Mileage bikes: ಬಡವರ ಬಂಡಿಗಳು: ಫುಲ್‌ಟ್ಯಾಂಕ್‌ನಲ್ಲಿ ತಿಂಗಳ ಪೂರ್ತಿ ಓಡುವ ಬೈಕ್‌ಗಳ ಲಿಸ್ಟ್!

ಭಾರತದಲ್ಲಿ ಹೆಚ್ಚು ಮೈಲೇಜ್ ನೀಡುವ ಕಮ್ಯೂಟರ್ ಬೈಕ್‌ಗಳಿಗೆ ಸಖತ್ ಬೇಡಿಕೆ ಇದೆ. ಇವು ಬಡ, ಮಧ್ಯಮ ವರ್ಗದ ಜನರ ನಿತ್ಯ ಜೀವನಕ್ಕೆ ಪ್ರಮುಖ ಆಧಾರವಾಗಿವೆ. ಮುಖ್ಯವಾಗಿ ರ್ಯಾಪಿಡೋ, ಸ್ವಿಗ್ಗಿ, ಜೊಮ್ಯಾಟೋಗಳಲ್ಲಿ ಕೆಲಸ ಮಾಡುವವರ ಬದುಕಿನ ಬಂಡಿಗಳಾಗಿವೆ. ಪ್ರಸ್ತುತ ಭಾರತದಲ್ಲಿ ಹೀರೋ, ಟಿವಿಎಸ್, ಬಜಾಜ್ ಮತ್ತು ಹೋಂಡಾದಂತಹ ಕಂಪನಿಗಳು ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಮೋಟಾರ್‌ಸೈಕಲ್‌ಗಳನ್ನು ನೀಡುತ್ತಿವೆ. ಸದ್ಯ ಲಭ್ಯವಿರುವ ಟಾಪ್ 5 ಹೆಚ್ಚಿನ ಮೈಲೇಜ್ (mileage bikes) ಹಾಗೂ ಅತ್ಯಂತ ಕೈಗೆಟುಕುವ ಬೈಕುಗಳ ಪಟ್ಟಿ ಇಲ್ಲಿದೆ.

ಹೋಂಡಾ ಸಿಡಿ 110 ಡ್ರೀಮ್ (Honda CD 110 Dream): ಈ ಬೈಕ್ ಪ್ರಸ್ತುತ 1 ವೆರಿಯೆಂಟ್ ಹೊಂದಿದ್ದು, 4 ಬಣ್ಣಗಳಲ್ಲಿ ಲಭ್ಯವಿದೆ. ಇದು 109.51 ಸಿಸಿ ಬಿಎಸ್-6 ಎಂಜಿನ್ ಹೊಂದಿದೆ. ಇದಕ್ಕೆ 9.1 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯದ್ದು, 65 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಬೆಲೆಯು ರೂ. 76,401 ಎಕ್ಸ್‌ ಶೋರೂಂ ಇದೆ.

top-mileage-bikes-in-india-tvs-sport-hero-splendor-bajaj-ct-110x

ಟಿವಿಎಸ್ ಸ್ಪೋರ್ಟ್ (TVS Sport): ಈ ಬೈಕ್ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸೆಲ್ಫ್ ಸ್ಟಾರ್ಟ್ ES ಮತ್ತು ಸೆಲ್ಫ್ ಸ್ಟಾರ್ಟ್ ELS ಬೆಲೆ ಕ್ರಮವಾಗಿ ರೂ.59,881 ಮತ್ತು ರೂ.71,223 (ಎಕ್ಸ್ ಶೋರೂಂ) ಇದೆ. ಮೂರು ಡ್ಯುಯಲ್ ಟೋನ್ ಬಣ್ಣಗಳನ್ನು ಒಳಗೊಂಡಿದೆ. ಇದು ಬಿಎಸ್ 6-ಕಾಂಪ್ಲೈಂಟ್ 109.7 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಹೊಂದಿದೆ. 10 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯದ್ದು, 70 ಕಿ.ಮೀ ಮೈಲೇಜ್ ನೀಡುತ್ತದೆ.

ಬಜಾಜ್ ಸಿಟಿ 110ಎಕ್ಸ್ (Bajaj CT 110X ): ಈ ಬೈಕ್‌ನ್ನು ಕೇವಲ ಒಂದು ರೂಪಾಂತರದಲ್ಲಿ ಮಾರಾಟ ಮಾಡುತ್ತಿದ್ದು, ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.69,216ಗಳಾಗಿದೆ. ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದು ಎಲೆಕ್ಟ್ರಾನಿಕ್ ಕಾರ್ಬ್ಯುರೇಟರ್ ಹೊಂದಿರುವ 115.45cc ಏರ್ ಕೂಲ್ಡ್ ಎಂಜಿನ್ ಹೊಂದಿದೆ. 11 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯದ್ದು, 70 ಕಿ.ಮೀ ಮೈಲೇಜ್ ನೀಡುತ್ತದೆ.

Take a Poll

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus): ಭಾರತದಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್‌ನ ಬೆಲೆಯು ರೂ.77,176 ರಿಂದ ಪ್ರಾರಂಭವಾಗಿ ರೂ.79,926 ಗಳವರೆಗೆ ಇದೆ. ಹೀರೋ ಸ್ಪ್ಲೆಂಡರ್ ಪ್ಲಸ್ 4 ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಇದು 97.2 ಸಿಸಿ, ಏರ್ ಕೂಲ್ಡ್, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್, OHC ಎಂಜಿನ್ ಹೊಂದಿದೆ. 9.8 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯದ್ದು, 70 ಕಿ.ಮೀ ಮೈಲೇಜ್ ನೀಡುತ್ತದೆ.

ಟಿವಿಎಸ್ ರೇಡಿಯಾನ್ (TVS Radeon): ಟಿವಿಎಸ್ ರೇಡಿಯಾನ್ ಬೈಕ್ ಅನ್ನು ಬೇಸ್ ಎಡಿಷನ್, ಡಿಜಿ ಡ್ರಮ್ ಮತ್ತು ಡಿಜಿ ಡಿಸ್ಕ್ ಎಂಬ ಮೂರು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುವುದು. ಬೇಸ್ ಎಡಿಷನ್ ಬೈಕಿನ ಬೆಲೆಯು ರೂ.59,880ಗಳಾಗಿದೆ. ಡಿಜಿ ಡ್ರಮ್ ರೂಪಾಂತರದ ಬೆಲೆಯು ರೂ.77,394ಗಳಾದರೆ, ಡಿಜಿ ಡಿಸ್ಕ್ ಮಾದರಿಯ ಬೆಲೆಯು ರೂ.81,394ಗಳಾಗಿದೆ (ಎಲ್ಲವು ಎಕ್ಸ್ ಶೋರೂಂ ಬೆಲೆಗಳು).

top-mileage-bikes-in-india-tvs-sport-hero-splendor-bajaj-ct-110x

ಟಿವಿಎಸ್ ರೇಡಿಯಾನ್ ಬೈಕ್ 109.7 cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 10 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, 73 ಕಿ.ಮೀ ಮೈಲೇಜ್ ನೀಡುತ್ತದೆ. 110 ಸಿಸಿ ಕಮ್ಯೂಟರ್ ಸೆಗ್ ಮೆಂಟಿನಲ್ಲಿ ಈ ಎಲ್ಲಾ ಬೈಕ್‌ಗಳ ನಂತರ ಹೋಂಡಾ ಶೈನ್ 100 ಮತ್ತು ಬಜಾಜ್ ಪ್ಲಾಟಿನಾ 110 ಬೈಕುಗಳು ಕೂಡ ಉತ್ತಮ ಮೈಲೇಜ್ ನೀಡು ಅಗ್ಗದ ಬೈಕ್‌ಗಳು ಆಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 22, 2025, 10:00 [IST]
English summary
Top mileage bikes in india tvs sport hero splendor bajaj ct 110x
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+