TVS: ಎಥರ್, ಓಲಾಗೆ ಶುರುವಾಯ್ತು ನಡುಕ.. ಹೊಸ ಟಿವಿಎಸ್ ಐಕ್ಯೂಬ್ ಎಸ್‌ಟಿ ಕಾನ್ಸೆಪ್ಟ್ ಇ-ಸ್ಕೂಟರ್ ಅನಾವರಣ, ಹೇಗಿದೆ?
ಟಿವಿಎಸ್ ಮೋಟಾರ್ (TVS Motor) ನಂಬಿಕಾರ್ಹ ದ್ವಿಚಕ್ರ ವಾಹನ (Two Wheelers) ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ 'ಐಕ್ಯೂಬ್' ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಶುಕ್ರವಾರ ಕಂಪನಿಯು 2025ರ ಹೊಚ್ಚ ಹೊಸ ಐಕ್ಯೂಬ್ ಎಸ್‌ಟಿ (iQube ST) ಕಾನ್ಸೆಪ್ಟ್ ಇ-ಸ್ಕೂಟರ್‌ನ್ನು ಅನಾವರಣಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ನೂತನ 2025 ಟಿವಿಎಸ್ ಐಕ್ಯೂಬ್ ಎಸ್‌ಟಿ ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ವಿನ್ಯಾಸದಲ್ಲಿ ಹಳೆಯ ಐಕ್ಯೂಬ್ ಎಸ್‌ಟಿಯಂತೆ ಇದೆ. ಆದರೂ, ಈ ಹೊಸ ಸ್ಕೂಟರ್ ಕ್ವಿಲ್ಟೆಡ್ ಸೀಟ್, ಬ್ಯಾಕ್‌ರೆಸ್ಟ್ ಹಾಗೂ ವಿನೂತನವಾಗಿರುವ ಫ್ಲೋರ್‌ಬೋರ್ಡ್‌ನ್ನು ಒಳಗೊಂಡಿದೆ. ಜೊತೆಗೆ ನೋಡುಗರ ಕಣ್ಣು ಕುಕ್ಕುವ ಬಣ್ಣವನ್ನು ಒಳಗೊಂಡಿದೆ.

ಹೊಸ ಟಿವಿಎಸ್ ಐಕ್ಯೂಬ್ ಎಸ್‌ಟಿ ಕಾನ್ಸೆಪ್ಟ್ ಇ-ಸ್ಕೂಟರ್‌ನ ಬ್ಯಾಟರಿ ಕುರಿತಂತೆ ಕಂಪನಿಯು ಯಾವುದೇ ಅಧಿಕೃತ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದು ಈಗಿರುವ 'ಐಕ್ಯೂಬ್ ಎಸ್‌ಟಿ' ಮಾಡೆಲ್‌ನಂತೆಯೇ ಇರಲಿದೆ ಎಂದು ತಿಳಿದುಬಂದಿದೆ. ಸದ್ಯ ಖರೀದಿಗೆ ದೊರೆಯುವ ಐಕ್ಯೂಬ್ ಎಸ್‌ಟಿ 3.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 5.1 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 100 ರಿಂದ 150 ಕಿಲೋಮೀಟರ್ ರೇಂಜ್ ನೀಡುತ್ತದೆ.
ನೂತನ ಟಿವಿಎಸ್ ಐಕ್ಯೂಬ್ ಎಸ್‌ಟಿ ಕಾನ್ಸೆಪ್ಟ್ ಇ-ಸ್ಕೂಟರ್, ಹಿಂದಿನ ಮಾಡೆಲ್ ರೀತಿಯಲ್ಲಿಯೇ 7-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಒಳಗೊಂಡಿದೆ. ಜೊತೆಗೆ ಮುಂಭಾಗ (ಟೆಲಿಸ್ಕೋಪಿಕ್ ಫೋರ್ಕ್) ಹಾಗೂ ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್ ಹೊಂದಿದೆ.

ಟಿವಿಎಸ್ ಕಂಪನಿಯು ಹೊಸ ಐಕ್ಯೂಬ್ ಎಸ್‌ಟಿ ಕಾನ್ಸೆಪ್ಟ್ ಸ್ಕೂಟರ್‌ನ್ನು ಇದೇ ವರ್ಷದಲ್ಲಿ ಮಾರಾಟಕ್ಕೆ ತರಬಹುದು. ಅದನ್ನು ಐಕ್ಯೂಬ್ ಎಸ್‌ಟಿಯ ಹೊಸ ರೂಪಾಂತರವಾಗಿ (ವೇರಿಯೆಂಟ್) ಪರಿಚಯಿಸಬಹುದು ಎನ್ನಲಾಗಿದೆ. ಪ್ರಸ್ತುತ ಗ್ರಾಹಕರ ಖರೀದಿಗೆ ದೊರೆಯುವ ಟಿವಿಎಸ್ ಐಕ್ಯೂಬ್ ಎಸ್‌ಟಿ ಇ-ಸ್ಕೂಟರ್ ಗರಿಷ್ಠ ರೂ.1.85 ಲಕ್ಷವರೆಗೆ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ.
ಸದ್ಯ, ಗ್ರಾಹಕರ ಖರೀದಿಗೆ ದೊರೆಯುವ ಸಾಮಾನ್ಯ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್, ರೂ.94,999 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 75 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 75 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

ದೇಶೀಯ ಮಾರುಕಟ್ಟೆಯಲ್ಲಿ ನೂತನ 'ಟಿವಿಎಸ್ ಐಕ್ಯೂಬ್' ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುವ ಇ-ಸ್ಕೂಟರ್ ಆಗಿ ಹೊರಹೊಮ್ಮಿದೆ. ಡಿಸೆಂಬರ್‌ನಲ್ಲಿ (2024) 20,171 ಐಕ್ಯೂಬ್ ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2023ರ ಡಿಸೆಂಬರ್‌ನಲ್ಲಿ 11,288 ಯುನಿಟ್‌ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇಕಡ 79% ಬೆಳವಣಿಗೆ ಸಾಧಿಸಲಾಗಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








