ಟಿವಿಎಸ್ ಜೊತೆ ಕೈಜೋಡಿಸಿದ ನಾಯ್ಸ್: ದೇಶದ ಮೊದಲ ಇವಿ-ಸ್ಮಾರ್ಟ್‌ವಾಚ್ ಏಕೀಕರಣ
ಪ್ರಮುಖ ದ್ವಿಚಕ್ರ ವಾಹನ ತಯಾರಕರಾಗಿರುವ ಟಿವಿಎಸ್ ಮೋಟಾರ್ (TVS Motor) ಕಂಪನಿ ಮತ್ತು ಭಾರತದ ಕನೆಕ್ಟೆಡ್ ಲೈಫ್‌ಸ್ಟೈಲ್ ಬ್ರ್ಯಾಂಡ್ ಆಗಿರುವ ನಾಯ್ಸ್ (Noise), ಇಂದು ಮೊದಲ ಮೇಡ್ - ಇನ್ - ಇಂಡಿಯಾ ಇವಿ - ಸ್ಮಾರ್ಟ್‌ವಾಚ್ ಏಕೀಕರಣ (EV-Smartwatch integration) ವನ್ನು ಪರಿಚಯಿಸಿವೆ. ಈ ಏಕೀಕರಣವು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಾಯ್ಸ್ ಸ್ಮಾರ್ಟ್‌ವಾಚ್‌ನೊಂದಿಗೆ ಸಂಪರ್ಕಿಸುತ್ತದೆ. ಈ ಮೂಲಕ ಸವಾರರು ತಮ್ಮ ವಾಹನದ ಎಲ್ಲಾ ಮಾಹಿತಿಯನ್ನು ಸ್ಮಾರ್ಟ್ ವಾಚ್‌ನಲ್ಲಿ ಪಡೆಯಬಹುದು ಎಂದು ಟಿವಿಎಸ್ ತಿಳಿಸಿದೆ.
ವಾಹನದ ಸ್ಥಿತಿ, ಬ್ಯಾಟರಿ ಒಳನೋಟಗಳು, ಟೈರ್ ಪ್ರೆಷರ್ ಮತ್ತು ಸುರಕ್ಷತಾ ಎಚ್ಚರಿಕೆಗಳು ಸೇರಿದಂತೆ ಹಲವಾರು ಸ್ಥಳೀಯ ವೈಶಿಷ್ಟ್ಯಗಳನ್ನು ಒಳಗೊಂಡಂತೆ ನಿರ್ಣಾಯಕ ಅಪ್‌ಡೇಟ್‌ಗಳನ್ನು ಪಡೆಯಲು ಈ ವಾಚ್ ಅನ್ನು ಕಸ್ಟಮೈಸ್ ಮಾಡಲಾಗಿದೆ. ಈ ವಾಚ್ ಸಂಪರ್ಕದೊಂದಿಗೆ ಟಿವಿಎಸ್ ಐಕ್ಯೂಬ್ ಮತ್ತಷ್ಟು ಸ್ಮಾರ್ಟ್ ಆಗುತ್ತದೆ. ಈ ಎರಡೂ ಬ್ರಾಂಡ್‌ಗಳ ಪಾಲುದಾರಿಕೆಯೊಂದಿಗೆ ತಮ್ಮ ಉತ್ಪನ್ನಗಳ ಮೂಲಕ ಗ್ರಾಹಕರಿಗೆ ಏನೆಲ್ಲಾ ಪ್ರಯೋಜನಗಳನ್ನು ನೀಡಲಿವೆ ಬನ್ನಿ ನೋಡೋಣ.

ಐಕ್ಯೂಬ್ - ಸ್ಮಾರ್ಟ್ ವಾಚ್ ವಿಶೇಷತೆಗಳು: ಲಾಕ್ ಆಗಿದೆಯೇ, ಅನ್‌ಲಾಕ್ ಆಗಿದೆಯೇ, ಸವಾರಿಯಲ್ಲಿದೆಯೇ, ಚಾರ್ಜಿಂಗ್ ಆಗುತ್ತಿದೆಯೇ ಅಥವಾ ಪೂರ್ಣಗೊಂಡಿದೆಯೇ ಎಂಬುದನ್ನು ಸ್ಮಾರ್ಟ್‌ವಾಚ್‌ನಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಲಾಗುತ್ತದೆ. ಜೊತೆಗೆ ಚಾರ್ಜ್ ಎಲ್ಲಿಯವರೆಗೆ ಬಂದಿದೆ ಹಾಗೂ ಕಡಿಮೆ ಬ್ಯಾಟರಿ ಎಚ್ಚರಿಕೆಯನ್ನು ದೃಶ್ಯ ಸೂಚನೆಗಳೊಂದಿಗೆ ಬ್ಯಾಟರಿ ಶೇಕಡಾವಾರನ್ನು (20% ಕ್ಕಿಂತ ಕಡಿಮೆ) ತೋರಿಸುತ್ತದೆ.
ಪ್ರಯಾಣದಲ್ಲಿರುವಾಗ ಚಾರ್ಜಿಂಗ್ ನಿಲ್ದಾಣಗಳ ಬಗ್ಗೆ ಸಹಾಯ ಮಾಡಲು ಯಾವ ರೈಡ್ ಮೋಡ್‌ಗಳಲ್ಲಿ ಎಷ್ಟು ಬೇಗ ತಲುಪಬಹುದು ಎಂಬ ಅಂದಾಜು ದೂರವನ್ನು ತೋರಿಸುತ್ತದೆ. ಎಚ್ಚರಿಕೆಗಳೊಂದಿಗೆ ಎರಡೂ ಟೈರ್‌ಗಳಲ್ಲಿ ಎಷ್ಟು ಪ್ರೆಷರ್ ಇದೆ (TPMS) ಎಂಬುದನ್ನು ಲೈವ್ ಆಗಿ ತೋರಿಸುತ್ತದೆ. ಇಷ್ಟೇ ಸಮಯದಲ್ಲಿ ಪೂರ್ಣಗೊಳ್ಳಲಿದೆ ಮತ್ತು ಚಾರ್ಜಿಂಗ್ ಪೂರ್ಣಗೊಂಡಿದೆ ಎಂಬ ನೋಟಿಫಿಕೇಷನ್ ಸೇರಿದಂತೆ ರಿಯಲ್ ಟೈಮ್ ಚಾರ್ಜಿಂಗ್ ಅಪ್‌ಡೇಟ್‌ಗಳನ್ನು ನೀಡುತ್ತದೆ.
ಪಾರ್ಕ್ ಮಾಡಿದ ವಾಹನದ ಚಲನೆ ಪತ್ತೆಯಾದಾಗ ಹ್ಯಾಪ್ಟಿಕ್ಸ್ ಮತ್ತು ದೃಶ್ಯ ಪ್ರಾಂಪ್ಟ್‌ಗಳನ್ನು ನೀಡುತ್ತದೆ. ವಾಹನವು ಪೂರ್ವನಿರ್ಧರಿತ ಜಿಯೋಫೆನ್ಸ್ ಗಡಿಯನ್ನು ದಾಟಿದಾಗ ಎಚ್ಚರಿಕೆ ನೀಡುತ್ತದೆ, ಇದನ್ನು ಮೊಬೈಲ್ ಅಪ್ಲಿಕೇಶನ್‌ಗೆ ಸಿಂಕ್ ಮಾಡಲಾಗಿದೆ. ಬ್ಯಾಟರಿ ಮಟ್ಟವನ್ನು ಆಧರಿಸಿ ಚಾರ್ಜರ್ ಹಾಕಲು ಅಥವಾ ಅನ್‌ಪ್ಲಗ್ ಮಾಡಲು ನೋಟಿಫಿಕೇಷನ್ ನೀಡುತ್ತದೆ.
ಐಕ್ಯೂಬ್ ಉತ್ತಮ ಮಾರಾಟ: ಟಿವಿಎಸ್ ಐಕ್ಯೂಬ್ ದೇಶೀಯ ಮಾರುಕಟ್ಟೆಯಲ್ಲಿ ಇದುವರೆಗೆ 6,50,000 ಯುನಿಟ್ ವಾಹನಗಳ ಮಾರಾಟದ ಮೈಲಿಗಲ್ಲನ್ನು ಮೀರಿಸಿದೆ. ಸದ್ಯ ಭಾರತದ ನಂ.1 ಇವಿ ಸ್ಕೂಟರ್ ಬ್ರಾಂಡ್ ಆಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ನಾಯ್ಸ್‌ನೊಂದಿಗಿನ ಈ ಪಾಲುದಾರಿಕೆಯು ಮತ್ತಷ್ಟು ಮಾರಾಟವನ್ನು ಹೆಚ್ಚಿಸಲಿದೆ ಎಂದು ಟಿವಿಎಸ್ ವಿಶ್ವಾಸ ವ್ಯಕ್ತಪಡಿಸಿದೆ.
ಟಿವಿಎಸ್ ಮೋಟಾರ್ ಕಂಪನಿಯ ಹಿರಿಯ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್ ಮಾತನಾಡಿ, "ತಂತ್ರಜ್ಞಾನ, ಸುಸ್ಥಿರತೆ ಮತ್ತು ಗ್ರಾಹಕ - ಕೇಂದ್ರಿತ ನಾವೀನ್ಯತೆಗಳನ್ನು ಸರಾಗವಾಗಿ ಮಿಶ್ರಣ ಮಾಡುವ ಮೂಲಕ ಭವಿಷ್ಯವನ್ನು ಮರುಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಟಿವಿಎಸ್ ಐಕ್ಯೂಬ್ ಅನ್ನು ಸಂಪರ್ಕಿತ ಸ್ಮಾರ್ಟ್‌ವಾಚ್‌ನೊಂದಿಗೆ ಸಂಯೋಜಿಸುವ ಮೂಲಕ, ನಮ್ಮ ಸವಾರರಿಗೆ ಚುರುಕಾದ, ಸುರಕ್ಷಿತ ಮತ್ತು ಹೆಚ್ಚು ಅರ್ಥಗರ್ಭಿತ ಪ್ರಯಾಣಗಳೊಂದಿಗೆ ಸಬಲೀಕರಣಗೊಳಿಸುತ್ತಿದ್ದೇವೆ" ಎಂದರು.
''ಜನರು ಸುಲಭವಾಗಿ ಬದುಕಲು, ಚಲಿಸಲು ಮತ್ತು ಸಂಪರ್ಕದಲ್ಲಿರಲು ಅಧಿಕಾರ ನೀಡುವ ತಂತ್ರಜ್ಞಾನವನ್ನು ನಿರ್ಮಿಸುವುದು ನಮ್ಮ ದೃಷ್ಟಿಯಾಗಿದೆ. ಟಿವಿಎಸ್ ಮೋಟಾರ್ ಕಂಪನಿಯೊಂದಿಗಿನ ಈ ಪಾಲುದಾರಿಕೆಯು ಆ ದಿಕ್ಕಿನಲ್ಲಿ ಒಂದು ಪ್ರಬಲ ಹೆಜ್ಜೆಯಾಗಿದ್ದು, ಸ್ಮಾರ್ಟ್ ವಾಚ್ ಅನ್ನು ನಿತ್ಯದ ಒಡನಾಡಿಯಾಗಿ ಪರಿವರ್ತಿಸುವ ಮೂಲಕ ಅರ್ಥಪೂರ್ಣ ನಾವೀನ್ಯತೆಯನ್ನು ತರುತ್ತದೆ.
ಗ್ರಾಹಕರು ತಮ್ಮ ದಿನವನ್ನು ಕಳೆಯಲು ಚುರುಕಾದ, ಹೆಚ್ಚು ಸಂಯೋಜಿತ ಮಾರ್ಗಗಳನ್ನು ಹುಡುಕುತ್ತಿರುವಾಗ, ಈ ರೀತಿಯ ಮೊದಲ ಅನುಭವವು ಗಡಿಗಳನ್ನು ದಾಟಿ, ಉದ್ದೇಶಪೂರ್ವಕ ತಂತ್ರಜ್ಞಾನವನ್ನು ತಲುಪಿಸುವ ಮತ್ತು ಭಾರತದಲ್ಲಿ ಸಂಪರ್ಕಿತ ಜೀವನದ ಭವಿಷ್ಯವನ್ನು ರೂಪಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ನಾಯ್ಸ್‌ನ ಸಹ - ಸಂಸ್ಥಾಪಕ ಅಮಿತ್ ಖತ್ರಿ ಹೇಳಿದರು.


Click it and Unblock the Notifications








