Tvs Jupiter: ಆಫೀಸ್‌ಗೆ ಹೋಗಲು ಬೆಸ್ಟ್ ಚಾಯ್ಸ್.. 53 ಕಿ.ಮೀ ಮೈಲೇಜ್, ಟಿವಿಎಸ್ ಜೂಪಿಟರ್‌ನ ಹೊಸ ದರವೆಷ್ಟು?

ಸೆ.22 ರಿಂದ ದೇಶಾದ್ಯಂತ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. 350 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯವಿರುವ ಸಾಮಾನ್ಯ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಇಳಿಸಲಾಗಿದೆ. ಅದರ ಸಂಪೂರ್ಣ ಲಾಭವು ಟಿವಿಎಸ್ ಜೂಪಿಟರ್ (Tvs Jupiter) ಸ್ಕೂಟರ್‌ಗೂ ಲಭ್ಯವಿದೆ. ನಾವಿಲ್ಲಿ ಈ ಗಾಡಿಯ ಪ್ರತಿಯೊಂದು ರೂಪಾಂತರಗಳ (ವೇರಿಯೆಂಟ್) ಹೊಸ 'ಎಕ್ಸ್-ಶೋರೂಂ' ದರ ಎಷ್ಟಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.

ಟಿವಿಎಸ್ ಜೂಪಿಟರ್ 125 (Tvs Jupiter 125):

ಇದು ಶಕ್ತಿಶಾಲಿಯಾದ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಜಿಎಸ್‌ಟಿ ಪರಿಷ್ಕರಣೆ ಬಳಿಕ, ಕಡಿಮೆ ಬೆಲೆಯಲ್ಲಿಯೂ ದೊರೆಯುತ್ತಿದೆ. ಇದರ ಡ್ರಮ್ - ಅಲಾಯ್ ರೂಪಾಂತರ ರೂ.82,900, ಡಿಸ್ಕ್ ರೂಪಾಂತರ ರೂ.87,400, ಡಿಟಿ ಎಸ್ಎಕ್ಸ್‌ಸಿ ರೂಪಾಂತರ, ರೂ.89,600 ಹಾಗೂ ಸ್ಮಾರ್ಟ್‌ಕನೆಕ್ಟ್ ರೂಪಾಂತರ ರೂ.92,300 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Tvs Jupiter Scooter Variants Wise New Price Details

ಈ ಸ್ಕೂಟರ್ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಪ್ರಿಸ್ಟೈನ್ ವೈಟ್, ಇಂಡಿಬ್ಲೂ, ಡಾನ್ ಆರೆಂಜ್ ಹಾಗೂ ಟೈಟಾನಿಯಂ ಗ್ರೇ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 1,852 ಎಂಎಂ ಉದ್ದ, 681 ಎಂಎಂ ಅಗಲ ಹಾಗೂ 1,168 ಎಂಎಂ ಎತ್ತರವಿದೆ. ಜೊತೆಗಿದು 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,275 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ ಜೂಪಿಟರ್ 125 ಸ್ಕೂಟರ್, 124.8 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 50 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ. 12 ಇಂಚಿನ ಅಲಾಯ್ ವೀಲ್‌ಗಳು & 90/90-12 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.

Tvs Jupiter Scooter Variants Wise New Price Details

ಟಿವಿಎಸ್ ಜುಪಿಟರ್ 110 (Tvs Jupiter 110):

ಇದು ವಿಶ್ವಾಸಾರ್ಹ ಸ್ಕೂಟರ್ ಆಗಿದೆ. ಜಿಎಸ್‌ಟಿ ಪರಿಷ್ಕರಣೆ ನಂತರ, ಅಗ್ಗದ ದರದಲ್ಲೂ ಲಭ್ಯವಿದೆ. ಇದರ ಡ್ರಮ್ ರೂ. 75,900, ಡ್ರಮ್ - ಅಲಾಯ್ ರೂ.79,900, ಡ್ರಮ್ ಎಸ್ಎಕ್ಸ್‌ಸಿ ರೂ.83,700, ಡಿಕ್ಸ್ ಎಸ್ಎಕ್ಸ್‌ಸಿ ರೂ.87,200 ಮತ್ತು ಸ್ಪೆಷಲ್ ಎಡಿಷನ್ ರೂ.88,100 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಈ ಸ್ಕೂಟರ್ ಸಹ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಸ್ಟಾರ್‌ಲೈಟ್ ಬ್ಲೂ ಗ್ಲಾಸ್, ಡಾನ್ ಬ್ಲೂ ಮ್ಯಾಟ್, ಗ್ಯಾಲಕ್ಟಿಕ್ ಕಾಪರ್ ಮ್ಯಾಟ್ ಮತ್ತು ಮೀಟಿಯರ್ ರೆಡ್ ಗ್ಲಾಸ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. 1,848 ಎಂಎಂ ಉದ್ದ, 665 ಎಂಎಂ ಅಗಲ ಹಾಗೂ 1,158 ಎಂಎಂ ಎತ್ತರವಿದೆ. 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,275 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ಹೊಸ ಜುಪಿಟರ್ 110 ಸ್ಕೂಟರ್, 113.3 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್‌ನ್ನು ಒಳಗೊಂಡಿದೆ. 53 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ & ಯುಎಸ್‌‍ಬಿ ಚಾರ್ಜರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ಡಿಸ್ಕ್ ಮತ್ತು ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಟಿವಿಎಸ್ ಜೂಪಿಟರ್ ಸಿಎನ್‌ಜಿ (TVS Jupiter CNG):

ಈ ಸಿಎನ್‌ಜಿ ಚಾಲಿತ ಸ್ಕೂಟರ್ ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ರೂ.90,000 ರಿಂದ ರೂ.1 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಹೊಂದಿರುವ ನಿರೀಕ್ಷೆಯಿದೆ. 124.8 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್‌ನ್ನು ಪಡೆದಿದೆ. 226 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಎಲ್‌ಇಡಿ ಹೆಡ್‌ಲೈಟ್, ಮೊಬೈಲ್ ಚಾರ್ಜಿಂಗ್ ಪೋರ್ಟ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

More from DriveSpark

Article Published On: Tuesday, September 30, 2025, 23:44 [IST]
English summary
Tvs jupiter scooter variants wise new price details
Read more on tvs motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+