TVS: ಟಿವಿಎಸ್ ಜುಪಿಟರ್ CNG ಸ್ಕೂಟರ್ ಶೀಘ್ರದಲ್ಲೆ ಬಿಡುಗಡೆ! 84 ಕಿ.ಮೀ ಮೈಲೇಜ್!
ಟಿವಿಎಸ್ ಮೋಟಾರ್ ಕಂಪನಿ ಕಳೆದ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಜುಪಿಟರ್ ಸಿಎನ್‌ಜಿ ಸ್ಕೂಟರ್ (TVS Jupiter CNG Scooter) ಅನ್ನು ಅನಾವರಣಗೊಳಿಸಿದೆ. ಇದು ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಿದೆ. ಕಂಪನಿಯು ಅಕ್ಟೋಬರ್ 2025 ರಲ್ಲಿ ಈ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಲ್ಲ ಮೂಲಗಳ ಪ್ರಕಾರ ಇದು 90,000 ರೂ.ನಿಂದ 1,00,000 ರೂ.ಗಳ ನಿರೀಕ್ಷಿತ ಬೆಲೆಯಲ್ಲಿ ಲಭ್ಯವಾಗಬಹುದು ಎನ್ನಲಾಗಿದೆ.
ಈ ಸಿಎನ್‌ಜಿ ವಾಹನವು ಟಿವಿಎಸ್‌ನ ಇಂಧನ ಚಾಲಿತ ಯಶಸ್ವಿ ಜುಪಿಟರ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಸಿಎನ್‌ಜಿ ಟ್ಯಾಂಕ್ ಅನ್ನು ಸೀಟಿನ ಕೆಳಗೆ ಇರಿಸಲಾಗಿರುವ ಕಾರಣ ಅಂಡರ್ ಸೀಟ್ ಸ್ಟೋರೇಜ್ ಇದರಲ್ಲಿ ಸಿಗುವುದಿಲ್ಲ. ಹೆಚ್ಚುವರಿಯಾಗಿ, ಸ್ಕೂಟರ್‌ನ ಫ್ಲೋರ್ ರ್ಬೋರ್ಡ್‌ನಲ್ಲಿ 2-ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಸಹ ಹೊಂದಿದೆ.

ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಇದರಲ್ಲಿ ಸಿಎನ್‌ಜಿ ಟ್ಯಾಂಕ್ ಜೊತೆಗೆ 2 ಲೀಟರ್‌ನ ಪೆಟ್ರೋಲ್ ಟ್ಯಾಂಕ್ ಕೂಡ ನೀಡಲಾಗಿದ್ದು, ಜುಪಿಟರ್ ಸಿಎನ್‌ಜಿ ಒಂದು ಕೆ.ಜಿ ಸಿಎನ್ ಜಿಯಲ್ಲಿ 84 ಕಿ.ಮೀ ಮೈಲೇಜ್ ನಿಡುತ್ತದೆ. ಒಮ್ಮೆ ಎರಡೂ ಟ್ಯಾಂಕ್‌ಗಳನ್ನು ಸಂಪೂರ್ಣವಾಗಿ ತುಂಬಿಸಿದರೆ 226 ಕಿ.ಮೀ ಮೈಲೇಜ್ ಪಡೆಯಬಹುದು ಎಂದು ಕಂಪನಿ ಹೇಳಿದೆ.
ಟಿವಿಎಸ್ ಜುಪಿಟರ್ ಸಿಎನ್‌ಜಿ ಟ್ಯಾಂಕ್ ಅನ್ನು 1.4 ಕೆ.ಜಿ ತುಂಬಿಸಬಹುದಾದ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಟ್ಯಾಂಕ್ ಅನ್ನು ಸಾಮಾನ್ಯ ಜುಪಿಟರ್ 125 ನಲ್ಲಿ ಕಾಣುವ ಅಂಡರ್ ಸೀಟ್ ಬೂಟ್ ಸ್ಥಳದಲ್ಲಿ ಇರಿಸಲಾಗಿದೆ. ಸಿಎನ್‌ಜಿ ಪ್ರೆಶರ್ ಗೇಜ್ ಅನ್ನು ತೋರಿಸಲು ಐಲೆಟ್ ಮತ್ತು ಅದರ ಸುತ್ತಲೂ ಫಿಲ್ಲರ್ ನಾಜಿಲ್ ಅನ್ನು ಅಳವಡಿಸಲಾಗಿದೆ.

ಎಂಜಿನ್ ವಿಷಯಕ್ಕೆ ಬಂದರೆ OBD2B ಮಾನದಂಡಗಳಿಗೆ ಅನುಸಾರವಾಗಿ 124.8cc ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 5.3Kw ಪವರ್ ಹಾಗೂ 9.4Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮುಂಬರಲಿರುವ ಹೊಸ ಟಿವಿಎಸ್ ಜುಪಿಟರ್ ಸಿಎನ್‌ಜಿ ಸ್ಕೂಟರ್ ಗಂಟೆಗೆ 84 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಜುಪಿಟರ್ 125 ಸಿಎನ್‌ಜಿ ಕಾನ್ಸೆಪ್ಟ್ ಹಂತದಲ್ಲಿದ್ದು, ಭಾರತದಲ್ಲಿ ಅಕ್ಟೋಬರ್ 2025 ರಲ್ಲಿ ಬಹುತೇಕ ಬಿಡುಗಡೆ ಆಗಲಿದೆ ಎಂಬುದು ಖಚಿತವಾಗಿದೆ. ಉಳಿದಂತೆ ಜುಪಿಟರ್ ಸಿಎನ್‌ಜಿ ಮಾದರಿಯು ಪೆಟ್ರೋಲ್ ಚಾಲಿತ ಜುಪಿಟರ್ 125 ಸ್ಕೂಟರ್‌ನಂತೆಯೇ ಇದೆ. ವಿನ್ಯಾಸ, ವೈಶಿಷ್ಟ್ಯಗಳು, ವೀಲ್‌ಗಳು ಅಥವಾ ಬ್ರೇಕ್ ಆಗಿರಲಿ ಎಲ್ಲವೂ ಒಂದಕ್ಕೊಂದು ಹೋಲುತ್ತವೆ.

ಜುಪಿಟರ್ ಸಿಎನ್‌ಜಿ ಸ್ಕೂಟರ್‌ನ್ನು ಹೋಲುವ ಪ್ರಸ್ತುತ ಲಭ್ಯವಿರುವ ಸ್ಕೂಟರ್‌ಗಳೆಂದರೆ ಒಕಿಯಾ ಫಾಸ್ಟ್ ಎಫ್ 2 ಟಿ, ಒಕಿನಾವಾ ರಿಡ್ಜ್ ಪ್ಲಸ್ ಮತ್ತು ಬೆನ್ಲಿಂಗ್ ಔರಾ ಮಾದರಿಗಳಾಗಿವೆ. ಜುಪಿಟರ್ ಸಿಎನ್‌ಜಿಯನ್ನು ಹೋಲುವ ಮತ್ತೊಂದು ಸ್ಕೂಟರ್ ಹೋಂಡಾ ಆಕ್ಟಿವಾ 7 ಜಿ ಆಗಿದ್ದು, ಇದನ್ನು ಏಪ್ರಿಲ್ 2025 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








