ಹೋಂಡಾ ಡಿಯೋ 125 VS ಟಿವಿಎಸ್ N-ಟಾರ್ಕ್: ಬೆಸ್ಟ್ ಸ್ಪೋರ್ಟಿ ಸ್ಕೂಟರ್ ಯಾವುದು?

ದೇಶದಲ್ಲಿ ಸ್ಕೂಟರ್‌ಗಳು ತುಂಬಾ ಬೇಡಿಕೆಯನ್ನು ಹೊಂದಿವೆ, ಇದರಲ್ಲಿ ತಮಗೆಂದೆ ಪ್ರತ್ಯೇಕ ವಿಭಾಗವನ್ನು ಹೊಂದಿರುವ ಸ್ಟೈಲಿಷ್ ಸ್ಕೂಟರ್‌ಗಳು ಯುವ ಸವಾರರಿಗೆ ಉತ್ಸಾಹಭರಿತ ಪ್ರಯಾಣವನ್ನು ನೀಡುತ್ತವೆ. ಅಂತಹ ಸ್ಕೂಟರ್‌ಗಳ ಸಾಲಿನಲ್ಲಿ ಮೊದಲ ಎರಡು ಸ್ಕೂಟರ್‌ಗಳು ಎಂದರೆ ಹೋಂಡಾ ಡಿಯೋ 125 ಸ್ಕೂಟರ್ ಹಾಗೂ ಟಿವಿಎಸ್ ಎನ್ ಟಾರ್ಕ್ ಆಗಿವೆ. ಇವೆರಡು ಸ್ಪೋರ್ಟಿ ಸ್ಕೂಟರ್ ಮಾರುಕಟ್ಟೆಯಲ್ಲಿ ತುಂಬಾ ಜನಪ್ರಿಯತೆ ಪಡೆದುಕೊಂಡಿವೆ. ಎರಡೂ ಸ್ಕೂಟರ್‌ಗಳು ಪರ್ಫಾಮೆನ್ಸ್ ಹಾಗೂ ಆಧುನಿಕ ಡಿಸೈನ್ ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಈ ಎರಡೂ ಸ್ಕೂಟರ್‌ಗಳಲ್ಲಿ ಬೆಸ್ಟ್ ಯಾವುದು? ಹೋಲಿಕೆ ಇಲ್ಲಿದೆ.

ಈ ಎರಡೂ ಸ್ಕೂಟರ್‌ಗಳು ಸ್ಪೋರ್ಟಿಯಾಗಿರುವ ಕಾರಣ ಕೇವಲ ಯುವಕರು ಮಾತ್ರ ಓಡಿಸಬೇಕೆಂದೇನಲ್ಲ. ಇವನ್ನು ಕುಟುಂಬ ಸ್ನೇಹಿಯಾಗಿಡಲು ಸಾಧ್ಯವಾದಷ್ಟು ಪ್ರಾಯೋಗಿಕತೆಯನ್ನು ಕೂಡ ಉಳಿಸಲಾಗಿದೆ. ಎಲ್ಲರಿಗೂ ಉಪಯುಕ್ತವಾಗಿಡಲು ಸಾಮಾನ್ಯ ಸ್ಕೂಟರ್ ಗಳಂತೆಯೇ ಎಲ್ಲಾ ಫೀಚರ್ಸ್ ಹಾಗೂ ಆರಾಮವನ್ನು ಖಚಿತಪಡಿಸುವಂತೆ ಡಿಸೈನ್ ಮಾಡಲಾಗಿದೆ. ಮೊದಲಿಗೆ ಟಿವಿಎಸ್ ಎನ್‌ಟಾರ್ಕ್ ಬಗ್ಗೆ ಹೇಳುವುದಾದರೆ 2018 ರಲ್ಲಿ ಬಿಡುಗಡೆಯಾದ ನಂತರ ವೇಗವಾಗಿ ಜನಪ್ರಿಯತೆ ಗಳಿಸಿತು.

tvs-n-torq-vs-honda-dio-125-which-is-the-best-sporty-scooter

ಇದು ಡಿಯೋ 125 ಸ್ಕೂಟರ್‌ಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ವಿಶಿಷ್ಟವಾದ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಹೋಂಡಾ ಡಿಯೋಗಿಂತ ಭಿನ್ನವಾಗಿ ಸ್ಟ್ಯಾಂಡರ್ಡ್ ಪವರ್ ಟ್ರೇನ್ - 125 ಸಿಸಿ ಎಂಜಿನ್ ನೊಂದಿಗೆ ಲಭ್ಯವಿದೆ. ಆದರೆ ಹಲವಾರು ಸಬ್-ವೇರಿಯೆಂಟ್‌ಗಳನ್ನು ಹೊಂದಿದೆ. ಫೀಚರ್ಸ್ ವಿಷಯದಲ್ಲಿ, ಎರಡೂ ಸ್ಕೂಟರ್ ಗಳು ಒಂದೇ ರೀತಿ ಹೊಂದಿಕೆಯಾಗುತ್ತವೆ.

ಹೋಂಡಾ ಡಿಯೋ ಬಗ್ಗೆ ಹೇಳುವುದಾದರೆ 2001 ರಿಂದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಇದ್ದು, ಇದರ 125 ಸಿಸಿ ಆವೃತ್ತಿಯನ್ನು 2023 ರಲ್ಲಿ ಪರಿಚಯಿಸಲಾಯಿತು. ಇತ್ತೀಚಿನ ನವೀಕರಣದೊಂದಿಗೆ, ಹೋಂಡಾ ಕಂಪನಿಯು ಸಸ್ಪೆಂಷನ್ ಸೆಟಪ್ ಮತ್ತು ಬ್ರೇಕಿಂಗ್ ಹಾರ್ಡ್ ವೇರ್ ನಂತಹ ರನ್ನಿಂಗ್ ಕಾಂಪೊನೆಂಟ್ ಗಳನ್ನು ಉಳಿಸಿಕೊಂಡಿದ್ದು, ಹೊಸ ಬಣ್ಣಗಳೊಂದಿಗೆ ಬಿಡುಗಡೆ ಮಾಡಿದೆ.

tvs-n-torq-vs-honda-dio-125-which-is-the-best-sporty-scooter

ಈ ಎರಡೂ ಸ್ಕೂಟರ್‌ಗಳು ಅಲಾಯ್ ವೀಲ್‌ಗಳು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಮತ್ತು ಫೋನ್ ಸಂಪರ್ಕದೊಂದಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ನಂತಹ ಆಧುನಿಕ ಫೀಚರ್ಸ್ ಹೊಂದಿವೆ. ಎರಡರಲ್ಲೂ 125 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಟಿವಿಎಸ್ ಎನ್ ಟಾರ್ಕ್ ಡಿಯೋ 125 ಗೆ ಹೋಲಿಸಿದರೆ ಹೆಚ್ಚಿನ ಪವರ್ ಮತ್ತು ಸ್ವಲ್ಪ ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೂ, ಹೋಂಡಾ ಡಿಯೋ ಎನ್ ಟಾರ್ಕ್ ಗಿಂತ ಕಡಿಮೆ ತೂಕವನ್ನು ಹೊಂದಿದೆ. ಟಿವಿಎಸ್ ಎನ್ ಟಾರ್ಕ್ 2025ರ ಹೋಂಡಾ ಡಿಯೋ 125 ಸ್ಕೂಟರ್ ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿದೆ.

ಸದ್ಯ ಈ ಎರಡೂ ಸ್ಕೂಟರ್‌ಗಳು ಭಾರತದಲ್ಲಿ ಯುವಕರು ಖರೀದಿಸಬಹುದಾದ ಸ್ಟೈಲಿಷ್ ಸ್ಕೂಟರ್‌ಗಳಾಗಿವೆ. ಆಕರ್ಷಕ ಡಿಸೈನ್, ಏರೋಡೈನಮಿಕ್ ಡಿಸೈನ್ ಹಾಗೂ ಆಧುನಿಕ ಫೀಚರ್ಸ್ ಜೊತೆಗೆ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಎರಡೂ ಸ್ಕೂಟರ್‌ಗಳಲ್ಲಿ ನಿಮ್ಮ ಫೇವರೆಟ್ ಆಯ್ಕೆ ಯಾವುದು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 21, 2025, 18:15 [IST]
English summary
Tvs n torq vs honda dio 125 which is the best sporty scooter
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+