ನೋಡೋಕೆ ಚೆಂದ.. ಹಳ್ಳಿ & ಪಟ್ಟಣಕ್ಕೂ ಸೈ: ಅತ್ಯುತ್ತಮ 5 ಪ್ರೀಮಿಯಂ ಸ್ಕೂಟರ್‌ಗಳಿವು.. ಬೆಲೆ ಎಷ್ಟು?

ದಿನನಿತ್ಯದ ಬಳಕೆಗಾಗಿ ಸ್ಕೂಟರ್‌ಗಳು ತೀರಾ ಅತ್ಯಗತ್ಯವಾಗಿವೆ. ಇವುಗಳಲ್ಲಿ ಮಹಿಳೆಯರು ಹಾಗೂ ಪುರುಷರು ಕೂಡ ಸುಲಭವಾಗಿ ಸಂಚರಿಸಬಹುದು. ನೀವು ನೋಡುವುದಕ್ಕೆ ಹೆಚ್ಚು ಆಕರ್ಷಕವಾಗಿದ್ದು, ಹಳ್ಳಿ ಹಾಗೂ ಪಟ್ಟಣ ಪ್ರದೇಶದಲ್ಲಿ ಉಪಯೋಗಿಸಲು ಹೊಚ್ಚ ಹೊಸ ಪ್ರೀಮಿಯಂ ಸ್ಕೂಟರ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ರೂ.2 ಲಕ್ಷದೊಳಗೆ ದೊರೆಯುವ ಟಿವಿಎಸ್ ಎನ್‌ಟಾರ್ಕ್ 125, ಹೋಂಡಾ ಡಿಯೋ 125, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್, ಯಮಹಾ ಏರೋಕ್ಸ್ 155 ಮತ್ತು ಹೀರೋ ಜೂಮ್ 160 ಮಾಡೆಲ್‌ಗಳು ಹೆಚ್ಚು ಸೂಕ್ತವಾಗಬಲ್ಲವು. ಬನ್ನಿ.. ಈ ಸ್ಕೂಟರ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಟಿವಿಎಸ್ ಎನ್‌ಟಾರ್ಕ್ 125 (TVS Ntorq 125): ಈ ಸ್ಕೂಟರ್ ರೂ.86,841 ರಿಂದ ರೂ.1.06 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 124.8 ಸಿಸಿ ಏರ್-ಕೋಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 9.38 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 10. 6 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

Top 5 Premium Scooters Under Rs 2 Lakh Ntorq Dio Burgman Street Aerox Xoom

ಈ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ 47 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಹ್ಯಾಲೊಜೆನ್ ಹೆಡ್‌ಲೈಟ್, ಎಲ್ಇಡಿ ಟೈಲ್ ಲೈಟ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನ್ನು ಹೊಂದಿದೆ. ಇದು ಕಾಲ್ & ಎಸ್ಎಂಎಸ್ ಅಲರ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ಇನ್ನಿತರೇ ಮಾಹಿತಿಯನ್ನು ಒದಗಿಸುತ್ತದೆ.

ಹೊಸ ಟಿವಿಎಸ್ ಎನ್‌ಟಾರ್ಕ್ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಮಾನೋಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ ಸವಾರರ ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ. ಈ ಸ್ಕೂಟರ್ 111 ಕೆಜಿ ತೂಕವಿದ್ದು, 5.8 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

Top 5 Premium Scooters Under Rs 2 Lakh Ntorq Dio Burgman Street Aerox Xoom

ಹೋಂಡಾ ಡಿಯೋ 125 (Honda Dio 125): ಇದು ಕೂಡ ಪ್ರಖ್ಯಾತ ಸ್ಕೂಟರ್ ಆಗಿದೆ. ರೂ.86,851 ರಿಂದ ರೂ.93,750 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 123.92 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದ್ದು, 8.28 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 10.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ.

ಈ ಡಿಯೋ ಸ್ಕೂಟರ್ 48 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಪಡೆದಿದೆ. ಅದಕ್ಕೆ ತಕ್ಕಂತೆ ಸ್ಪೋರ್ಟ್ಸ್ ರೆಡ್, ಪರ್ಲ್ ನೈಟ್‌ಸ್ಟಾರ್ ಬ್ಲ್ಯಾಕ್, ಪರ್ಲ್ ಸೈರನ್ ಬ್ಲೂ & ಪರ್ಲ್ ಡೀಪ್ ಗ್ರೌಂಡ್ ಗ್ರೇ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

Top 5 Premium Scooters Under Rs 2 Lakh Ntorq Dio Burgman Street Aerox Xoom

ನೂತನ ಹೋಂಡಾ ಡಿಯೋ 125 ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್‌ & ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಜೊತೆಗೆ ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ. ಈ ಸ್ಕೂಟರ್ 104 ಕೆಜಿ ತೂಕವಿದ್ದು, 5.3 ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ (Suzuki Burgman Street): ಈ ಸ್ಕೂಟರ್ ರೂ.95,800 ದಿಂದ ರೂ.1.16 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 124 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 8.7 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 10 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಹೊಸ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಸ್ಕೂಟರ್, 48 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದು ಪರ್ಲ್ ಮಿರಾಜ್ ವೈಟ್, ಮೆಟಾಲಿಕ್ ಮ್ಯಾಟ್ ಟೈಟಾನಿಯಂ ಸಿಲ್ವರ್, ಗ್ಲಾಸಿ ಗ್ರೇ ಮತ್ತು ಪರ್ಲ್ ಮ್ಯಾಟ್ ಶ್ಯಾಡೋ ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ ಲ್ಯಾಂಪ್, ಸೈಲೆಂಟ್ ಸ್ಟಾರ್ಟರ್ ಮತ್ತು ಆಟೋಮೆಟಿಕ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Top 5 Premium Scooters Under Rs 2 Lakh Ntorq Dio Burgman Street Aerox Xoom

ಈ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಸಿಂಗಲ್ ಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. ನೂತನ ಬರ್ಗ್‌ಮ್ಯಾನ್ ಸ್ಟ್ರೀಟ್ ಸ್ಕೂಟರ್ 110 ಕೆಜಿ ತೂಕವಿದ್ದು, 5.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.

ಯಮಹಾ ಏರೋಕ್ಸ್ 155 (Yamaha Aerox 155): ಇದು ಸಹ ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. 155 ಸಿಸಿ ಲಿಕ್ವಿಡ್ ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 15 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 13.9 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

Top 5 Premium Scooters Under Rs 2 Lakh Ntorq Dio Burgman Street Aerox Xoom

ನೂತನ ಯಮಹಾ ಏರೋಕ್ಸ್ 155 ಸ್ಕೂಟರ್, 48.62 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಮೆಟಾಲಿಕ್ ಬ್ಲ್ಯಾಕ್, ಗ್ರೇ ವರ್ಮಿಲಿಯನ್, ಸಿಲ್ವರ್ ಮತ್ತು ರೇಸಿಂಗ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಸ್ಕೂಟರ್ 126 ಕೆಜಿ ತೂಕವಿದ್ದು, 5.5 ಲೀ.ನ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.

ಹೀರೋ ಜೂಮ್ 160 (Hero Xoom 160): ಈ ಸ್ಕೂಟರ್ ರೂ.1.49 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ದೊರೆಯುತ್ತದೆ. 156 ಸಿಸಿ ಸಿಂಗಲ್- ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 14 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6,500 ಆರ್‌ಪಿಎಂನಲ್ಲಿ 13.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ

ಈ ಹೀರೋ ಜೂಮ್ 160 ಸ್ಕೂಟರ್, 40 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌, ಐ3ಎಸ್ ಸಿಸ್ಟಮ್, ಸೈಲೆಂಟ್ ಸ್ಟಾರ್ಟರ್, ಕೀ-ಲೆಸ್ ಇಗ್ನಿಷನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕಾಸ್ಟ್ ವೋಲ್ಕಾನಿಕ್ ಗ್ರೇ, ಕಾಸ್ಟ್ ಪರ್ಲ್ ಸಮ್ಮಿಟ್ ವೈಟ್ ಮತ್ತು ಕಾಸ್ಟ್ ಕ್ಯಾನ್ಯನ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

ನೂತನ ಜೂಮ್ 160 ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್-ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆಗಾಗಿ ಡಿಸ್ಕ್ ಬೈಕ್‌ಗಳನ್ನು ಪಡೆದಿದೆ. ಈ ಸ್ಕೂಟರ್ 142 ಕೆಜಿ ತೂಕವಿದ್ದು, 7 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 8, 2025, 14:40 [IST]
English summary
Top 5 premium scooters under rs 2 lakh ntorq dio burgman street aerox xoom
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+