ರೂ.90000ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 7 ಮೋಟಾರ್‌ಸೈಕಲ್‌ಗಳಿವು.. 70 Km ಮೈಲೇಜ್!

ಅದು ನಗರವೇ ಆಗಿರಲಿ.. ಹಳ್ಳಿಯೇ ಆಗಿರಲಿ.. ದಿನಬಳಕೆಗಾಗಿ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ, ಯಾವ ಬೈಕ್‌ನ್ನು ಕೊಂಡುಕೊಳ್ಳಬೇಕು ಎಂಬುದರ ಬಗ್ಗೆ ಹಲವು ಗೊಂದಲವಿರುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ರೂ.90,000ಕ್ಕಿಂತ ಕಡಿಮೆ ಬೆಲೆಗೆ 7 ಅತ್ಯುತ್ತಮ ಮೋಟಾರ್‌ಸೈಕಲ್‌ಗಳು ಲಭ್ಯವಿವೆ. ಇವುಗಳು ಗರಿಷ್ಠ ಮೈಲೇಜ್‌ಗೂ ಹೆಸರುವಾಸಿಯಾಗಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus):

ಇದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದೆ. ಮಧ್ಯಮ ವರ್ಗದ ಕುಟುಂಬಗಳಿಗೆ ತುಂಬಾ ಉಪಯುಕ್ತವಾಗಿದೆ. ರೂ.79,000 ರಿಂದ ರೂ.85,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 97.2 ಸಿಸಿ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

Top 7 Motorcycles Under 90 000 Rupees India Splendor Platina Sport To Radeon

ಬಜಾಜ್ ಪ್ಲಾಟಿನಾ 100 (Bajaj Platina 100):

ಈ ಬೈಕ್ ನಗರ ಪ್ರದೇಶಗಳಲ್ಲಿ ಓಡಾಟಕ್ಕೆ ಹೇಳಿ ಮಾಡಿಸಿದಂತಿದೆ. ಉತ್ತಮವಾದ ಇಂಧನ ದಕ್ಷತೆಯನ್ನು ಹೊಂದಿದೆ. ಇದರೊಂದಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ. ರೂ.68,742 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 102 ಸಿಸಿ ಪೆಟ್ರೋಲ್ ಎಂಜಿನ್‌ ಒಳಗೊಂಡಿದ್ದು, 70 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

ಟಿವಿಎಸ್ ಸ್ಪೋರ್ಟ್ (TVS Sport):

ಈ ಮೋಟಾರ್‌ಸೈಕಲ್‌ನ್ನು ಯುವಜನರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ನೋಡಲು ಕೂಡ ಅಷ್ಟೇ ಚೆನ್ನಾಗಿದ್ದು, ಎಲ್ಲರನ್ನು ಆಕರ್ಷಿಸುತ್ತದೆ. ರೂ.60281 ರಿಂದ ರೂ.61631 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 109.7 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 70 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

Top 7 Motorcycles Under 90 000 Rupees India Splendor Platina Sport To Radeon

ಹೀರೋ ಎಚ್ಎಫ್ 100 (Hero HF 100):

ಇದೊಂದು ಪ್ರಖ್ಯಾತ ಬೈಕ್ ಆಗಿದೆ. ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದ್ದು, ತುಂಬಾ ಸರಳ ವಿನ್ಯಾಸವನ್ನು ಒಳಗೊಂಡಿದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ರೂ.60,118 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 97.2 ಸಿಸಿ ಎಂಜಿನ್‌ ಹೊಂದಿದ್ದು, 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಹೋಂಡಾ ಶೈನ್ 100 (Honda Shine 100):

ಈ ಬೈಕ್ ಕಾರ್ಯಕ್ಷಮತೆಯಿಂದಲೇ ಹೆಸರುವಾಸಿಯಾಗಿದ್ದು, ಯುವಕರು ಹಾಗೂ ವೃತ್ತಿಪರರಿಗೆ ಬಹಳಷ್ಟು ಸೂಕ್ತವಾಗಿದೆ. ಹಳ್ಳಿ ಹಾಗೂ ನಗರಗಳಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ರೂ.68,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 98.98 ಸಿಸಿ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 65 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

Top 7 Motorcycles Under 90 000 Rupees India Splendor Platina Sport To Radeon

ಹೀರೋ ಪ್ಯಾಶನ್ ಪ್ಲಸ್ (Hero Passion Plus):

ಇದು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ಪ್ರೀಮಿಯಂ ಮೋಟಾರ್‌ಸೈಕಲ್‌ಗಳಿಗೆ ಸವಾಲೆಸೆಯುವ ರೀತಿಯಲ್ಲಿದೆ. ಜೊತೆಗೆ ದೀರ್ಘಕಾಲ ಬಾಳಿಕೆಯು ಬರುತ್ತದೆ. ರೂ.79,498 ರಿಂದ ರೂ.81,517 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 97.2 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಟಿವಿಎಸ್ ರೇಡಿಯನ್ (TVS Radeon):

ಈ ಬೈಕ್ ದೈನಂದಿನ ಪ್ರಯಾಣಕ್ಕೆ ಒಳ್ಳೆಯ ಆಯ್ಕೆಯಾಗಿದೆ. ಆರಾಮದಾಯಕವಾದ ಆಸನಗಳನ್ನು ಹೊಂದಿದೆ. ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ರೂ.70,000 ರಿಂದ ರೂ.84,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 109.7 ಸಿಸಿ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 73 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

Top 7 Motorcycles Under 90 000 Rupees India Splendor Platina Sport To Radeon

ಒಟ್ಟಾರೆಯಾಗಿ ಈ ಮೋಟಾರ್‌ಸೈಕಲ್‌ಗಳು ಒಂದಕ್ಕಿಂತ ಒಂದು ಅದ್ಬುತವಾಗಿದ್ದು, ತುಂಬಾ ಚೆನ್ನಾಗಿಯೂ ಇವೆ. ಬಜೆಟ್ ಬೆಲೆಯಲ್ಲಿಯು ಗ್ರಾಹಕರ ಖರೀದಿಗೆ ಸಿಗುತ್ತವೆ. ಎಲ್ಲವು ದಿನಬಳಕೆಗೆ ಹೆಚ್ಚು ಉಪಯುಕ್ತವಾಗಿದ್ದು, ನಿಮ್ಮ ಮನಸ್ಸಿಗೆ ಯಾವ ಬೈಕ್ ಒಪ್ಪುತ್ತದೆಯೋ ಅದನ್ನೇ ಕೊಂಡುಕೊಳ್ಳಿ. ಇದರೊಂದಿಗೆ ಬೈಕ್ ಖರೀದಿ ಮಾಡಬೇಕು ಎಂಬ ಬಹುದಿನದ ಕನಸನ್ನು ನನಸು ಮಾಡಿಕೊಳ್ಳಿರಿ.

Article Published On: Sunday, June 29, 2025, 8:30 [IST]
English summary
Discover the top seven motorcycles available in India for under 90000 rupees, offering great mileage and modern designs, ideal for families and youth.
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+