ಡಿಸೆಂಬರ್ 31ರ ಮುನ್ನವೇ ಟ್ರಯಂಫ್ ಬೈಕ್‌ಗಳನ್ನು ಖರೀದಿಸಲು ಕಂಪನಿ ಸಲಹೆ: ಯಾಕೆ ಗೊತ್ತಾ?
ಜಾಗತಿಕ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿರುವ 'ಟ್ರಯಂಫ್ ಮೋಟಾರ್‌ಸೈಕಲ್ಸ್' (Triumph Motorcycles), ಭಾರತದಲ್ಲಿ ಮಾರಾಟವಾಗುವ ತನ್ನ ಎಲ್ಲಾ ಬೈಕ್‌ಗಳ ಪ್ರಸ್ತುತ ಎಕ್ಸ್-ಶೋರೂಂ ಬೆಲೆಗಳು ಡಿಸೆಂಬರ್ 31, 2025 ರವರೆಗೆ ಮಾತ್ರ ಮಾನ್ಯವಾಗಿರುತ್ತವೆ. ಜನವರಿ 1, 2026 ರಿಂದ ಟ್ರಯಂಫ್ ಮೋಟಾರ್‌ಸೈಕಲ್‌ಗಳ ಎಲ್ಲಾ ಮಾಡಲ್‌ಗಳಲ್ಲಿ ಬೆಲೆ ಪರಿಷ್ಕರಣೆ ಜಾರಿಗೆ ಬರಲಿದೆ ಎಂದು ಘೋಷಿಸಿದೆ. ಈ ಬೆಲೆ ಏರಿಕೆ ಎಷ್ಟಿರಲಿದೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲವಾದರೂ, ಕಚ್ಚಾ ವಸ್ತುಗಳ ಬೆಲೆ ಏರಿಕೆ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತವು ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ 350 ಸಿಸಿಗಿಂತ ಹೆಚ್ಚಿನ ಮೋಟಾರ್‌ಸೈಕಲ್‌ಗಳ ಮೇಲಿನ GST ಸ್ಲ್ಯಾಬ್‌ನಲ್ಲಿ ಭಾರತ ಸರ್ಕಾರ ಪರಿಷ್ಕರಣೆ ಮಾಡಿದ ನಂತರವೂ ಕಂಪನಿಯು ಬೆಲೆಗಳನ್ನು ಹೆಚ್ಚಿಸಿರಲಿಲ್ಲ. ಇದರ ನಷ್ಟವನ್ನು ಕಂಪನಿಯೇ ಭರಿಸುವುದರ ಜೊತೆಗೆ ಗ್ರಾಹಕರನ್ನು ಹೆಚ್ಚಿನ ವೆಚ್ಚಗಳಿಂದ ರಕ್ಷಿಸುವ ಸಲುವಾಗಿ ಟ್ರಯಂಫ್ ಸ್ಪೀಡ್ 400 ಮತ್ತು ಸ್ಪೀಡ್ ಟಿ4 ಬೈಕ್‌ಗಳ ಮೇಲೆ 'ವಿಶೇಷ ಹಬ್ಬದ ಬೆಲೆ'ಯನ್ನು ನೀಡಿತ್ತು. ಆದರೆ ಈಗ ಮುಂದಿನ ವರ್ಷಕ್ಕೆ ಬೆಲೆ ಏರಿಸಲು ಸಜ್ಜಾಗಿದೆ.

ಬೆಲೆ ಪರಿಷ್ಕರಣೆಯ ಕುರಿತು ಮಾತನಾಡಿದ ಬಜಾಜ್ ಆಟೋ ಲಿಮಿಟೆಡ್‌ನ ಪ್ರೋಬೈಕಿಂಗ್ ಅಧ್ಯಕ್ಷ ಮಾಣಿಕ್ ನಂಗಿಯಾ, "ಕಂಪನಿಯು ತನ್ನ ಡೀಲರ್‌ಗಳು ಮತ್ತು ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟದ ಬೈಕ್‌ಗಳು ಮತ್ತು ಸೇವೆಗಳನ್ನು ಒದಗಿಸಲು ಬದ್ಧವಾಗಿದೆ. ಟ್ರಯಂಫ್ ಮೋಟಾರ್‌ಸೈಕಲ್ ಖರೀದಿಸಲು ಮುಂದಾಗುವ ಗ್ರಾಹಕರು ಡಿಸೆಂಬರ್ 2025 ರ ಅಂತ್ಯದ ಮೊದಲೇ ತಮ್ಮ ಖರೀದಿಗಳನ್ನು ಪೂರ್ಣಗೊಳಿಸುವ ಮೂಲಕ ಚಾಲ್ತಿಯಲ್ಲಿರುವ ಬೆಲೆಗಳ ಲಾಭವನ್ನು ಪಡೆಯಲು ತಿಳಿಸಿದ್ದಾರೆ."
ಟ್ರಯಂಫ್ ಬಗ್ಗೆ: 1902 ರಲ್ಲಿ ಮೊದಲ ಬಾರಿಗೆ ಸ್ಥಾಪನೆಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ 120 ವರ್ಷಗಳಿಗೂ ಹೆಚ್ಚಿನ ಪರಂಪರೆಯನ್ನು ಹೊಂದಿದೆ. UK ಯ ಅತಿದೊಡ್ಡ ಮೋಟಾರ್ ಸೈಕಲ್ ತಯಾರಕರಾಗಿ ಉಳಿದಿದೆ. ಲೀಸೆಸ್ಟರ್‌ಶೈರ್‌ನ ಹಿಂಕ್ಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, UK, ಥೈಲ್ಯಾಂಡ್, ಬ್ರೆಜಿಲ್ ಮತ್ತು ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ.

ಟ್ರಯಂಫ್ ತನ್ನ ಆಧುನಿಕ ಕ್ಲಾಸಿಕ್‌ಗಳು, ರೋಡ್‌ಸ್ಟರ್‌ಗಳು ಮತ್ತು ಅಡ್ವೆಂಚರ್ ಲೈನ್ - ಅಪ್‌ಗಳಲ್ಲಿ ಅಧಿಕೃತ ಡಿಸೈನ್, ಪಾತ್ರ ಮತ್ತು ಪರ್ಫಾಮೆನ್ಸ್ ಸಂಯೋಜಿಸುತ್ತದೆ - ಐಕಾನಿಕ್ ಬೊನ್ನೆವಿಲ್ಲೆ ಫ್ಯಾಮಿಲಿಯ ಸ್ಟ್ರೀಟ್, ಸ್ಪೀಡ್ ಟ್ರಿಪಲ್ಸ್, ಟೈಗರ್ ಸಿರೀಸ್ ಮತ್ತು ಎಂಟ್ರಿಲೆವಲ್ ಹೊಸ 400cc TR ಸಿರೀಸ್ ವರೆಗೆ ಎಲ್ಲಾ ವಿಭಾಗಗಳಲ್ಲಿಯೂ ತನ್ನ ಅಸ್ತಿತ್ವನ್ನು ಉಳಿಸಿಕೊಂಡಿದೆ.
2023 ರಲ್ಲಿ, ಟ್ರಯಂಫ್ ಬಜಾಜ್ ಆಟೋ ಜೊತೆಗಿನ ಪಾಲುದಾರಿಕೆಯಲ್ಲಿ ಭಾರತವನ್ನು ಪ್ರವೇಶಿಸಿತು. ಅಂದಿನಿಂದ ಅತ್ಯಂತ ಯಶಸ್ವಿ ಪ್ರತಿಕ್ರಿಯೆಯನ್ನು ಕಂಡಿದೆ, 400cc ಶ್ರೇಣಿಯು ಮಧ್ಯಮ - ಸಾಮರ್ಥ್ಯದ ವಿಭಾಗದಲ್ಲಿ ಬಲವಾದ ನೆಲೆಯನ್ನು ಸ್ಥಾಪಿಸಿದೆ. ಬಜಾಜ್ ಆಟೋ ಜೊತೆಗೆ, ಟ್ರಯಂಫ್ ಈಗ ಭಾರತದಾದ್ಯಂತ ತನ್ನ ಉಪಸ್ಥಿತಿಯನ್ನು ವಿಸ್ತರಿಸುವ ಮತ್ತು ರೋಮಾಂಚಕ ಸವಾರಿ ಸಮುದಾಯಗಳನ್ನು ನಿರ್ಮಿಸುವತ್ತ ಗಮನಹರಿಸಿದೆ.

ಐಲ್ ಆಫ್ ಮ್ಯಾನ್ ಟಿಟಿ ಗೆಲುವಿನಿಂದ ಹಿಡಿದು ಮೋಟೋ2ಟಿಎಂ ವಿಶ್ವ ಚಾಂಪಿಯನ್‌ಶಿಪ್‌ಗೆ ವಿಶೇಷ ಎಂಜಿನ್ ಪೂರೈಕೆದಾರನಾಗಿ ಅದರ ಪಾತ್ರದವರೆಗೆ ಮತ್ತು ಇತ್ತೀಚೆಗೆ ಜಾಗತಿಕ ಮೋಟೋಕ್ರಾಸ್ ಮತ್ತು ಸೂಪರ್‌ಮೋಟೋಕ್ರಾಸ್‌ಗೆ ಹೊಸ ನಮೂದುಗಳೊಂದಿಗೆ ಮುನ್ನುಗ್ಗುತ್ತಿದೆ. ಅಲ್ಲದೆ 2023 ರಲ್ಲಿ, ಟ್ರಯಂಫ್ 24 ಗಂಟೆಗಳಲ್ಲಿ ಮೋಟಾರ್‌ಸೈಕಲ್‌ನಲ್ಲಿ ಅತಿ ಹೆಚ್ಚು ದೂರ ಪ್ರಯಾಣಿಸಿದ್ದಕ್ಕಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








