TVS: ಟಿವಿಎಸ್ ಟೂ-ವೀಲರ್‌ಗಳ ಮಾರಾಟ ದಾಖಲೆ ಸಂಖ್ಯೆಯಲ್ಲಿ ಏರಿಕೆ.. ಐಕ್ಯೂಬ್‌ಗಾಗಿ ಮುಗಿಬಿದ್ದ ಗ್ರಾಹಕರು!

ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರು ಟಿವಿಎಸ್ ಮೋಟಾರ್ (TVS Motor). ಈ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಹತ್ತಾರು ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ಅತ್ಯಾಧುನಿಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಟಿವಿಎಸ್ ಮೋಟಾರ್ ಗುರುವಾರ ಡಿಸೆಂಬರ್ 2024ರ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಿಸಿದ್ದು, ಉತ್ತಮವಾದ ಬೆಳವಣಿಗೆ ದಾಖಲಿಸಿದೆ.

ಹೋದ ತಿಂಗಳು (ಡಿಸೆಂಬರ್-2024) ಟಿವಿಎಸ್ ಕಂಪನಿಯು ಸರಿ ಸುಮಾರು (ದೇಶೀಯ ಮಾರಾಟ - ವಿದೇಶಕ್ಕೆ ರಫ್ತು) 321,687 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಇದರಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು ಸಹ ಸೇರಿವೆ. 2023ರ ಈ ತಿಂಗಳಲ್ಲೇ ಮಾರಲ್ಪಟ್ಟ 301,898 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 7% ಪ್ರಗತಿ ಸಾಧಿಸಿದೆ.

TVS December 2024 Sales Report Good Growth iQube Electric Scooter Become Game Changer Details

ಬೈಕ್ ಹಾಗೂ ಸ್ಕೂಟರ್ ಸೇರಿದಂತೆ ಒಟ್ಟಾರೆ ದ್ವಿಚಕ್ರ ವಾಹನ (Two-Wheeler) ಮಾರಾಟದಲ್ಲಿ ಕೂಡ ಟಿವಿಎಸ್ ಒಳ್ಳೆಯ ಪ್ರಗತಿಯನ್ನೇ ಸಾಧಿಸಿದೆ. ಈ ಡಿಸೆಂಬರ್‌ನಲ್ಲಿ ಬರೋಬ್ಬರಿ 312,002 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. 2023ರ ಡಿಸೆಂಬರ್‌ ತಿಂಗಳಲ್ಲಿ ಮಾರಾಟ ಮಾಡಿದ 290,064 ಯುನಿಟ್‌ ದ್ವಿಚಕ್ರ ವಾಹನಗಳಿಗೆ ಹೋಲಿಕೆ ಮಾಡಿದರೆ ಶೇಕಡ 8% ಅಭಿವೃದ್ಧಿಯಾಗಿದೆ.

ದೇಶೀಯವಾಗಿಯೂ ದ್ವಿಚಕ್ರ ವಾಹನಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಈ ಡಿಸೆಂಬರ್‌ ತಿಂಗಳಲ್ಲಿ 215,075 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ಡಿಸೆಂಬರ್‌ನಲ್ಲಿ 214,988 ಯುನಿಟ್‌ಗಳನ್ನು ಮಾರಲಾಗಿದೆ. ಹೋದ ತಿಂಗಳು 144,811 ಯುನಿಟ್ ಮೋಟಾರ್‌ಸೈಕಲ್‌ಗಳು ಮತ್ತು 133,919 ಸ್ಕೂಟರ್‌ಗಳನ್ನು ಮಾರಾಟಗೊಳಿಸಲಾಗಿದ್ದು, ಉತ್ತಮವಾದ ಬೆಳವಣಿಗೆ ಕಾಣಲಾಗಿದೆ.

ವಿದೇಶಕ್ಕೆ ರಫ್ತು ಮಾಡಿದ ಒಟ್ಟು ವಾಹನಗಳ ಪ್ರಮಾಣವು ಹೆಚ್ಚಳಗೊಂಡಿದೆ. 104,393 ಯುನಿಟ್‌ಗಳನ್ನು ಹಲವು ದೇಶಗಳಿಗೆ ರವಾನಿಸಲಾಗಿದೆ. 2023ರ ಇದೇ ಅವಧಿಯಲ್ಲಿ 85,391 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಅದಕ್ಕೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 22% ಪ್ರಗತಿಯಾಗಿದೆ. ಈ ಡಿಸೆಂಬರ್‌ನಲ್ಲಿ 9,685 ಯುನಿಟ್‌ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ.

ಎಲೆಕ್ಟ್ರಿಕ್ ವಾಹನ (Electric Vehicle) ಮಾರಾಟದಲ್ಲಿಯೂ ಈ ಟಿವಿಎಸ್ ಭಾರೀ ಪ್ರಗತಿ ಸಾಧಿಸಿದೆ. ಕಳೆದ ತಿಂಗಳು (ಡಿಸೆಂಬರ್-2024) 20,171 ಯುನಿಟ್‌ ಮಾರಾಟ ಮಾಡಲಾಗಿದೆ. 2023ರ ಡಿಸೆಂಬರ್‌ನಲ್ಲಿ 11,288 ಯುನಿಟ್‌ಗಳನ್ನು ಮಾರಲಾಗಿತ್ತು. ಇದರೊಂದಿಗೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 79% ಅಭಿವೃದ್ಧಿ ಕಾಣಲಾಗಿದೆ. ಟಿವಿಎಸ್, ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಮುಂಚೂಣಿಗೆ ಬರಲು 'ಐಕ್ಯೂಬ್' ಇ-ಸ್ಕೂಟರ್ ಪ್ರಮುಖ ಕಾರಣವಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಟಿವಿಎಸ್ ಐಕ್ಯೂಬ್ (TVS iQube) ಎಲೆಕ್ಟ್ರಿಕ್ ಸ್ಕೂಟರ್, ರೂ.1.07 ಲಕ್ಷದಿಂದ ರೂ.1.37 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 2.2 ಕೆಡಬ್ಲ್ಯೂಹೆಚ್, 3.4 ಕೆಡಬ್ಲ್ಯೂಹೆಚ್ ಮತ್ತು 5.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 75 ರಿಂದ 150 ಕಿಲೋಮೀಟರ್ ಓಡುತ್ತದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 2, 2025, 22:50 [IST]
English summary
Tvs december 2024 sales report good growth iqube electric scooter become game changer details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+