ದೇಶೀಯ ಬ್ರಾಂಡ್‌ನ ಖದರ್: ಆಗಸ್ಟ್‌ನಲ್ಲಿ 5 ಲಕ್ಷ ವಾಹಗಳ ಅದ್ದೂರಿ ಮಾರಾಟ: ಯಾವುದೀ ಬ್ರಾಂಡ್?
ಭಾರತದ ಅತ್ಯಂತ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್, ಆಗಸ್ಟ್ ತಿಂಗಳಲ್ಲಿ ದಾಖಲೆಯ ಮಾರಾಟವನ್ನು ದಾಖಲಿಸಿದೆ. ದ್ವಿಚಕ್ರ, ತ್ರಿಚಕ್ರ ಹಾಗೂ ಎಲೆಕ್ಟ್ರಿಕ್ ವಾಹನ ವಿಭಾಗಗಳಲ್ಲಿ ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ ಎಂದು ಕಂಪನಿ ಹೇಳಿದೆ. ಟಿವಿಎಸ್ ಮೋಟಾರ್ ಕಂಪನಿಯು ಆಗಸ್ಟ್ 2025 ರಲ್ಲಿ ಬರೋಬ್ಬರಿ 5,09,536 ಯುನಿಟ್ ವಾಹನಗಳ ಮಾಸಿಕ ಮಾರಾಟವನ್ನು ದಾಖಲಿಸಿದ್ದು, ಆಗಸ್ಟ್ 2024 ರಲ್ಲಿ ಮಾರಾಟವಾಗಿದ್ದ 3,91,588 ಯುನಿಟ್ ವಾಹನಗಳಿಗೆ ಹೋಲಿಸಿದರೆ 30% ರಷ್ಟು ಬೆಳವಣಿಗೆ ಕಂಡಿದೆ.
ದ್ವಿಚಕ್ರ ವಾಹನ: ಒಟ್ಟು ದ್ವಿಚಕ್ರ ವಾಹನಗಳು 30% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಆಗಸ್ಟ್ 2024 ರಲ್ಲಿ 3,78,841 ಯುನಿಟ್‌ಗಳಿಂದ ಆಗಸ್ಟ್ 2025 ರಲ್ಲಿ 4,90,788 ಯುನಿಟ್ ವಾಹನಗಳು ಮಾರಾಟವಾಗಿವೆ. ದೇಶೀಯ ದ್ವಿಚಕ್ರ ವಾಹನಗಳು 28% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಆಗಸ್ಟ್ 2024 ರಲ್ಲಿ 2,89,073 ಯುನಿಟ್‌ಗಳಿಂದ ಆಗಸ್ಟ್ 2025 ರಲ್ಲಿ 3,68,862 ಯುನಿಟ್ ವಾಹನಗಳು ಮಾರಾಟವಾಗಿವೆ.

ಇದರಲ್ಲಿ ಮೋಟಾರ್ ಸೈಕಲ್ ವಿಭಾಗವು 30% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಆಗಸ್ಟ್ 2024 ರಲ್ಲಿ 1,70,486 ಯುನಿಟ್‌ಗಳಿಂದ ಆಗಸ್ಟ್ 2025 ರಲ್ಲಿ 221,870 ಯುನಿಟ್‌ಗಳು ಮಾರಾಟವಾಗಿವೆ. ಸ್ಕೂಟರ್ ವಿಭಾಗವು 36% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಆಗಸ್ಟ್ 2024 ರಲ್ಲಿ 163,629 ಯುನಿಟ್ ಸ್ಕೂಟರ್‌ಗಳು ಮಾರಾಟವಾಗಿದ್ದರೆ, ಆಗಸ್ಟ್ 2025 ರಲ್ಲಿ 2,22,296 ಯುನಿಟ್ ವಾಹನಗಳು ಮಾರಾಟವಾಗಿವೆ.
ಎಲೆಕ್ಟ್ರಿಕ್ ವಾಹನ: ಆಗಸ್ಟ್ 2024 ರಲ್ಲಿ 24,779 ಯುನಿಟ್ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಆಗಸ್ಟ್ 2025 ರಲ್ಲಿ 25,138 ಯುನಿಟ್ ಇವಿ ಮಾರಾಟವನ್ನು ದಾಖಲಿಸಿದೆ. ಸದ್ಯ ಟಿವಿಎಸ್ ತನ್ನ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚು ಗಮನಹರಿಸುತ್ತಿದೆ. ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಕೂಡ ಬಿಡುಗಡೆ ಮಾಡಿದ್ದು, ಇದರ ಬಗ್ಗೆ ಲೇಖನದ ಕೊನೆಯಲ್ಲಿ ವಿವರಿಸಲಾಗಿದೆ.

ಅಂತರರಾಷ್ಟ್ರೀಯ ವ್ಯವಹಾರ: ಕಂಪನಿಯ ಒಟ್ಟು ರಫ್ತುಗಳು 35% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಆಗಸ್ಟ್ 2024 ರಲ್ಲಿ 99,976 ಯುನಿಟ್‌ಗಳಿಂದ ಆಗಸ್ಟ್ 2025 ರಲ್ಲಿ 1,35,367 ಯುನಿಟ್‌ಗಳಿಗೆ ಮಾರಾಟ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳ ರಫ್ತುಗಳು 36% ರಷ್ಟು ಹೆಚ್ಚಾಗಿದ್ದು, ಆಗಸ್ಟ್ 2024 ರಲ್ಲಿ 89,768 ಯುನಿಟ್‌ಗಳಿಂದ ಆಗಸ್ಟ್ 2025 ರಲ್ಲಿ 1,21,926 ಯುನಿಟ್‌ಗಳಿಗೆ ಮಾರಾಟ ಏರಿಕೆಯಾಗಿದೆ.
ತ್ರಿಚಕ್ರ ವಾಹನಗಳು: ಇನ್ನು ಭಾರತೀಯ ಆಟೋ ರಿಕ್ಷಾ ವಿಭಾಗದಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಟಿವಿಎಸ್, ಉತ್ತಮ ಲಾಭವನ್ನು ಕಂಡಿದೆ. ಕಂಪನಿಯ ತ್ರಿಚಕ್ರ ವಾಹನಗಳು 47% ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಆಗಸ್ಟ್ 2024 ರಲ್ಲಿ ಮಾರಾಟವಾಗಿದ್ದ 12,747 ಯುನಿಟ್‌ಗಳಿಂದ ಆಗಸ್ಟ್ 2025 ರಲ್ಲಿ 18,748 ಯುನಿಟ್‌ಗಳಿಗೆ ಮಾರಾಟ ಏರಿಕೆಯಾಗಿದೆ.

ಟಿವಿಎಸ್ ಹೊಸ ಇವಿ ಸ್ಕೂಟರ್ ಬಿಡುಗಡೆ
ಹೊಸ ಎಲೆಕ್ಟ್ರಿಕ್ ಕೊಡುಗೆಯಾದ ಟಿವಿಎಸ್ ಆರ್ಬಿಟರ್ (TVS Orbiter) ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಕೂಟರ್ ರೂ.99,900 (ಎಕ್ಸ್ - ಶೋರೂಂ) ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಟಿವಿಎಸ್ ಆರ್ಬಿಟರ್, 158 ಕಿ.ಮೀ ಐಡಿಸಿ ರೇಂಜ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಸುಧಾರಿತ ಸಂಪರ್ಕಿತ ವೈಶಿಷ್ಟ್ಯಗಳಂತಹ ಹಲವಾರು ವಿಭಾಗದಲ್ಲೇ ಮೊದಲ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಸ್ಕೂಟರ್ ಲೈವ್ ಲೊಕೇಷನ್ - ಟ್ರ್ಯಾಕಿಂಗ್, ವೆಹಿಕಲ್ ನ್ಯಾವಿಗೇಟ್, ಕ್ರ್ಯಾಶ್ ಮತ್ತು ಫಾಲ್ ಅಲರ್ಟ್ ಗಳು, ಎಮರ್ಜೆನ್ಸಿ ನೋಟಿಫಿಕೇಷನ್, ಟೋವಿಂಗ್ ಅಲರ್ಟ್ ಗಳನ್ನು ನೀಡುತ್ತದೆ. ಇವಿಷ್ಟೇ ಅಲ್ಲದೆ ಸ್ಕೂಟರ್ ಕ್ರ್ಯಾಶ್ ಅಲರ್ಟ್‌ಗಳು ಮತ್ತು ಫಾಲ್ ಡಿಟೆಕ್ಷನ್, ಜಿಯೋ-ಫೆನ್ಸಿಂಗ್ ಮತ್ತು ಟೈಮ್-ಫೆನ್ಸಿಂಗ್ ಎಚ್ಚರಿಕೆ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ದೃಢವಾದ ಬಾಡಿ ಬ್ಯಾಲೆನ್ಸ್‌ನೊಂದಿಗೆ ಸಂಪರ್ಕಿತ ವೈಶಿಷ್ಟ್ಯಗಳ ಸುಧಾರಿತ ಸೂಟ್‌ನೊಂದಿಗೆ ಬರುತ್ತದೆ.


Click it and Unblock the Notifications








