TVS: ದೇಶೀಯ ಬ್ರಾಂಡ್ ಗತ್ತು: ಮಾರಾಟದಲ್ಲಿ ಹೊಸ ದಾಖಲೆ... ಧೂಳೆಬ್ಬಿಸಿದೆ ಜಿಗಿಯುವ ಕುದುರೆ!
ಟಿವಿಎಸ್ (TVS) ಮೋಟಾರ್ ಕಂಪನಿಯು ಮಾರ್ಚ್ 2024 ರಲ್ಲಿ 3,54,592 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದು, ಈ ಬಾರಿ (ಮಾರ್ಚ್ 2025) ಅದಕ್ಕೆ ದುಪ್ಪಟ್ಟು ಮಾರಾಟವನ್ನು ದಾಖಲಿಸಿದೆ. ಬರೋಬ್ಬರಿ 4,14,687 ಯುನಿಟ್ ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ17 ರಷ್ಟು ಏರಿಕೆಯನ್ನು ಸಾಧಿಸಿದೆ. ದ್ವಿಚಕ್ರ ವಾಹನಗಳ ವಿಷಯಕ್ಕೆ ಬಂದರೆ ಮಾರ್ಚ್ 2024 ರಲ್ಲಿ 3,44,446 ಯುನಿಟ್ ವಾಹನಗಳಿಂದ ಮಾರ್ಚ್ 2025 ರಲ್ಲಿ 4,00,120 ಯುನಿಟ್ ವಾಹನಗಳ ಮಾರಾಟ ಏರಿಕೆಯಾಗಿ ಒಟ್ಟು ದ್ವಿಚಕ್ರ ವಾಹನಗಳು ಶೇ16 ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ.
ರಫ್ತು ಹೊರತುಪಡಿಸಿ ದೇಶೀಯವಾಗಿ ದ್ವಿಚಕ್ರ ವಾಹನಗಳು ಶೇ14 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರ್ಚ್ 2024 ರಲ್ಲಿ 2,60,532 ಯುನಿಟ್‌ಗಳಿಂದ ಮಾರ್ಚ್ 2025 ರಲ್ಲಿ 2,97,622 ಯುನಿಟ್ ವಾಹನಗಳಿಗೆ ಮಾರಾಟ ಏರಿಕೆಯಾಗಿದೆ. ಮೋಟಾರ್ ಸೈಕಲ್ ವಿಭಾಗದಲ್ಲಿ ಶೇ15 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರ್ಚ್ 2024 ರಲ್ಲಿ 1,71,611 ಯುನಿಟ್‌ಗಳಿಂದ ಮಾರ್ಚ್ 2025 ರಲ್ಲಿ 1,96,734 ಯುನಿಟ್‌ಗಳಿಗೆ ಮಾರಾಟ ಏರಿಕೆಯಾಗಿದೆ.

ಸ್ಕೂಟರ್ ವಿಭಾಗಕ್ಕೆ ಬಂದರೆ ಶೇ27 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2024 ಮಾರ್ಚ್‌ನಲ್ಲಿ 1,31,472 ಯುನಿಟ್‌ಗಳಿಂದ ಮಾರ್ಚ್ 2025 ರಲ್ಲಿ 1,66,297 ಯುನಿಟ್‌ಗಳಿಗೆ ಮಾರಾಟ ಏರಿಕೆಯಾಗಿದೆ. ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಬಂದರೆ ಎಲೆಕ್ಟ್ರಿಕ್ ವಾಹನಗಳು ಶೇ77 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟವು ಮಾರ್ಚ್ 2024 ರಲ್ಲಿ 15,250 ಯುನಿಟ್‌ಗಳಿಂದ ಮಾರ್ಚ್ 2025 ರಲ್ಲಿ 26,935 ಯುನಿಟ್‌ಗಳಿಗೆ ಏರಿದೆ.
ಅಂತರರಾಷ್ಟ್ರೀಯ ವ್ಯವಹಾರ ವಿಷಯಕ್ಕೆ ಬಂದರೆ ಕಂಪನಿಯ ಒಟ್ಟು ರಫ್ತುಗಳು ಶೇ23 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟವು ಮಾರ್ಚ್ 2024 ರಲ್ಲಿ 91,972 ಯುನಿಟ್‌ಗಳಿಂದ ಮಾರ್ಚ್ 2025 ರಲ್ಲಿ 1,13,464 ಯುನಿಟ್‌ಗಳಿಗೆ ಏರಿದೆ. ದ್ವಿಚಕ್ರ ವಾಹನಗಳ ರಫ್ತುಗಳು ಶೇ22 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟವು ಮಾರ್ಚ್ 2024 ರಲ್ಲಿ 83,914 ಯುನಿಟ್‌ಗಳಿಂದ ಮಾರ್ಚ್ 2025 ರಲ್ಲಿ 1,02,498 ಯುನಿಟ್‌ಗಳಿಗೆ ಏರಿದೆ.

ತ್ರಿಚಕ್ರ ವಾಹನ ವಿಭಾಗಕ್ಕೆ ಬಂದರೆ ಕಂಪನಿಯ ತ್ರಿಚಕ್ರ ವಾಹನಗಳು ಶೇ44 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟವು ಮಾರ್ಚ್ 2024 ರಲ್ಲಿ 10,146 ಯುನಿಟ್‌ಗಳಿಂದ ಮಾರ್ಚ್ 2025 ರಲ್ಲಿ 14,567 ಯುನಿಟ್‌ಗಳಿಗೆ ಏರಿದೆ. 2024-25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ, ಕಂಪನಿಯ ದ್ವಿಚಕ್ರ ವಾಹನವು ಶೇ14 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2023-24ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 10.32 ಲಕ್ಷ ಯೂನಿಟ್‌ಗಳಿಂದ 11.80 ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗಿದೆವಾಗಿದೆ.
ಕಂಪನಿಯ ತ್ರಿಚಕ್ರ ವಾಹನವು ಶೇ21 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2023-24ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 0.30 ಲಕ್ಷ ಯೂನಿಟ್‌ಗಳಿಂದ 2024-25ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 0.37 ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗಿದೆ. ಒಟ್ಟು ರಫ್ತುಗಳು ಶೇ31 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2023-24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ 2.60 ಲಕ್ಷ ಯೂನಿಟ್‌ಗಳಿಂದ 2024-25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 3.40 ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗಿದೆ.

2024-25ನೇ ಆರ್ಥಿಕ ವರ್ಷದಲ್ಲಿ, ಕಂಪನಿಯು ಶೇ13 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಒಟ್ಟು ಮಾರಾಟವು 2023-24ನೇ ಆರ್ಥಿಕ ವರ್ಷದಲ್ಲಿ 41.91 ಲಕ್ಷ ಯೂನಿಟ್‌ಗಳಿಂದ 47.44 ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗಿದೆ. ಕಂಪನಿಯ ದ್ವಿಚಕ್ರ ವಾಹನಗಳ ಮಾರಾಟವು ಶೇ12 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, 2023-24ನೇ ಹಣಕಾಸು ವರ್ಷದಲ್ಲಿ 38.51 ಲಕ್ಷ ಯೂನಿಟ್‌ಗಳಿಂದ 2024-25ನೇ ಆರ್ಥಿಕ ವರ್ಷದಲ್ಲಿ 43.30 ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗಿದೆ.
ಕಂಪನಿಯ ತ್ರಿಚಕ್ರ ವಾಹನವು 2023-24ನೇ ಹಣಕಾಸು ವರ್ಷದಲ್ಲಿ 1.46 ಲಕ್ಷ ಯೂನಿಟ್‌ಗಳಿಂದ 2024-25ನೇ ಆರ್ಥಿಕ ವರ್ಷದಲ್ಲಿ 1.35 ಲಕ್ಷ ಯೂನಿಟ್‌ಗಳನ್ನು ನೋಂದಾಯಿಸಿದೆ. ಒಟ್ಟು ರಫ್ತುಗಳು ಶೇ18 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟವು 2023-24ನೇ ಆರ್ಥಿಕ ವರ್ಷದಲ್ಲಿ 10.13 ಲಕ್ಷ ಯೂನಿಟ್‌ಗಳಿಂದ 2024-25ನೇ ಆರ್ಥಿಕ ವರ್ಷದಲ್ಲಿ 11.95 ಲಕ್ಷ ಯೂನಿಟ್‌ಗಳಿಗೆ ಏರಿಕೆಯಾಗಿದೆ.


Click it and Unblock the Notifications








