ಪ್ರತಿಸ್ಪರ್ಧಿಗಳ ಪೈಪೋಟಿ ನಡುವೆ ಧೂಳೆಬ್ಬಿಸದ ಟಿವಿಎಸ್: ಮುಗಿಬಿದ್ದು ಖರೀದಿಸಿದ ಜನ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್, ದಾಖಲೆಯ ಮಾರಾಟವನ್ನು ದಾಖಲು ಮಾಡಿದೆ. ಭಾರತದಲ್ಲಿ ಬಹುತೇಕ ದ್ವಿಚಕ್ರವಾಹನ ಮಾರಾಟವನ್ನು ಹೊಂದಿರುವ ಟಿವಿಎಸ್ ಕಂಪನಿಯು, ತನ್ನ ಪ್ರತಿಸ್ಪರ್ಧಿಗಳಾದ ಬಜಾಜ್, ಹೀರೋ, ಹೋಂಡಾದಂತಹ ಪ್ರಮುಖ ಕಂಪನಿಗಳ ಪೈಪೋಟಿಯ ನಡುವೆಯೂ ಶೇ16 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅಂದರೆ ಕಳೆದ ವರ್ಷ ಇದೇ ಅವಧಿಯಲ್ಲಿ (ಏಪ್ರಿಲ್ 2024) ಬರೋಬ್ಬರಿ 3,83,615 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಆದರೆ ಈ ವರ್ಷ (ಏಪ್ರಿಲ್ 2025) 4,43,896 ಯುನಿಟ್ ವಾಹನಗಳಿಗೆ ಮಾರಾಟ ಏರಿಕೆಯಾಗಿದೆ.
ದ್ವಿಚಕ್ರ ವಾಹನ: ಒಟ್ಟು ದ್ವಿಚಕ್ರ ವಾಹನಗಳು ಶೇ15 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಏಪ್ರಿಲ್ 2024 ರಲ್ಲಿ 3,74,592 ಯುನಿಟ್ ವಾಹನಗಳಿಂದ ಏಪ್ರಿಲ್ 2025 ರಲ್ಲಿ 4,30,330 ಯುನಿಟ್ ವಾಹಗಳಿಗೆ ಮಾರಾಟ ಏರಿಕೆಯಾಗಿದೆ. ದೇಶೀಯ ದ್ವಿಚಕ್ರ ವಾಹನಗಳು ಶೇ7 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಏಪ್ರಿಲ್ 2024 ರಲ್ಲಿ 3,01,449 ಯುನಿಟ್‌ಗಳಿಂದ ಏಪ್ರಿಲ್ 2025 ರಲ್ಲಿ 3,23,647 ಯುನಿಟ್‌ಗಳಿಗೆ ಮಾರಾಟ ಏರಿಕೆಯಾಗಿದೆ.

ಮೋಟಾರ್ ಸೈಕಲ್ ಶೇ17 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಏಪ್ರಿಲ್ 2024 ರಲ್ಲಿ 1,88,110 ಯುನಿಟ್‌ಗಳಿಂದ ಏಪ್ರಿಲ್ 2025 ರಲ್ಲಿ 2,20,527 ಯುನಿಟ್‌ಗಳಿಗೆ ಮಾರಾಟ ಏರಿಕೆಯಾಗಿದೆ. ಸ್ಕೂಟರ್ ವಿಭಾಗವು ಶೇ18 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಏಪ್ರಿಲ್‌ನಲ್ಲಿ 1,44,126 ಯುನಿಟ್‌ಗಳಿಂದ ಮಾರಾಟ ಏರಿಕೆಯಾಗಿದೆ. ಏಪ್ರಿಲ್ 2025 ರಲ್ಲಿ 2024 ರಿಂದ 169,741 ಯುನಿಟ್‌ಗಳಿಗೆ ಏರಿದೆ.
ಎಲೆಕ್ಟ್ರಿಕ್ ವಾಹನ: ಭಾರತದಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರೀ ಜನಪ್ರಿಯತೆ ಗಳಿಸುತ್ತಿವೆ. ಕಂಪನಿಯ ಎಲೆಕ್ಟ್ರಿಕ್ ವಾಹನಗಳು ಶೇ59 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟವು ಏಪ್ರಿಲ್ 2024 ರಲ್ಲಿ 17,403 ಯುನಿಟ್‌ಗಳಿಂದ ಏಪ್ರಿಲ್ 2025 ರಲ್ಲಿ 27,684 ಯುನಿಟ್ ವಾಹನಗಳಿಗೆ ಮಾರಾಟ ಏರಿದೆ.

ಅಂತರರಾಷ್ಟ್ರೀಯ ವ್ಯವಹಾರ: ಕಂಪನಿಯ ಒಟ್ಟು ರಫ್ತುಗಳು ಶೇ45 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟವು ಏಪ್ರಿಲ್ 2024 ರಲ್ಲಿ 80,508 ಯುನಿಟ್ ವಾಹನಗಳಿಂದ ಏಪ್ರಿಲ್ 2025 ರಲ್ಲಿ 1,16,880 ಯುನಿಟ್ ವಾಹನಗಳಿಗೆ ಏರಿದೆ. ದ್ವಿಚಕ್ರ ವಾಹನಗಳ ರಫ್ತುಗಳು ಶೇ46 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟವು ಏಪ್ರಿಲ್ 2024 ರಲ್ಲಿ 73,143 ಯುನಿಟ್ ವಾಹನಗಳಿಂದ ಏಪ್ರಿಲ್ 2025 ರಲ್ಲಿ 106,683 ಯುನಿಟ್ ವಾಹನಗಳಿಗೆ ಏರಿಕಿಯಾಗಿದೆ.
ತ್ರಿಚಕ್ರ ವಾಹನ: ಭಾರತದಲ್ಲಿ ಕಂಪನಿಯ ತ್ರಿಚಕ್ರ ವಾಹನಗಳು ಕೂಡ ಉತ್ತಮ ಮಾರಾಟವನ್ನು ದಾಖಲಿಸುತ್ತವೆ. ಈ ಬಾರಿ ಬರೋಬ್ಬರಿ ಶೇ50 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಮಾರಾಟವು ಏಪ್ರಿಲ್ 2024 ರಲ್ಲಿ 9,023 ಯುನಿಟ್ ವಾಹನಗಳಿಂದ ಏಪ್ರಿಲ್‌ನಲ್ಲಿ 13,566 ಯುನಿಟ್ ವಾಹನಗಳಿಗೆ ಏರಿಯಾಗಿದೆ ಎಂದು ಕಂಪನಿ ತಿಳಿಸಿದೆ.

ಒಟ್ಟಾರೆ ಕಂಪನಿಯ ಎಲ್ಲಾ ವಿಭಾಗದ ವಾಹನಗಳು ಉತ್ತಮ ಮಾರಾಟವನ್ನು ದಾಖಲಿಸಿವೆ. ಭಾರತದಲ್ಲಿ ಈ ಎಲ್ಲಾ ವಾಹನಗಳಿಗೆ ಉತ್ತಮ ಬೇಡಿಕೆ ಇರುವುದನ್ನು ಈ ಮಾರಾಟ ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಇನ್ನು ಕಂಪನಿಯು ಮುಂಬರುವ ವರ್ಷಗಳಲ್ಲಿ ಪೋರ್ಟ್ ಫೋಲಿಯೋವನ್ನು ವಿಸ್ತರಿಸಲಿದ್ದು, ಹೊಸ ವಾಹನಗಳನ್ನು ಪರಿಚಯಿಸುವ ಯೋಜನೆಯಲ್ಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








