TVS: ಟಿವಿಎಸ್ ದ್ವಿಚಕ್ರ ವಾಹನಗಳಿಗಾಗಿ ಕ್ಯೂ ನಿಂತ ಗ್ರಾಹಕರು.. ಐಕ್ಯೂಬ್ ಮಾರಾಟದಲ್ಲಿ ಸುನಾಮಿ!
ಟಿವಿಎಸ್ ಮೋಟಾರ್ (TVS Motor) ನಂಬಿಕೆಗೆ ಹೆಸರುವಾಸಿಯಾಗಿರುವ ದ್ವಿಚಕ್ರ ವಾಹನ (Two-wheeler) ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. 2025ರ ವರ್ಷಾರಂಭದ ಮೊದಲ ತಿಂಗಳೇ ಕಂಪನಿಯು ಉತ್ತಮ ಸಂಖ್ಯೆಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಜನವರಿಯಲ್ಲಿ 397,623 ಯುನಿಟ್ ವಾಹನಗಳನ್ನು ಮಾರಾಟಗೊಂಡಿವೆ. 2024ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 339,513 ಯುನಿಟ್‌ಗಳಿಗೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 17% ಬೆಳವಣಿಗೆಯನ್ನು ಸಾಧಿಸಲಾಗಿದೆ.
ದ್ವಿಚಕ್ರ ವಾಹನ (Two Wheeler) ಮಾರಾಟದಲ್ಲಿ ಕೂಡ ಟಿವಿಎಸ್ ಕಂಪನಿಯು ಉತ್ತಮವಾದ ಪ್ರಗತಿ ಕಂಡಿದೆ. ಈ ಜನವರಿಯಲ್ಲಿ 387,671 ಯುನಿಟ್ ದ್ವಿಚಕ್ರ ವಾಹನಗಳನ್ನು (ಮೋಟಾರ್‌ಸೈಕಲ್ & ಸ್ಕೂಟರ್) ಮಾರಾಟ ಮಾಡಿದೆ. 2024ರ ಜನವರಿ ತಿಂಗಳಲ್ಲಿ ಮಾರಾಟಗೊಳಿಸಿದ 329,937 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ಶೇಕಡ 18% ಅಭಿವೃದ್ಧಿಯಾಗಿದೆ.

ದೇಶೀಯ ದ್ವಿಚಕ್ರ ವಾಹನ ಮಾರಾಟದಲ್ಲಿಯೂ ಕಂಪನಿಯು ಒಳ್ಳೆಯ ಬೆಳವಣಿಗೆಯನ್ನು ಕಂಡಿದೆ. ಕಳೆದ ತಿಂಗಳು (ಜನವರಿ - 2025) 293,860 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. 2024ರ ಇದೇ ಅವಧಿಯಲ್ಲಿ 268,233 ಮಾರಾಟಗೊಳಿಸಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 10% ಪ್ರಗತಿ ಸಾಧಿಸಲಾಗಿದೆ.
ಟಿವಿಎಸ್ ಮೋಟಾರ್ ಉತ್ತಮ ಸಂಖ್ಯೆಯಲ್ಲಿಯೂ ಮೋಟಾರ್‌ಸೈಕಲ್‍ಗಳನ್ನು (Motorcycle) ಮಾರಾಟಗೊಳಿಸಿದೆ. ಈ ಜನವರಿ ತಿಂಗಳು ಸರಿ ಸುಮಾರು 174,388 ಯುನಿಟ್ ಮೋಟಾರ್‌ಸೈಕಲ್‍ಗಳನ್ನು ಮಾರಾಟವಾಗಿವೆ. 2024ರ ಜನವರಿಯಲ್ಲಿ ಮಾರಲ್ಪಟ್ಟ 155,611 ಯುನಿಟ್‌ಗಳಿಗೆ ಹೋಲಿಸಿದರೆ, ಶೇಕಡ 12% ಬೆಳವಣಿಗೆಯಾಗಿದೆ. ಸ್ಕೂಟರ್ (Scooter) ಮಾರಾಟದಲ್ಲಿಯೂ ಟಿವಿಎಸ್ ದೊಡ್ಡಮಟ್ಟದ ಪ್ರಗತಿ ಸಾಧಿಸಿದೆ. ಹೋದ ತಿಂಗಳು 171,111 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಶೇಕಡ 29% ಅಧಿವೃದ್ದಿ ಕಂಡಿದೆ.
ಟಿವಿಎಸ್ ಕಂಪನಿಯು ವಿದೇಶಕ್ಕೆ ರಫ್ತು ಮಾಡುವ ವಾಹನಗಳ ಸಂಖ್ಯೆಯೂ ಸದ್ದಿಲ್ಲದೇ ಹೆಚ್ಚಳವಾಗಿದೆ. ಈ ಜನವರಿಯಲ್ಲಿ 69,343 ಯುನಿಟ್ ವಾಹನಗಳನ್ನು ಹೊರದೇಶಕ್ಕೆ ರವಾನಿಸಲಾಗಿದ್ದು, ಶೇಕಡ 46% ಬೆಳವಣಿಗೆ ಕಾಣಲಾಗಿದೆ. ತ್ರಿಚಕ್ರ ವಾಹನ ಮಾರಾಟದಲ್ಲೂ ಟಿವಿಎಸ್ ಕೊಂಚ ಮಟ್ಟಿನ ಯಶಸ್ಸನ್ನು ಸಾಧಿಸಿದೆ. 9,576 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಶೇಕಡ 4% ಪ್ರಗತಿಯಾಗಿದೆ.
ಎಲೆಕ್ಟ್ರಿಕ್ ವಾಹನ (Electric Vehicle - EV) ಮಾರಾಟದಲ್ಲಿ ಸಹ 'ಟಿವಿಎಸ್ ಮೋಟಾರ್' ನಿರೀಕ್ಷೆಗೂ ಮೀರಿದ ಬೆಳವಣಿಗೆಯನ್ನು ಕಂಡಿದೆ. ಕಳೆದ ತಿಂಗಳು 25,195 ಯುನಿಟ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 16,276 ಯುನಿಟ್‌ಗಳಿಗೆ ಹೋಲಿಸಿದರೆ, ಶೇಕಡ 55% ಬೆಳವಣಿಗೆಯಾಗಿದೆ. ಟಿವಿಎಸ್ ಈ ಮಟ್ಟಿಗೆ ಪ್ರಗತಿ ಸಾಧಿಸಲು 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಪ್ರಮುಖವಾದ ಕಾರಣವಾಗಿದೆ. ಇದು ರೂ.1.07 ಲಕ್ಷದಿಂದ ರೂ.1.37 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ.
ಟಿವಿಎಸ್ ಎಕ್ಸ್ ವಿತರಣೆ ಆರಂಭ: ಇದೊಂದು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಡಿಸೆಂಬರ್‌ನಿಂದಲೇ ವಿತರಣೆಗಳು ಕೂಡ ಆರಂಭವಾಗಿದೆ ಎಂದು ವರದಿಯಾಗಿದೆ. ಈ ಸ್ಕೂಟರ್ ರೂ.2.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 4.44 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಪಡೆದಿದ್ದು, ಭರ್ತಿ ಚಾರ್ಜ್‌ನಲ್ಲಿ 140 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








