TVS: ಟಿವಿಎಸ್ ಟೂ-ವೀಲರ್‌ಗಾಗಿ ಕ್ಯೂ ನಿಂತ ಗ್ರಾಹಕರು.. ಹೆಚ್ಚಿನ ಲಾಭ ತಂದುಕೊಡ್ತು ಐಕ್ಯೂಬ್ ಇ-ಸ್ಕೂಟರ್!
ಟಿವಿಎಸ್ ಮೋಟಾರ್ (TVS Motor) ಪ್ರಮುಖ ದ್ವಿಚಕ್ರ ವಾಹನ (two wheeler) ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಕಳೆದ ತಿಂಗಳು (ಮೇ - 2025) ಒಟ್ಟು 431,275 ಯುನಿಟ್ (ದ್ವಿಚಕ್ರ & ತ್ರಿಚಕ್ರ) ವಾಹನಗಳನ್ನು ಮಾರಾಟಗೊಳಿಸಿದೆ. 2024ರ 'ಮೇ'ನಲ್ಲಿ 369,914 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ 17% ಬೆಳವಣಿಗೆಯಾಗಿದೆ. ವಿಶೇಷವಾಗಿ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ 'ಐಕ್ಯೂಬ್' ಇ-ಸ್ಕೂಟರ್ ಅಬ್ಬರಿಸಿದೆ.
ದ್ವಿಚಕ್ರ ವಾಹನ ಮಾರಾಟದಲ್ಲಿ ಭಾರೀ ಪ್ರಗತಿ..
ಈ ಮೇನಲ್ಲಿಯೂ ಟಿವಿಎಸ್ ಕಂಪನಿಯು ದ್ವಿಚಕ್ರ ವಾಹನಗಳನ್ನು (ಬೈಕ್ & ಸ್ಕೂಟರ್) ಉತ್ತಮ ಸಂಖ್ಯೆಯಲ್ಲಿಯೇ ಮಾರಾಟ ಮಾಡಿದೆ. ಒಟ್ಟು 416,166 ಯುನಿಟ್‌ಗಳನ್ನು ಗ್ರಾಹಕರು ಖರೀದಿ ಮಾಡಿದ್ದಾರೆ. 2024ರ ಇದೇ ಅವಧಿಯಲ್ಲಿ 359,590 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಗೆ ಹೋಲಿಸಿದರೆ ಶೇಕಡ 16% ಪ್ರಗತಿಯಾಗಿದೆ.

ಟಿವಿಎಸ್ ಆಟೋರಿಕ್ಷಾಗಳಿಗೆ ಮುಗಿಬಿದ್ದ ಗ್ರಾಹಕರು..
ತ್ರಿಚಕ್ರ ವಾಹನಗಳು (Three-Wheeler) ಅಂದರೆ ಆಟೋ ರಿಕ್ಷಾಗಳನ್ನು ಟಿವಿಎಸ್ ಕಂಪನಿಯು ದೊಡ್ಡ ಸಂಖ್ಯೆಯಲ್ಲಿ ಮಾರಾಟ ಮಾಡಿದೆ. ಹೋದ ತಿಂಗಳು (ಮೇ - 2025) 15,109 ಯುನಿಟ್ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2024ರ 'ಮೇ'ನಲ್ಲಿ 10,324 ಯುನಿಟ್‌ಗಳನ್ನು ಮಾರಲಾಗಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡ 46% ಬೆಳವಣಿಯಾಗಿದೆ.
ವಿದೇಶಕ್ಕೆ ರಫ್ತು ಮಾಡುವ ವಾಹನಗಳ ಸಂಖ್ಯೆಯು ಹೆಚ್ಚಳ..
ಟಿವಿಎಸ್ ಕಂಪನಿಯು ಹೊರ ದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿಯೂ ವಾಹನಗಳನ್ನು (ದ್ವಿಚಕ್ರ & ತ್ರಿಚಕ್ರ) ರವಾನಿಸಿದೆ. ಈ ಮೇನಲ್ಲಿ 118,437 ಯುನಿಟ್‌ಗಳನ್ನು ರಫ್ತು ಮಾಡಿದೆ. 2024ರ 'ಮೇ'ನಲ್ಲಿ 96,966 ಯುನಿಟ್‌ಗಳನ್ನು ರವಾನಿಸಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ಶೇಕಡ 22% ಪ್ರಗತಿಯಾಗಿದೆ.

ದಾಖಲೆಯ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ..
ಎಲೆಕ್ಟ್ರಿಕ್ ವಾಹನಗಳನ್ನು (Electric Vehicle - EV) ಕೂಡ ಟಿವಿಎಸ್ ಕಂಪನಿಯು ಉತ್ತಮ ಸಂಖ್ಯೆಯಲ್ಲಿ ಮಾರಾಟ ಮಾಡಿದೆ. ಹೋದ ತಿಂಗಳು (ಮೇ - 2025) ಸರಿ ಸುಮಾರು 27,976 ಯುನಿಟ್ ಇವಿಗಳನ್ನು ಮಾರಾಟ ಮಾಡಿದೆ. 2024ರ 'ಮೇ'ನಲ್ಲಿ 18,674 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ 50% ಬೆಳವಣಿಗೆಯಾಗಿದೆ. ಇದು 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್‌ನಿಂದ ಸಾಧ್ಯವಾಗಿದೆ.
ಟಿವಿಎಸ್ ಐಕ್ಯೂಬ್ (TVS iQube) ವಿಶೇಷತೆಗಳೇನು..
ಇದು ರೂ.1 ಲಕ್ಷದಿಂದ ರೂ.1.23 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್), 3.04 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಹಾಗೂ 5.1 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 75 ರಿಂದ 150 ಕಿ.ಮೀ ಓಡುತ್ತದೆ. ಫುಲ್ ಕಲರ್ ಟಿಎಫ್‌ಟಿ ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟಿವಿಎಸ್ ಎಕ್ಸ್ ಕೂಡ ಖರೀದಿ ಲಭ್ಯ..
ಈ ಎಲೆಕ್ಟ್ರಿಕ್ ಸ್ಕೂಟರ್ ರೂ.2.64 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇದು 4.44 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 140 ಕಿ.ಮೀ ಕ್ರಮಿಸುತ್ತದೆ. ಇದರ ಬ್ಯಾಟರಿಯು 4 ಗಂಟೆ 30 ನಿಮಿಷಗಳಲ್ಲಿ 0 ರಿಂದ 80% ಚಾರ್ಜ್ ಆಗಿ ಬಿಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








