2025ರ ಟಿವಿಎಸ್ ಜೂಪಿಟರ್ ಗಮ್ಮತ್ತು... ನಂ.1 ಸ್ಥಾನದಿಂದ ಹೋಂಡಾ ಆಕ್ಟಿವಾ ಕೆಳಗೆ?
ಭಾರತೀಯ ಸ್ಕೂಟರ್ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ನಂ.1 ಸ್ಕೂಟರ್ ಆಗಿ ಮುನ್ನುಗ್ಗುತ್ತಿದೆ. ಎರಡನೇ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿ ಟಿವಿಎಸ್ ಜೂಪಿಟರ್ 125 ಸಖತ್ ಪೈಪೋಟಿ ನೀಡುತ್ತಿದೆ. ಟಿವಿಎಸ್ 2025ರ ಜೂಪಿಟರ್ 125 ಸ್ಕೂಟರ್ ಗೆ ಪ್ರೀಮಿಯಂ ಅಪ್‌ಡೇಟ್‌ಗಳನ್ನು ಪರಿಚಯಿಸಿದ್ದು, ಈ ಬಾರಿ ಆಕ್ಟಿವಾಗೆ ಸರಿಯಾದ ಪೈಪೋಟಿ ನೀಡಿ ನಂ.1 ಸ್ಥಾನವನ್ನು ಜೂಪಿಟರ್ ಆಕ್ರಮಿಸಲಿದೆಯೇ? ಅಥವಾ ಆಕ್ಟೀವಾ ತನ್ನ ಗತ್ತನ್ನು ಹಾಗೆಯೇ ಉಳಿಸಿಕೊಂಡು ಪ್ರತಿಸ್ಪರ್ಧಿಯನ್ನು ಹಿಮ್ಮೆಟ್ಟಲಿದೆಯೇ? ಬನ್ನಿ ಯಾವ ಸ್ಕೂಟರ್ ಅತ್ಯುತ್ತಮವಾಗಿದೆ ಹೋಲಿಕೆ ಮಾಡಿ ನೋಡೋಣ.
ಬೆಲೆ: ಆಕ್ಟಿವಾ 125 ಸ್ಕೂಟರ್ ಡಿಎಲ್ಎಕ್ಸ್ ವೇರಿಯೆಂಟ್ 95,702 ರೂ. (ಎಕ್ಸ್ ಶೋರೂಂ), ಎಚ್-ಸ್ಮಾರ್ಟ್ ವೇರಿಯೆಂಟ್ 99,674 ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಟಿವಿಎಸ್ ಜೂಪಿಟರ್ 125 ಡ್ರಮ್ ಅಲಾಯ್, ಡಿಸ್ಕ್, ಡಿಟಿ ಎಸ್ ಎಕ್ಸ್‌ಸಿ ಮತ್ತು ಸ್ಮಾರ್ಟ್ ಎಕ್ಸೊನೆಟ್ ಎಂಬ ನಾಲ್ಕು ವೇರಿಯೆಂಟ್‌ಗಳನ್ನು ಹೊಂದಿದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 80,740 ದಿಂದ ರೂ. 92,001 ಗಳಾಗಿದೆ.

ಫೀಚರ್ಸ್: ಆಕ್ಟಿವಾ 125 ಸ್ಕೂಟರ್‌ನಲ್ಲಿ 4.2 ಇಂಚಿನ ಡಿಜಿಟಲ್ ಟಿಎಫ್‌ಟಿ ಡಿಸ್ಪ್ಲೇ ನೀಡಲಾಗಿದ್ದು, ಇದು ಡೇ-ನೈಟ್ ಡಿಸ್ಪ್ಲೇ ಮೋಡ್‌ಗಳನ್ನು ಹೊಂದಿದೆ. ಇದು ಹೋಂಡಾ ರೋಡ್ ಸಿಂಕ್ ಅಪ್ಲಿಕೇಶನ್‌ಗೆ ಸಂಪರ್ಕಗೊಳ್ಳುತ್ತದೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆ ಮತ್ತು ಮ್ಯೂಸಿಕ್ ಅನ್ನು ಲಕಂಟ್ರೋಲ್ ಮಾಡಬಹುದು. ರಿಯಲ್ ಟೈಮ್ ಕ್ಲೈಮೆಟ್ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ. ಟಾಪ್ ಆಕ್ಟಿವಾ ಟ್ರಿಮ್ ಸ್ಕೂಟರ್ ಅನ್ನು ಪತ್ತೆಹಚ್ಚಲು ಸಹಾಯ ಮಾಡುವ ಸ್ಮಾರ್ಟ್ ಕೀಯನ್ನು ಸಹ ನೀಡುತ್ತದೆ.
ಜೂಪಿಟರ್ 125 ಸ್ಕೂಟರ್‌ನಲ್ಲಿ ಟಿಎಫ್‌ಟಿ ಡಿಸ್ ಪ್ಲೇ, ನ್ಯಾವಿಗೇಷನ್ ಸಿಸ್ಟಂ, ಕನೆಕ್ಟೆಡ್ ಟೆಕ್, ಕರೆ ಮತ್ತು ಸೋಷಿಯಲ್ ಮೀಡಿಯಾ ಅಲರ್ಟ್‌ಗಳು, ಆವರೇಜ್ ಫ್ಯೂಲ್ ಎಕಾನಮಿ, ಲೈವ್ ಸ್ಪೋರ್ಟ್ಸ್, ಕ್ಲೈಮೆಟ್ ಅಪ್‌ಡೇಟ್ ಫೀಚರ್‌ಗಳನ್ನು ಹೊಂದಿದೆ. ಇದು 33-ಲೀಟರ್ ಅಂಡರ್-ಸೀಟ್ ಸ್ಟೋರೇಜ್, ಫ್ರಂಟ್ 2-ಲೀಟರ್ ಗ್ಲೋವ್ ಬಾಕ್ಸ್, ಕುಶನ್ ಪಿಲಿಯನ್ ಬ್ಯಾಕ್‌ರೆಸ್ಟ್, ಯುಎಸ್‌ಬಿ ಚಾರ್ಜರ್ ಹೊಂದಿದೆ.

ಎಂಜಿನ್: ನವೀಕರಿಸಿದ ಜೂಪಿಟರ್ 125 ಸ್ಕೂಟರ್ 124.8 ಸಿಸಿ ಎಂಜಿನ್ ಹೊಂದಿದ್ದು, 6,500 ಆರ್‌ಪಿಎಂನಲ್ಲಿ 8.4 ಬಿಹೆಚ್ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 11.1 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆಕ್ಟಿವಾ 125 ಸ್ಕೂಟರ್ 123.92 ಸಿಸಿ ಎಂಜಿನ್ ಸಹಾಯದಿಂದ 6,500 ಆರ್‌ಪಿಎಂನಲ್ಲಿ 8.3 ಬಿಹೆಚ್ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 10.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಆಯಾಮಗಳು: ಕುತೂಹಲಕಾರಿ ಸಂಗತಿಯೆಂದರೆ, ಜೂಪಿಟರ್ 1,275 ಎಂಎಂ ಉದ್ದದ ವ್ಹೀಲ್ ಬೇಸ್ ಹೊಂದಿದ್ದು, ಇದು ಆಕ್ಟಿವಾ 125 ಗಿಂತ 15 ಎಂಎಂ ಅನುಕೂಲಕರವಾಗಿದೆ. ಜೂಪಿಟರ್ ಉದ್ದ ಮತ್ತು ಎತ್ತರದಲ್ಲಿಯೂ ಉತ್ತಮವಾಗಿದೆ. ಆದರೆ ಆಕ್ಟಿವಾ 16 ಎಂಎಂ ಹೆಚ್ಚು ಅಗಲವಾಗಿದೆ. ಎರಡೂ ಸ್ಕೂಟರ್ ಗಳು 765 ಎಂಎಂ ಸೀಟ್ ಎತ್ತರವನ್ನು ಹೊಂದಿವೆ. ಆಕ್ಟಿವಾ 712 ಎಂಎಂಗೆ ಹೋಲಿಸಿದರೆ ಜೂಪಿಟರ್ 790 ಎಂಎಂ ಉದ್ದವಾದ ಸೀಟ್ ಹೊಂದಿದೆ.

ಬಣ್ಣಗಳು: ಆಕ್ಟಿವಾ 125 ಸ್ಕೂಟರ್ ರೆಬೆಲ್ ರೆಡ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಪರ್ಲ್ ಪ್ರೆಸಿಯಸ್ ವೈಟ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಮತ್ತು ಪರ್ಲ್ ಡೀಪ್ ಗ್ರೌಂಡ್ ಗ್ರೇ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ. ಟಿವಿಎಸ್ ಜೂಪಿಟರ್ 125 ಸ್ಕೂಟರ್ ರೆಡ್, ಮ್ಯಾಟ್ ಕಾಪರ್ ಬ್ರಾಂಜ್, ಐವರಿ ಬ್ರೌನ್, ಐವರಿ ಗ್ರೇ, ಡ್ವಾನ್ ಆರೆಂಜ್, ಇಂಡಿಬ್ಲೂ, ಟೈಟಾನಿಯಂ ಗ್ರೇ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications