Triumph: ಗಂಡು ಹೈಕಳಿಗೆ ಸಿಹಿಸುದ್ದಿ ಹೊಸ ಟ್ರಯಂಫ್ ಥ್ರಕ್ಸ್‌ಟನ್ 400 ಬೈಕ್ ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?

ಭಾರತದ ಬಜಾಜ್ ಆಟೋ (Bajaj Auto) ಹಾಗೂ ಬ್ರಿಟಿಷ್ ಕಂಪನಿ ಟ್ರಯಂಫ್ (Triumph) ವ್ಯಾಪಾರ ಪಾಲುದಾರಿಕೆ ಹೊಂದಿವೆ. ಅದರ ಭಾಗವಾಗಿ ಬುಧವಾರ ಹೊಚ್ಚ ಹೊಸ 'ಟ್ರಯಂಫ್ ಥ್ರಕ್ಸ್‌ಟನ್' ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಇದು ಯುವಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ರೂ.2.74 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಮಾರಾಟಕ್ಕೂ ಬಂದಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ಯಾವೆಲ್ಲ ವಿಶೇಷತೆಗಳಿಗೆ ಸಾಕ್ಷಿಯಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ನೂತನ ಟ್ರಯಂಫ್ ಥ್ರಕ್ಸ್‌ಟನ್ 400 (Triumph Thruxton 400) ಬೈಕ್ ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಅದು ನೋಡುಗರನ್ನು ಸೆಳೆಯುವಂತಿದೆ. ರೌಂಡ್ ಹೆಡ್‌ಲ್ಯಾಂಪ್, ಕ್ಲಿಪ್ ಆನ್ ಹ್ಯಾಂಡಲ್‌ಬಾರ್‌ಗಳು, ಬಾರ್-ಎಂಡ್ ಮಿರರ್‌ಗಳು, ವಿಂಡ್‌ಸ್ಕ್ರೀನ್, ಸಿಂಗಲ್-ಪೀಸ್ ಸೀಟ್, ಬಾಡಿ ಕಲರ್ಡ್ ಪಿಲಿಯನ್ ಸೀಟ್ ಕೌಲ್ ಹಾಗೂ ಹೊಸದಾದ ಟೈಲ್ ಲೈಟ್‌ನ್ನು ಪಡೆದಿದೆ.

Triumph Thruxton 400 Launched In India Rs 2 74 Lakh Price Details

ಈ ಬೈಕ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 398 ಸಿಸಿ ಲಿಕ್ವಿಡ್ ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 9,000 ಆರ್‌ಪಿಎಂನಲ್ಲಿ 42 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 7,500 ಆರ್‌ಪಿಎಂನಲ್ಲಿ 37.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 27.02 ಕಿ.ಮೀ ವರೆಗೆ ಮೈಲೇಜ್ ಕೂಡ ನೀಡುತ್ತದೆ.

ಹೊಸ ಟ್ರಯಂಫ್ ಥ್ರಕ್ಸ್‌ಟನ್ 400 ಮೋಟಾರ್‌ಸೈಕಲ್‌ ಲಾವಾ ರೆಡ್ ಗ್ಲಾಸ್ & ಅಲ್ಯೂಮಿನಿಯಂ ಸಿಲ್ವರ್, ಪರ್ಲ್ ಮೆಟಾಲಿಕ್ ವೈಟ್ & ಸ್ಟಾರ್ಮ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಸ್ಲಿಪ್ & ಅಸಿಸ್ಟ್ ಕ್ಲಚ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಇದು 17-ಇಂಚಿರುವ ಅಲಾಯ್ ವೀಲ್‌ಗಳು, ಟ್ಯೂಬ್‌ಲೆಸ್ ರೇಡಿಯಲ್ ಟೈರ್‌ಗಳನ್ನು ಪಡೆದಿದೆ. 181 ಕೆಜಿ ತೂಕವಿದ್ದು, 13 ಲೀಟರ್‌ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ. 775 ಎಂಎಂ ಅಗಲ, 1110 ಎಂಎಂ ಎತ್ತರವು ಇದ್ದು, 1376 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ನೂತನ ಟ್ರಯಂಫ್ ಥ್ರಕ್ಸ್‌ಟನ್ 400 ಬೈಕ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಮುಂಭಾಗ (ಫ್ರಂಟ್) 43 ಎಂಎಂ ಇನ್ವರ್ಟೆಡ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಗ್ಯಾಸ್ ಚಾರ್ಜ್ಡ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಟ್ರಯಂಫ್ ಮಾರಾಟಗೊಳಿಸುವ ಇತರೆ ಪ್ರಮುಖ ಮೋಟಾರ್‌ಸೈಕಲ್‌ಗಳು ಯಾವುವು:

ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್ (Triumph Scrambler 400 X): ಇದು ರೂ.3.43 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 398 ಸಿಸಿ ಲಿಕ್ವಿಡ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹಾಗೂ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 28.3 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಇದರೊಂದಿಗೆ ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) & ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಟ್ರಯಂಫ್ ಸ್ಪೀಡ್ 400 (Triumph Speed 400): ಈ ಬೈಕ್ ರೂ.3.17 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 398.15 ಸಿಸಿ ಲಿಕ್ವಿಡ್ ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 30 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

More from DriveSpark

Article Published On: Thursday, August 7, 2025, 15:48 [IST]
English summary
Triumph thruxton 400 launched in india rs 2 74 lakh price details
Read more on triumph india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+