ಮೊದಲೇ ಅಗ್ಗದ ಬೆಲೆ... ಮತ್ತೇ 18,000 ರೂ. ಇಳಿಕೆ: ಬಡವರ ಕನಸು ನನಸಾಗುವ ಸಮಯ!
ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ವಿವಿಧ ವಿಭಾಗಗಳಲ್ಲಿದ್ದು, ಇದರಲ್ಲಿ ಯುವಕರನ್ನು ಸೆಳಯುವ ಅಗ್ಗದ ಬೆಲೆಯ ಬೈಕ್‌ಗಳಿಗೆ ಭಾರೀ ಬೇಡಿಕೆ ಇದೆ. ಹತ್ತು ವರ್ಷಗಳ ಹಿಂದೆ 200cc ಬೈಕ್‌ಗಳನ್ನು ಯುವಕರು ಮುಗಿಬಿದ್ದು ಖರೀದಿಸುತ್ತಿದ್ದರು. ಆದರೆ ಕಾಲ ಬದಲಾಗುತ್ತಾ ಬಂದಿದೆ, ಸದ್ಯ 350cc ಹಾಗೂ 400cc ಮೋಟಾರ್ ಸೈಕಲ್‌ಗಳಲ್ಲಿ ಪವರ್ ಹೆಚ್ಚಾಗಿ ನೀಡಲಾಗುತ್ತದೆ ಎಂಬುವ ಉದ್ದೇಶದಿಂದ ಯುವ ಜನತೆ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಬಜಾಜ್ ತನ್ನ ಪಲ್ಸರ್ NS200 ನಂತರ NS400 ಬೈಕ್ ಪರಿಚಯಿಸಿತು. ಮತ್ತೊಂದೆಡೆ ತನ್ನ ಪ್ರೀಮಿಯಂ ಪಾಲುದಾರನಾದ ಟ್ರಯಂಫ್ ಅನ್ನು ಬರಬರುತ್ತಲೇ 400cc ವಿಭಾಗಕ್ಕೆ ಎಂಟ್ರಿಕೊಡಿಸಿತು.
ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಗೆ ಇಂತಿಷ್ಟು ಮಿತಿಯಿದೆ, ಅದನ್ನು ದಾಟಿದರೆ ಆ ಬೈಕ್ ಯಶಸ್ಸು ಕಾಣುವುದಿಲ್ಲ. ಹಾಗಾಗಿ ಬಜಾಜ್ ಕಂಪನಿಯು ಟ್ರಯಂಫ್ ಸ್ಪೀಡ್ ಟಿ4 (Triumph Speed T4) ಬೈಕಿನ ಬೆಲೆಯನ್ನು ರೂ.1.99 ಲಕ್ಷ (ಎಕ್ಸ್ ಶೋರೂಂ) ಗಳಿಗೆ ಪರಿಷ್ಕರಿಸಿದೆ. ಈ ಹೊಸ ಬೆಲೆ ಇಳಿಕೆಯಿಂದಾಗಿ ಟ್ರಯಂಫ್ ಸ್ಪೀಡ್ ಟಿ4 ಮೋಟಾರ್‌ಸೈಕಲ್ ಹೆಚ್ಚು ಬಜೆಟ್ ಸ್ನೇಹಿ ಆವೃತ್ತಿಯಾಗಿದೆ.

ಹಾಗೆಯೇ 400cc ವಿಭಾಗದಲ್ಲಿ ಟ್ರಯಂಫ್ ಸ್ಪೀಡ್ ಟಿ4 ಹೆಚ್ಚು ಕೈಗೆಟುಕುವ ಭಾರತ - ಕೇಂದ್ರಿತ ಆವೃತ್ತಿಯ ಜೊತೆಗೆ ಬೆಲೆಗೆ ತಕ್ಕಂತೆ ಕಡಿಮೆ ವೈಶಿಷ್ಟ್ಯಗಳನ್ನು ಹೊಂದಿದೆ. ಅಂದಹಾಗೆ ಹೊಸ ಬೆಲೆಯು ಈ ಹಿಂದನ ಬೆಲೆಗೆ ಹೋಲಿಸಿದರೆ ಈಗ 18,000 ರೂ. ಕಡಿಮೆಯಾಗಿದೆ. ಬಿಡುಗಡೆಯ ಸಮಯದಲ್ಲಿ ಸ್ಪೀಡ್ ಟಿ4 ನ ಬೆಲೆಯು ರೂ.2.17 (ಎಕ್ಸ್ ಶೋರೂಂ) ಲಕ್ಷಗಳಾಗಿತ್ತು.
ಬೈಕ್ ವಿಶೇಷತೆಗಳು: ಟ್ರಯಂಫ್ ಸ್ಪೀಡ್ ಟಿ4 ಮೋಟಾರ್‌ಸೈಕಲ್ ಸ್ಪೀಡ್ 400 ನ ಅದೇ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಆದರೆ ಇದನ್ನು ಭಾರತೀಯ ಸಂಚಾರ ಪರಿಸ್ಥಿತಿಗಳಿಗೆ ಅನುಗುಣವಾಗಿ ಹೆಚ್ಚು ವಿಶ್ರಾಂತಿ ಸವಾರಿ ಅನುಭವವನ್ನು ಹೊಂದುವಂತೆ ನಿರ್ಮಿಸಲಾಗಿದೆ. ಹಾಗೆಯೇ ಸ್ಪೀಡ್ 400 ಗಿಂತ ಕಡಿಮೆ ಪವರ್ ಔಟ್ ಪುಟ್ ಅನ್ನು ನೀಡುತ್ತದೆ.

ಬೆಲೆಯನ್ನು ಕಡಿಮೆ ಮಾಡಿರುವುದರಿಂದ ಈ ಪವರ್ ಹಾಗೂ ಟಾರ್ಕ್‌ನಲ್ಲಿ ಏರಿಳಿತಗಳನ್ನು ಮಾಡಲಾಗಿದೆ. ಜೊತೆಗೆ ಸ್ಪೀಡ್ ಟಿ 4 ಬೈಕ್‌ನಲ್ಲಿ ಎಲೆಕ್ಟ್ರಾನಿಕ್ ಥ್ರೋಟಲ್, ಟ್ರಾಕ್ಷನ್ ಕಂಟ್ರೋಲ್, ಇ-ಮೊಬೈಲೈಸರ್ ಮತ್ತು ಗೋಲ್ಡನ್ ಅಪ್ ಸೈಡ್ ಡೌನ್ ಫೋರ್ಕ್ ನಂತಹ ಕೆಲವು ವೈಶಿಷ್ಟ್ಯಗಳನ್ನು ಕೈಬಿಡಲಾಗಿದೆ. ಇವೆಲ್ಲವನ್ನು ಬಯಸುವವರು ಟ್ರಯಂಫ್ ಸ್ಪೀಡ್ 400 ಅನ್ನು ಪರಿಶೀಲಿಸಬಹುದು.
ಅಂದಹಾಗೆ ಇವೆಲ್ಲವು ಫೀಚರ್ಸ್‌ನೊಂದಿಗೆ ಹೆಚ್ಚು ಶಕ್ತಿಶಾಲಿ ಮತ್ತು ಹೆಚ್ಚು ವೈಶಿಷ್ಟ್ಯಗಳಿಂದ ಸಮೃದ್ಧವಾಗಿರುವ ಸ್ಪೀಡ್ 400 ರೂ.2,40,405 (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಟ್ರಯಂಫ್ ಸ್ಪೀಡ್ ಟಿ4 ಗಿಂತ ಹೆಚ್ಚು ಪವರ್ ಹಾಗೂ ಟಾರ್ಕ್ ಹೊರಹಾಕುತ್ತದೆ. ಹಾಗೆಯೇ ಆಕರ್ಷಕ ಹಾಗೂ ಹೆಚ್ಚು ಸ್ಪೋರ್ಟಿ ಲುಕ್ ಸೇರಿದಂತೆ ತುಸು ಎತ್ತರದ ಡಿಸೈನ್ ಹೊಂದಿದೆ.

ಒಟ್ಟಾರೆ 400cc ಮೋಟಾರ್ ಸೈಕಲ್ ಖರೀದಿಸುವ ಹಲವರ ಕನಸನ್ನು 18,000 ರೂ. ಬೆಲೆ ಕಡಿತದೊಂದಿಗೆ ಬಜಾಜ್ ಕೈಗೆಟುಕುವಂತೆ ಮಾಡಿದೆ. ಈ ಪರಿಣಾಮದಿಂದ ಈಗ 1.99 ಲಕ್ಷ ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಈ ಬೈಕ್ ಖರೀದಿಸಬಹುದಾಗಿದೆ. ಹೊಸ ಟ್ರಯಂಫ್ ಸ್ಪೀಡ್ ಟಿ4 ಮೋಟಾರ್‌ಸೈಕಲ್ ಬೆಲೆ ಕಡಿತದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








