ಹೊಚ್ಚ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪನಿ (ಟಿವಿಎಸ್ಎಂ) 2025ರ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಅನ್ನು ಬಿಡುಗಡೆ ಮಾಡಿದೆ. ರೈಡರ್-ಫಸ್ಟ್ ಮನಸ್ಥಿತಿ, ಪರ್ಫಾಮೆನ್ಸ್ ಕೇಂದ್ರಿತ ಅಪ್‌ಗ್ರೇಡ್‌ಗಳು ಮತ್ತು ಆಕ್ರಮಣಕಾರಿ ಡಿಸೈನ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. OBD2B- ಕಂಪ್ಲೈಂಟ್ 2025 ಟಿವಿಎಸ್ ಅಪಾಚೆ ಆರ್‌ಟಿಆರ್ 310, ಈ ಬಾರಿ ಸ್ಮಾರ್ಟ್ ಪರ್ಫಾಮೆನ್ಸ್ ನೀಡಲಿದೆ. ಜೊತೆಗೆ ರಿಯಲ್-ಟೈಮ್ ಎಮಿಷನ್ ಮೇಲ್ವಿಚಾರಣೆ, ತೀಕ್ಷ್ಣವಾದ ಪ್ರತಿಕ್ರಿಯೆ ಮತ್ತು ವರ್ಧಿತ ಎಂಜಿನ್ ಹೆಲ್ತ್ ಅಪ್‌ಡೇಟ್‌ಗಳನ್ನು ನೀಡುತ್ತದೆ. ಹೊಸ ಬೈಕ್ ಕುರಿತ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.
ಫ್ರೀಸ್ಟೈಲರ್ ವಿನ್ಯಾಸ: 2025 ಕ್ಕೆ ರಿಫ್ರೆಶ್ ಮಾಡಲಾದ TVS ಅಪಾಚೆ RTR 310, ಮೂರು ಹೊಸ ಬಣ್ಣದ ಆಯ್ಕೆಗಳನ್ನು ಪಡೆದಿದೆ. ಇವೆಲ್ಲವೂ ಅದರ ಆಕ್ರಮಣಕಾರಿ, ಫ್ಯೂಚರಿಸ್ಟಿಕ್ ಸ್ಟ್ರೀಟ್‌ಫೈಟರ್ ಆಕರ್ಷಣೆಯನ್ನು ವರ್ಧಿಸುತ್ತವೆ. ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಹ್ಯಾಂಡ್ ಗಾರ್ಡ್‌ಗಳನ್ನು ನೀಡಲಾಗಿದೆ. ಹಾಗೆಯೇ ಟಾಪ್-ಎಂಡ್ BTO ವೇರಿಯೆಂಟ್‌ನಲ್ಲಿ ಐಕಾನಿಕ್ ರೇಸ್ ರೆಪ್ಲಿಕಾ ಸೆಪಾಂಗ್ ಬ್ಲೂ ಅನ್ನು ಉಳಿಸಿಕೊಳ್ಳಲಾಗಿದೆ.

2025 ಟಿವಿಎಸ್ ಅಪಾಚೆ ಆರ್‌ಟಿಆರ್ 310 ಮೋಟಾರ್‌ಸೈಕಲ್ ಬಹು - ಭಾಷಾ UI/UX ಕ್ಲಸ್ಟರ್ ಪಡೆದುಕೊಂಡಿದೆ. ಇದು ಹೆಚ್ಚು ವೈಯಕ್ತಿಕಗೊಳಿಸಿದ (personalized), ಅರ್ಥಗರ್ಭಿತ ಮತ್ತು ತಲ್ಲೀನಗೊಳಿಸುವ ಸವಾರಿಯನ್ನು ನೀಡುತ್ತದೆ. ವೈಶಿಷ್ಟ್ಯ ಸಮೃದ್ಧ ಮತ್ತು ವಿಭಾಗದಲ್ಲಿ ಪ್ರಥಮ ಬಾರಿ ನೀಡಲಾದ ಹಲವು ಫೀಚರ್ಸ್ ಕೂಡ ಈ ಬೈಕ್‌ನಲ್ಲಿ ನೋಡಬಹುದು.
ಬಿಲ್ಡ್ ಟು ಆರ್ಡರ್ (Build-To-Order) ಆಯ್ಕೆ: 2025 TVS ಅಪಾಚೆ RTR 310 ಬೈಕ್, TVS ಬಿಲ್ಟ್- ಟು - ಆರ್ಡರ್ (BTO) ಪ್ಲಾಟ್‌ಫಾರ್ಮ್ ಮೂಲಕ ತನ್ನ ಉದ್ಯಮಕ್ಕೆ ಪ್ರಥಮ, ಕಾರ್ಖಾನೆ ಗ್ರಾಹಕೀಕರಣ (customization) ಆಯ್ಕೆಯೊಂದಿಗೆ ಬರುತ್ತದೆ. ಇದರಡಿ ಡೈನಾಮಿಕ್ ಪ್ರೊ ಕಿಟ್ ಅನ್ನು ಕೂಡ ಒಳಗೊಂಡಿದ್ದು, ಈ ಕೆಳಗಿನ ಫೀಚರ್ಸ್ ಅನ್ನು ಒಳಗೊಂಡಿದೆ.
ಕೀಲೆಸ್ ರೈಡ್ ಸಿಸ್ಟಮ್, RT-DSC ನಲ್ಲಿ ಕಾರ್ನರಿಂಗ್ ಡ್ರ್ಯಾಗ್ ಟಾರ್ಕ್ ಕಂಟ್ರೋಲ್ ಫೀಚರ್, RT-DSC ನಲ್ಲಿ ಲಾಂಚ್ ಕಂಟ್ರೋಲ್ ಫೀಚರ್ ಅನ್ನು ಹೊಂದಿದೆ. ಜೊತೆಗೆ ಸೆಗ್ಮೆಂಟ್ ಫಸ್ಟ್ ವೈಶಿಷ್ಟ್ಯಗಳಾದ ಟ್ರಾನ್ಸ್ಪರೆಂಟ್ ಕ್ಲಚ್ ಕವರ್, ಕೀ ಲೆಸ್ ರೈಡ್, ಡ್ರ್ಯಾಗ್ ಟಾರ್ಕ್ ಕಂಟ್ರೋಲ್ ಕಾರ್ನರಿಂಗ್, ಡ್ರ್ಯಾಗ್ ಟಾರ್ಕ್ ಕಂಟ್ರೋಲ್ (BTO) ಅನ್ನು ನೀಡಲಾಗಿದೆ.
ಬೇಸ್ ವೇರಿಯೆಂಟ್ ಬೆಲೆಯು ರೂ. 2,39,990 (ಎಕ್ಸ್ ಶೋರೂಂ), ಟಾಪ್ ವೇರಿಯೆಂಟ್ ರೂ. 2,57,000 (ಎಕ್ಸ್ ಶೋರೂಂ) ಹಾಗೂ BTO ಬೆಲೆಯು ರೂ. 2,75,000 ರಿಂದ ಪ್ರಾರಂಭವಾಗುತ್ತದೆ. ಈ ಮೋಟಾರ್ ಸೈಕಲ್ 9,700 rpm ನಲ್ಲಿ 35.6 PS ಪವರ್ ಮತ್ತು 6,650 rpm ನಲ್ಲಿ 28.7 Nm ಟಾರ್ಕ್ ನೀಡುತ್ತದೆ.
ಹೊಸ ಫೀಚರ್ಸ್: ಬಹು-ಭಾಷಾ UI ನೊಂದಿಗೆ Gen-2 ಕ್ಲಸ್ಟರ್, USD 43 ಡಯಾ ಫ್ರಂಟ್ ಸಸ್ಪೆನ್ಷನ್ (ಬೇಸ್ ವೇರಿಯೆಂಟ್), ಪರಿಷ್ಕೃತ ಸ್ಟೈಲಿಂಗ್‌ನೊಂದಿಗೆ ಸೀಕ್ವೆನ್ಷಿಯಲ್ ಟರ್ನ್ ಸಿಗ್ನಲ್ ಲ್ಯಾಂಪ್ (TSL), ಹ್ಯಾಂಡ್ ಗಾರ್ಡ್‌ಗಳು, ಡ್ರ್ಯಾಗ್ ಟಾರ್ಕ್, ಕಂಟ್ರೋಲ್ (DTC), ಲಾಂಚ್ ಕಂಟ್ರೋಲ್ (RT-DSC) - ಡೈನಾಮಿಕ್ ಪ್ರೊ ಕಿಟ್, ಗ್ರಾಫಿಕ್ಸ್ ರಿಫ್ರೆಶ್‌ನೊಂದಿಗೆ ಮೂರು ಹೊಸ ಬಣ್ಣ ಆಯ್ಕೆಗಳನ್ನು ನೀಡಲಾಗಿದೆ.
ಈ ಮೋಟಾರ್‌ಸೈಕಲ್ ಜುಲೈ 16, 2025 ರಿಂದ ದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಪ್ರಮುಖ ಮಹಾನಗರಗಳಲ್ಲಿ ಐದು ವೇರಿಯೆಂಟ್‌ಗಳಲ್ಲಿ (ಮೂರು BTO ಕಸ್ಟಮೈಸೇಷನ್ ಸೇರಿದಂತೆ) ಲಭ್ಯವಿರುತ್ತದೆ. ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿರುವ 2025 ಟಿವಿಎಸ್ ಅಪಾಚೆ ಆರ್‌ಟಿಆರ್ 310 ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.


Click it and Unblock the Notifications








