದೆ. ಹೋಂಡಾ ಆಕ್ಟಿವಾದಿಂದ ಹಿಡಿದು ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ನಂತಹ ಬಜೆಟ್ ಸ್ನೇಹಿ, ವಿಶ್ವಾಸಾರ್ಹ ದ್ವಿಚಕ್ರ ವಾಹನಗಳವರೆಗೆ ಜನಪ್ರಿಯ ಮಾಡಲ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್: ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ (Hero Pleasure Plus Xtec) ಝಡ್‌ಎಕ್ಸ್ ಬೇಸ್ ವೇರಿಯೆಂಟ್ ಬೆಲೆಯು ರೂ. 74,361 ರಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಈ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಸ್ಕೂಟರ್ 106 ಕೆ.ಜಿ ತೂಗುತ್ತದೆ ಮತ್ತು 4.8 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಲೀಟರ್‌ಗೆ 50 kmpl ಮೈಲೇಜ್ ನೀಡುತ್ತದೆ. ಸೀಟ್ ಹೈಟ್ ವಿಷಯಕ್ಕೆ ಬಂದರೆ ಯುವತಿಯರಿಗೆ ಸುಲಭವಾಗಿ ಓಡಿಸಲು 765 mm ನೀಡಲಾಗಿದೆ.

top-5-best-affordable-scooters-for-college-girls

ಟಿವಿಎಸ್ ಜೆಸ್ಟ್ 110: ಟಿವಿಎಸ್ ಜೆಸ್ಟ್ 110 (TVS Zest 110) ಬೇಸ್‌ ವೇರಿಯೆಂಟ್ ರೂ. 69,753 ರಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಈ ಜೆಸ್ಟ್ 110 ಸ್ಕೂಟರ್ 103 ಕೆ.ಜಿ ತೂಗುತ್ತದೆ ಮತ್ತು 5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಲೀಟರ್‌ಗೆ 45 kmpl ಮೈಲೇಜ್ ನೀಡುತ್ತದೆ. ಸೀಟ್ ಹೈಟ್ ವಿಷಯಕ್ಕೆ ಬಂದರೆ ಯುವತಿಯರಿಗೆ ಸುಲಭವಾಗಿ ಓಡಿಸಲು 760 mm ನೀಡಲಾಗಿದೆ.

ಯಮಹಾ ಫ್ಯಾಸಿನೊ 125: ಹೊಸ ಯಮಹಾ ಫ್ಯಾಸಿನೊ 125 (Yamaha Fascino 125) ಬೆಲೆ ರೂ. 76,174 ರಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಈ ಫ್ಯಾಸಿನೊ 125 ಸ್ಕೂಟರ್ 99 ಕೆ.ಜಿ ತೂಗುತ್ತದೆ ಮತ್ತು 5.2 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಲೀಟರ್‌ಗೆ 49 kmpl ಮೈಲೇಜ್ ನೀಡುತ್ತದೆ. ಸೀಟ್ ಹೈಟ್ ವಿಷಯಕ್ಕೆ ಬಂದರೆ ಎತ್ತರದ ಯುವತಿಯರಿಗೂ ಹೊಂದಿಕೊಳ್ಳುವಂತೆ 780 mm ನೀಡಲಾಗಿದೆ.

top-5-best-affordable-scooters-for-college-girls

ಹೋಂಡಾ ಆಕ್ಟಿವಾ: ಹೋಂಡಾ ಆಕ್ಟಿವಾ (Honda Activa) ಸ್ಟ್ಯಾಂಡರ್ಡ್ ಆರಂಭಿ ಬೆಲೆ ರೂ. 77,758 ರಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಈ ಆಕ್ಟಿವಾ ಸ್ಕೂಟರ್ 106 ಕೆಜಿ ತೂಗುತ್ತದೆ ಮತ್ತು 5.3 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಲೀಟರ್‌ಗೆ 47 kmpl ಮೈಲೇಜ್ ನೀಡುತ್ತದೆ. ಸೀಟ್ ಹೈಟ್ ವಿಷಯಕ್ಕೆ ಬಂದರೆ ಎತ್ತರದ ಯುವತಿಯರಿಗೂ ಹೊಂದಿಕೊಳ್ಳುವಂತೆ 764 mm mm ನೀಡಲಾಗಿದೆ.

ಸುಜುಕಿ ಆಕ್ಸೆಸ್ 125: ಸುಜುಕಿ ಆಕ್ಸೆಸ್ 125 (Suzuki Access 125) ಸ್ಟ್ಯಾಂಡರ್ಡ್ ಬೆಲೆಯು ರೂ. 79,958 ರಿಂದ ಪ್ರಾರಂಭವಾಗುತ್ತದೆ. ಈ ಆಕ್ಸೆಸ್ 125 ಸ್ಕೂಟರ್ 106 ಕೆ.ಜಿ ತೂಗುತ್ತದೆ ಮತ್ತು 5.3 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, ಪ್ರತಿ ಲೀಟರ್‌ಗೆ 47 kmpl ಮೈಲೇಜ್ ನೀಡುತ್ತದೆ. ಸೀಟ್ ಹೈಟ್ ವಿಷಯಕ್ಕೆ ಬಂದರೆ ಎತ್ತರದ ಯುವತಿಯರಿಗೂ ಹೊಂದಿಕೊಳ್ಳುವಂತೆ 773 mm ನೀಡಲಾಗಿದೆ.

top-5-best-affordable-scooters-for-college-girls

ಹೀರೋ ಪ್ಲೆಷರ್ ಪ್ಲಸ್ ಎಕ್ಸ್‌ಟೆಕ್ ಝಡ್‌ಎಕ್ಸ್ ತನ್ನ ಹಗುರವಾದ ನಿರ್ಮಾಣ ಮತ್ತು ವಿದ್ಯಾರ್ಥಿ-ಕೇಂದ್ರಿತ ವೈಶಿಷ್ಟ್ಯಗಳಿಂದಾಗಿ ಅಗ್ರಸ್ಥಾನದಲ್ಲಿದೆ, ಕಾಲೇಜು ಕ್ಯಾಂಪಸ್‌ಗಳಲ್ಲಿ ಸಂಚರಿಸುವ ಎತ್ತರ ಕಡಿಮೆ ಇರುವ ಸವಾರರಿಗೆ ಇದು ಸೂಕ್ತವಾಗಿದೆ. ಹೋಂಡಾ ಆಕ್ಟಿವಾ ಹೆಚ್ಚಿನ ಮರು - ಮಾರಾಟ ಮೌಲ್ಯದೊಂದಿಗೆ ಸಾಟಿಯಿಲ್ಲದ ವಿಶ್ವಾಸಾರ್ಹತೆಯನ್ನು ನೀಡುತ್ತದೆ, ಇದು ದೈನಂದಿನ 15-30 ಕಿ.ಮೀ ಸವಾರಿಗಳಿಗೆ ಸೂಕ್ತವಾಗಿದೆ.

ಎಲ್ಲಾ ಮಾಡಲ್‌ಗಳು ಸೈಡ್-ಸ್ಟ್ಯಾಂಡ್ ಸೂಚಕಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಸುರಕ್ಷತೆಯನ್ನು ನೀಡುತ್ತವೆ. ಇವಿ ಆಸಕ್ತಿರು ಇದ್ದರೆ ಎಥರ್ ರಿಜ್ಟಾವನ್ನು ಪರಿಗಣಿಸಿ, ಆದರೆ ಕೈಗೆಟುಕುವ ಬೆಲೆಯಲ್ಲಿ ನೋಡುತ್ತಿದ್ದರೆ ಪೆಟ್ರೋಲ್ ಸ್ಕೂಟರ್‌ಗಳು ಬೆಸ್ಟ್ ಆಯ್ಕೆಯಾಗಿವೆ. ನಿಮ್ಮ ಎತ್ತರಕ್ಕೆ ಸರಿ ಹೊಂದುತ್ತವೆಯೇ ಎಂಬುದನ್ನು ಪರಿಶೀಲಿಸಲು ಡೀಲರ್ ಬಳಿ ಟೆಸ್ಟ್ ರೈಡ್ ಮಾಡಿದ ನಂತರ ಖರೀದಿಸುವುದು ಉತ್ತಮ.

More from DriveSpark

Article Published On: Tuesday, December 9, 2025, 10:20 [IST]
English summary
Top 5 best affordable scooters for college girls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+