ಹೀರೋದ ಅಬ್ಬರ... 70 ಕಿ.ಮೀ ಮೈಲೇಜ್‌ನ ಸ್ಪ್ಲೆಂಡರ್ ಬೈಕ್ ನಂಬರ್ 1.. ಸೆಕೆಂಡ್ ಯಾವುದು ಗೊತ್ತಾ?
ಭಾರತವು ವಿಶ್ವದಲ್ಲಿಯೇ ಅತಿದೊಡ್ಡ ದ್ವಿಚಕ್ರ ವಾಹನ (Two Wheeler) ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ದೇಶ - ವಿದೇಶಿ ಕಂಪನಿಗಳ ಹತ್ತಾರು ಸ್ಕೂಟರ್ ಹಾಗೂ ಬೈಕ್‌ಗಳು ಮಾರಾಟವಾಗುತ್ತಿವೆ. ಇತ್ತೀಚೆಗೆ ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದ ಅಂಕಿ-ಅಂಶದ ವಿವರವನ್ನು ವಿವಿಧ ವಾಹನ ತಯಾರಕ ಕಂಪನಿಗಳು ಪ್ರಕಟಿಸಿದ್ದು, ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದೆ. ಉಳಿದ ಸ್ಥಾನಗಳಲ್ಲಿ ಕ್ರಮವಾಗಿ ಹೋಂಡಾ ಶೈನ್, ಹೋಂಡಾ ಆಕ್ಟಿವಾ, ಟಿವಿಎಸ್ ಜುಪಿಟರ್ ಹಾಗೂ ಬಜಾಜ್ ಪಲ್ಸರ್ ಮಾಡೆಲ್‌ಗಳು ಪ್ರಾಬಲ್ಯವನ್ನು ಸಾಧಿಸಿವೆ.
ಕಳೆದ ತಿಂಗಳು (ಜನವರಿ - 2025) ಹೀರೋ ಮೋಟೊಕಾರ್ಪ್ ಸರಿ ಸುಮಾರು 2,59,431 ಯುನಿಟ್ ಸ್ಪ್ಲೆಂಡರ್ (Splendor) ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ ಮಾರಾಟ ಮಾಡಿದ 2,55,122 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 1.69% ಬೆಳವಣಿಗೆಯನ್ನು ಸಾಧಿಸಿದೆ. ಈ ಮೂಲಕ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ವಿವಿಧ ರೂಪದಲ್ಲಿ ಖರೀದಿಗೆ ದೊರೆಯುತ್ತದೆ. ಅವುಗಳೆಂದರೆ, ಸ್ಪ್ಲೆಂಡರ್ ಪ್ಲಸ್, ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಮತ್ತು ಹೀರೋ ಸೂಪರ್ ಸ್ಪ್ಲೆಂಡರ್. ಇವುಗಳು ಕನಿಷ್ಠ ರೂ.76,356 ದಿಂದ ಗರಿಷ್ಠ ರೂ.86,298 (ಎಕ್ಸ್-ಶೋರೂಂ) ದರವನ್ನು ಹೊಂದಿವೆ. ಜೊತೆಗೆ 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೂಡ ನೀಡಬಲ್ಲವು.
ಎರಡನೇ ಸ್ಥಾನದಲ್ಲಿ ಹೋಂಡಾ ಶೈನ್ (Honda Shine) ಬೈಕ್ ಇದೆ. ಈ ಜನವರಿಯಲ್ಲಿ ಹೋಂಡಾ ಕಂಪನಿಯು 1,68,290 ಯುನಿಟ್ ಶೈನ್ ಬೈಕ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ. 2024ರ ಜನವರಿಯಲ್ಲಿ ಮಾರಾಟಗೊಳಿಸಿದ 1,45,252 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 15.86% ಪ್ರಗತಿಯಾಗಿದೆ.

ಮೂರನೇ ಸ್ಥಾನವನ್ನು ಹೋಂಡಾ ಆಕ್ಟಿವಾ (Honda Activa) ಸ್ಕೂಟರ್ ತನ್ನದಾಗಿಸಿಕೊಂಡಿದೆ. ಹೋದ ತಿಂಗಳು (ಜನವರಿ - 2025) 1,66,739 ಯುನಿಟ್ ಆಕ್ಟಿವಾಗಳನ್ನು ಮಾರಾಟ ಮಾಡಲಾಗಿದೆ. ಆದರೂ 2024ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 1,73,760 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 4.04% ಕುಸಿತವಾಗಿದೆ.
ನಾಲ್ಕನೇ ಸ್ಥಾನದಲ್ಲಿ ಟಿವಿಎಸ್ ಜುಪಿಟರ್ (TVS Jupiter) ಸ್ಕೂಟರ್ ಇದ್ದು, ಕಳೆದ ತಿಂಗಳು 1,07,847 ಜುಪಿಟರ್ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಲಾಗಿದೆ. 2024ರ ಜನವರಿಯಲ್ಲಿ ಮಾರಾಟ ಮಾಡಿದ 74,225 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಅತಿಹೆಚ್ಚು ಅಂದರೆ ಶೇಕಡ 45.30% ಬೆಳವಣಿಯಾಗಿದೆ.

ಐದನೇ ಸ್ಥಾನವನ್ನು ಬಜಾಜ್ ಪಲ್ಸರ್ (Bajaj Pulsar) ತನ್ನದಾಗಿಸಿಕೊಂಡಿದೆ. ಈ ಜನವರಿಯಲ್ಲಿ ಬಜಾಜ್ ಕಂಪನಿಯು ಬರೋಬ್ಬರಿ 104,081 ಯುನಿಟ್ ಪಲ್ಸರ್ ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಲಾಗಿದೆ. ಆದರೂ 2024ರ ಇದೇ ಅವಧಿಯಲ್ಲಿ ಮಾರಾಟಗೊಳಿಸಿದ 1,28,883 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 19.24% ಹಿನ್ನೆಡೆಯಾಗಿದೆ.
ಒಟ್ಟಾರೆ ಈ ಮಾರಾಟದ ಅಂಕಿಅಂಶದ ವರದಿಯನ್ನು ಗಮನಿಸಿದಾಗ ಹೀರೋ ಸ್ಪ್ಲೆಂಡರ್ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ದ್ವಿಚಕ್ರ ವಾಹನವಾಗಿ ಹೊರಹೊಮ್ಮಿದ್ದು, ತನಗೆ ಯಾವುದೇ ಸರಿ ಸರಿಯಿಲ್ಲದಂತೆ ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದೆ. ಎರಡನೇ ಸ್ಥಾನದಲ್ಲಿರುವ ಹೋಂಡಾ ಶೈನ್ ಪ್ರಗತಿಯು ಉತ್ತಮವಾಗಿದೆ. ಆದರೆ, ಹೋಂಡಾ ಆಕ್ಟಿವಾ ಬೆಳವಣಿಗೆ ಮಾತ್ರ ಕೊಂಚ ಮಟ್ಟಿಗೆ ಕುಸಿತವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications