ಹೀರೋ ಸ್ಪ್ಲೆಂಡರ್‌ ನಂ.1.. ಹೋಂಡಾ ಶೈನ್ ಸೆಕೆಂಡ್.. 2025ರಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾದ 5 ಬೈಕ್‌ಗಳಿವು!

ಭಾರತವು ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಂದಿದೆ. ಕೈಗೆಟುಕುವ ಬೆಲೆಯಲ್ಲಿ ವಿವಿಧ ಬೈಕ್‌ಗಳು ಖರೀದಿಗೆ ಲಭ್ಯವಿವೆ. 2025 ವಾಹನ ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಿವೆ. ಇಲ್ಲಿ 'ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್' ಪ್ರಕಾರ, ಈ ವರ್ಷ (ಜನವರಿ - ನವೆಂಬರ್) ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 5 ಬೈಕ್‌ಗಳು ಯಾವುದೆಂದು ತಿಳಿಸಿಕೊಟ್ಟಿದ್ದೇವೆ.

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus):

ಇದು ಜನಪ್ರಿಯ ಮೋಟಾರ್‌ಸೈಕಲ್‌ ಆಗಿದ್ದು, 2025ರಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಮೊದಲ ಸ್ಥಾನದಲ್ಲಿದೆ. ಒಟ್ಟು 30,75,338 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 31,19,147 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಅಂದರೆ, ಶೇಕಡ 1.40% ಕುಸಿತವಾಗಿದೆ.

Top 5 Highest Selling Bikes In 2025 Splendor Plus Shine 125 HF Deluxe Pulsar And Apache

ನೂತನ 'ಸ್ಪ್ಲೆಂಡರ್ ಪ್ಲಸ್' ರೂ.73,946 ರಿಂದ ರೂ.76,353 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 97.2-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 70 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

ಹೋಂಡಾ ಶೈನ್ 125 (Honda Shine 125):

ಈ ಬೈಕ್‌ನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. 2025ರಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಾರಾಟ ಮಾಡಲಾಗಿದ್ದು, ಎರಡನೇ ಸ್ಥಾನದಲ್ಲಿದೆ. ಸರಿ ಸುಮಾರು 15,93,966 ಯುನಿಟ್‌ಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸಲಾಗಿದೆ. ಅದೇ ರೀತಿಯಲ್ಲಿ 2024ರಲ್ಲಿ 14,78,105 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿ ಅಂಶವನ್ನು ವಿಶ್ಲೇಷಿಸಿದಾಗ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡ 7.83% ಪ್ರಗತಿಯಾಗಿದೆ.

Top 5 Highest Selling Bikes In 2025 Splendor Plus Shine 125 HF Deluxe Pulsar And Apache

ಹೊಸ 'ಶೈನ್' ಮೋಟಾರ್‌ಸೈಕಲ್‌ ರೂ.80,542 ರಿಂದ ರೂ.84,902 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 123.94 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 50 ರಿಂದ 60 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe):

ಇದೊಂದು ಮಧ್ಯಮ ವರ್ಗದ ಜನರ ನೆಚ್ಚಿನ ಬೈಕ್ ಎಂದೇ ಹೆಸರುವಾಸಿಯಾಗಿದೆ. 2025ರಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಮೂರನೇ ಸ್ಥಾನದಲ್ಲಿದೆ. ಬರೋಬ್ಬರಿ 9,59,278 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 9,43,633 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ 1.65% ಬೆಳವಣಿಗೆಯಾಗಿದೆ. ನೂತನ 'ಹೆಚ್ಎಫ್ ಡಿಲಕ್ಸ್' ರೂ.55,992 ರಿಂದ ರೂ. 68,485 (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ.

Top 5 Highest Selling Bikes In 2025 Splendor Plus Shine 125 HF Deluxe Pulsar And Apache

ಬಜಾಜ್ ಪಲ್ಸರ್ 125 ರೇಂಜ್ (Bajaj Pulsar 125 Range):

ಈ ಮೋಟಾರ್‌ಸೈಕಲ್‌ನ್ನು ಯುವಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. 2025ರಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಒಟ್ಟು 7,35,836 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರಲ್ಲಿ 7,80,384 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 5.70% ಇಳಿಮುಖವಾಗಿದೆ. ನೂತನ 'ಪಲ್ಸರ್ 125' ಮೋಟಾರ್‌ಸೈಕಲ್‌ ಸ್ಟ್ಯಾಂಡರ್ಡ್ ಪಲ್ಸರ್ 125, ಬಜಾಜ್ ಪಲ್ಸರ್ ಎನ್125 ಹಾಗೂ ಪಲ್ಸರ್ ಎನ್ಎಸ್125 ಎಂಬ ರೂಪದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.85,633 ರಿಂದ ರೂ.92,182 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಟಿವಿಎಸ್ ಅಪಾಚೆ 150-200 ಸಿಸಿ ರೇಂಜ್ (TVS Apache 150-200 CC Range):

ಇದು ಜಗಮೆಚ್ಚಿದ ಬೈಕ್ ಆಗಿದೆ. 2025ರಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಐದನೇ ಸ್ಥಾನದಲ್ಲಿದೆ. ಬರೋಬ್ಬರಿ 4,99,110 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 4,08,706 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಿಸಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 22.11% ಪ್ರಗತಿಯಾಗಿದೆ. ಈ ಬೈಕ್ ಹಲವು ವಿಧದಲ್ಲಿ ಲಭ್ಯವಿದೆ. ₹1.01 ಲಕ್ಷದಿಂದ ರೂ.1.41 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

More from DriveSpark

Article Published On: Wednesday, December 24, 2025, 11:23 [IST]
English summary
Top 5 highest selling bikes in 2025 splendor plus shine 125 hf deluxe pulsar and apache
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+