TVS Ntorq 150: ಬಲಿಷ್ಠ ಟಿವಿಎಸ್ ಎನ್‌ಟಾರ್ಕ್ 150 ಸ್ಕೂಟರ್ ಬಿಡುಗಡೆ.. ಬೆಲೆಯೂ ಅಗ್ಗ.. ಕಾರಿನಂತಹ ಫೀಚರ್ಸ್!

ಟಿವಿಎಸ್ ಮೋಟಾರ್ ಕಂಪನಿ (TVS Motor Company), ಗುರುವಾರ ಹೆಚ್ಚು ಶಕ್ತಿಯುತವಾದ ಹೊಚ್ಚ ಹೊಸ 'ಎನ್‌ಟಾರ್ಕ್ 150' ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಯಮಹಾ ಏರೋಕ್ಸ್ 155 ಹಾಗೂ ಹೀರೋ ಜೂಮ್ 160ಗಳಿಗೂ ಪ್ರಬಲವಾದ ಸ್ಪರ್ಧೆಯೊಡ್ಡಲಿದೆ. ಬನ್ನಿ, ನೂತನ ಸ್ಕೂಟರ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಸ ಟಿವಿಎಸ್ ಎನ್‌ಟಾರ್ಕ್ 150 (TVS Ntorq 150) ಅತಿ ಕಡಿಮೆ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ರೂ.1.19 ಲಕ್ಷದಿಂದ ರೂ.1.29 ಲಕ್ಷ (ಎಕ್ಸ್-ಶೋರೂಂ - ಪ್ಯಾನ್ ಇಂಡಿಯಾ) ದರವನ್ನು ಪಡೆದಿದೆ. ಸ್ಟ್ಯಾಂಡರ್ಡ್ ಎನ್‌ಟಾರ್ಕ್ 150 ಹಾಗೂ ಎನ್‌ಟಾರ್ಕ್ 150 ಟಿಎಫ್‌ಟಿ ಎಂಬ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಬುಕ್ಕಿಂಗ್ ಕೂಡ ಪ್ರಾರಂಭವಾಗಿದ್ದು, ಅತಿ ಶೀಘ್ರದಲ್ಲೇ ವಿತರಣಾ ಕಾರ್ಯಕ್ಕೂ ಕಂಪನಿಯು ಚಾಲನೆ ನೀಡಲಿದೆ.

TVS Ntorq 150 Launched In India Rs 1 19 Lakh Starting Price Details

ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದ್ದು, ನೋಡುಗರನ್ನು ಸೆಳೆಯುವಂತಿದೆ. 'ಟಿವಿಎಸ್ ಎನ್‌ಟಾರ್ಕ್ 125'ಗೆ ಬಹುತೇಕ ಹೋಲಿಕೆಯಾಗುತ್ತದೆ. ಉತ್ತಮವಾದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಸ್ಪ್ಲಿಟ್ ಗ್ರಾಬ್ ರೈಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್, ಹಝರ್ಡ್ ಲೈಟ್‌ಗಳು ಹಾಗೂ ಅಗ್ರೆಸಿವ್ ಬಾಡಿ ಪ್ಯಾನೆಲ್‌ಗಳನ್ನು ಹೊಂದಿದೆ. ಸ್ಟೆಲ್ತ್ ಸಿಲ್ವರ್, ರೇಸಿಂಗ್ ರೆಡ್, ಟರ್ಬೊ ಬ್ಲೂ ಮತ್ತು ನೈಟ್ರೋ ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಸ್ಕೂಟರ್ ದೊಡ್ಡ ಗಾತ್ರದಲ್ಲಿದೆ. 1861 ಎಂಎಂ ಉದ್ದ, 740 ಎಂಎಂ ಅಗಲ ಹಾಗೂ 1120 ಎಂಎಂ ಎತ್ತರವಿದೆ. ಜೊತೆಗೆ 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1285 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸೀಟ್ ಎತ್ತರ 770 ಎಂಎಂ ಇದೆ.

ನೂತನ ಟಿವಿಎಸ್ ಎನ್‌ಟಾರ್ಕ್ 150 ಸ್ಕೂಟರ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 149.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 7,000 ಆರ್‌ಪಿಎಂನಲ್ಲಿ 13.2 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 5,500 ಆರ್‌ಪಿಎಂನಲ್ಲಿ 14.2 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ಸದ್ಯಕ್ಕೆ ಹೊಸ ಎನ್‌ಟಾರ್ಕ್ 150 ಇಂಧನ ದಕ್ಷತೆ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಆದರೂ 40 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. 104 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 6.3 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಈ ಸ್ಕೂಟರ್ ಫುಲ್ ಟಿಎಫ್‌ಟಿ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಟ್ರೀಟ್ & ರೇಸ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಪಡೆದಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 22 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್‌ನ್ನು ತನ್ನದಾಗಿಸಿಕೊಂಡಿದೆ.

ಇದು ಸವಾರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಸಿಂಗಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್/ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಜೊತೆಗೆ 12-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.

ಒಟ್ಟಾರೆಯಾಗಿ ಈ 'ಟಿವಿಎಸ್ ಎನ್‌ಟಾರ್ಕ್ 150' ಸ್ಕೂಟರ್ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಮುಂಬರುವ ದಿನಗಳಲ್ಲಿ ಈ ಸ್ಕೂಟರ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Thursday, September 4, 2025, 16:06 [IST]
English summary
Tvs ntorq 150 launched in india rs 1 19 lakh starting price details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+