ಟಿವಿಎಸ್ ಎನ್ ಟಾರ್ಕ್ 125 Vs ಹೀರೋ ಝೂಮ್ 125: ಬೆಲೆ ಎಷ್ಟು, ಬೆಸ್ಟ್ ಯಾವುದು?

ಭಾರತದ 125 ಸಿಸಿ ಸ್ಕೂಟರ್ ವಿಭಾಗದಲ್ಲಿ ಟಿವಿಎಸ್ ಎನ್ ಟಾರ್ಕ್ 125 (TVS N Torque 125) ಹಾಗೂ ಹೀರೋ ಝೂಮ್ 125 (Hero Xoom 125) ಬಲವಾದ ಆಯ್ಕೆಗಳಾಗಿ ನಿಲ್ಲುತ್ತವೆ. ನೀವು ಇವೆರಡರ ನಡುವೆ ಯಾವುದು ಖರೀದಿಸಬೇಕು ಎಂಬ ಗೊಂದಲದಲ್ಲಿದ್ದರೆ ಎರಡೂ ಸ್ಕೂಟರ್‌ಗಳ ನಡುವಿನ ಪ್ರಮುಖ ಅಂಶಗಳನ್ನು ನೋಡಬೇಕಾಗುತ್ತದೆ. ಪವರ್, ತಂತ್ರಜ್ಞಾನ, ಬ್ರೇಕಿಂಗ್ ಮತ್ತು ಬೆಲೆ ವಿಷಯದಲ್ಲಿ ನಿಮ್ಮ ಆದ್ಯತೆಗಳಿಗೆ ಯಾವ ಸ್ಕೂಟರ್ ಹೊಂದಿಕೆಯಾಗುತ್ತದೆ ಎಂಬುದನ್ನು ಕಂಡುಹಿಡಿಯಬೇಕು. ಹಾಗಾದ್ರೆ ಬನ್ನಿ ಟಿವಿಎಸ್ ಎನ್ ಟಾರ್ಕ್ 125 ಬೆಲೆ, ವಿಶೇಷಣಗಳು ಮತ್ತು ವೈಶಿಷ್ಟ್ಯಗಳಲ್ಲಿ ಹೀರೋ ಝೂಮ್ 125 ಹೇಗೆ ಪೈಪೋಟಿ ನೀಡುತ್ತದೆ ಎಂಬುದರ ಸ್ಪಷ್ಟ ನೋಟ ಇಲ್ಲಿದೆ.

ಫೀಚರ್ಸ್ ಮತ್ತು ತಂತ್ರಜ್ಞಾನ: ಎನ್ ಟಾರ್ಕ್ ಬಹಳ ಹಿಂದಿನಿಂದಲೂ ಬ್ಲೂಟೂತ್ - ಸಕ್ರಿಯಗೊಳಿಸಿದ ಡಿಜಿಟಲ್ ಕ್ಲಸ್ಟರ್, ನ್ಯಾವಿಗೇಷನ್ ಅಸಿಸ್ಟ್ ಮತ್ತು ರೈಡ್ ಡೇಟಾ ಟ್ರ್ಯಾಕಿಂಗ್ ನೊಂದಿಗೆ ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ಗೆ ಹೆಸರುವಾಸಿಯಾಗಿದೆ. ಇದು ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಮ್ (ಎಸ್‌ಬಿಎಸ್) ಮತ್ತು ಮುಂಭಾಗದಲ್ಲಿ ಡಿಸ್ಕ್ ಬ್ರೇಕಿಂಗ್ ಅನ್ನು ಹೊಂದಿದೆ.

tvs-ntorq-125-vs-hero-xoom-125-price-features-engine-comparison

ಹೀರೋ ಝೂಮ್ 125 ಸ್ಕೂಟರ್ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್), 14 - ಇಂಚಿನ ಅಲಾಯ್ ವೀಲ್‌ಗಳು ಮತ್ತು ಬಾಹ್ಯ ಇಂಧನ ಫಿಲ್ಲರ್ ನಂತಹ ಮೂಲಭೂತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಸ್ಪೋರ್ಟಿ ಡಿಸೈನ್ ಥೀಮ್ ನೊಂದಿಗೆ ಬರುತ್ತದೆ. ಹೆಚ್ಚು ಪ್ರೀಮಿಯಂ ಸ್ಟೈಲಿಂಗ್ ಸ್ಪರ್ಶಗಳೊಂದಿಗೆ ಇರಿಸಲಾಗಿದೆ.

ಬೆಲೆ ಮತ್ತು ವೇರಿಯೆಂಟ್: ಹೀರೋ ಝೂಮ್ 125 ಅನ್ನು ವಿಎಕ್ಸ್ ಮತ್ತು ಝಡ್ಎಕ್ಸ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗಿದ್ದು, ಬೆಲೆ ರೂ.80,494 ರಿಂದ ರೂ.86,025 ವರೆಗೆ (ಎಕ್ಸ್ ಶೋರೂಂ) ಇದೆ. ಟಿವಿಎಸ್ ಎನ್ ಟಾರ್ಕ್ 125 ಅನೇಕ ವೇರಿಯೆಂಟ್‌ಗಳಲ್ಲಿ (ಡಿಸ್ಕ್, ರೇಸ್ XP, ರೇಸ್ ಎಡಿಷನ್, ಸೂಪರ್ ಸ್ಕ್ವಾಡ್ ಎಡಿಷನ್ ಮತ್ತು XT) ಲಭ್ಯವಿದೆ, ಬೆಲೆ ರೂ.80,900 ರಿಂದ ರೂ.99,800 (ಎಕ್ಸ್ ಶೋರೂಂ) ವರೆಗೆ ಇದೆ.

tvs-ntorq-125-vs-hero-xoom-125-price-features-engine-comparison

ಎಂಜಿನ್, ಪವರ್ ಮತ್ತು ಪರ್ಫಾಮೆನ್ಸ್: Xoom 125 ಸ್ಕೂಟರ್ 125 ಸಿಸಿ ಎಂಜಿನ್ ಹೊಂದಿದ್ದು, 7,250 RPM ನಲ್ಲಿ 9.8 ಬಿಹೆಚ್ ಪವರ್ ಮತ್ತು 6,000 RPM ನಲ್ಲಿ 10.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 52.8 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಇದು 5 - ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಎನ್ ಟಾರ್ಕ್ ವಿಷಯಕ್ಕೆ ಬಂದರೆ 124.8 ಸಿಸಿ ಏರ್ ಕೂಲ್ಡ್ ಎಂಜಿನ್ 7,000 RPM ನಲ್ಲಿ 9.4 ಬಿಹೆಚ್ ಪವರ್ ಮತ್ತು 5,500 RPM ನಲ್ಲಿ 10.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸುಮಾರು 50 ಕಿ.ಮೀ ಮೈಲೇಜ್ ನೀಡುತ್ತದೆ. 5.8 - ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

tvs-ntorq-125-vs-hero-xoom-125-price-features-engine-comparison

ತೂಕ ಮತ್ತು ಇತರ ವಿವರಗಳು: ಎನ್ ಟಾರ್ಕ್ 125 ಕರ್ಬ್ ತೂಕ ಸುಮಾರು 116.1 ಕೆಜಿ ಇದೆ. ಮತ್ತೊಂದೆಡೆ, ಕ್ಸೂಮ್ 125 ಸ್ವಲ್ಪ ಭಾರವಾಗಿದ್ದು, 121 ಕೆ.ಜಿ ತೂಕವನ್ನು ಹೊಂದಿದೆ. ನೀವು ಫೀಚರ್ಸ್ ಮತ್ತು ತಂತ್ರಜ್ಞಾನ ಬಯಸಿದರೆ, ಎನ್ ಟಾರ್ಕ್‌ನ ಬ್ಲೂಟೂತ್ ಕ್ಲಸ್ಟರ್ ಮತ್ತು ವೈಶಿಷ್ಟ್ಯ ಪಟ್ಟಿಯು ಅದಕ್ಕೆ ಬೆಲೆಗೆ ತಕ್ಕ ಮೌಲ್ಯ ನೀಡುತ್ತದೆ.

ನೀವು ಕಡಿಮೆ ಬೆಲೆಯ ಸ್ಕೂಟರ್ ಬಯಸುತ್ತಿದ್ದರೆ, Xoom 125 ನ ಬೇಸ್‌ ವೇರಿಯೆಂಟ್ ಖರೀದಿಸಬಹುದು. ಕ್ಸೂಮ್‌ನ ಮೈಲೇಜ್ ಪ್ರಯೋಜನವು ಕಡಿಮೆಯಿದ್ದರೂ ಸಿಟಿ ರೈಡ್‌ಗೆ ಬೆಸ್ಟ್ ಆಗಿದೆ. ಒಟ್ಟಾರೆ ಎರಡೂ ಸ್ಕೂಟರ್‌ಗಳು ಈ ವಿಭಾಗದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಈ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು ಎಂಬುದನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Thursday, October 16, 2025, 12:21 [IST]
English summary
Tvs ntorq 125 vs hero xoom 125 price features engine comparison
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+