TVS Orbiter: 1 ಲಕ್ಷಕ್ಕಿಂತ ಕಡಿಮೆ ಬೆಲೆ... ಖರ್ಚಿಲ್ಲದೆ 158 ಕಿ.ಮೀ ಓಡುವ ಸ್ಕೂಟರ್ ಬಿಡುಗಡೆ

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ಇಂದು 'ಟಿವಿಎಸ್ ಆರ್ಬಿಟರ್' (TVS Orbiter) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹೆಚ್ಚು ಸ್ಪರ್ಧಾತ್ಮಕ ರೂ. 99,900 (ಎಕ್ಸ್-ಶೋರೂಂ) ಬೆಲೆಯಲ್ಲಿ ಇದು ಖರೀದಿಗೆ ಲಭ್ಯವಿದ್ದು, ಟಿವಿಎಸ್‌ನಿಂದ ಲಭ್ಯವಿರುವ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಟಿವಿಎಸ್ ಆರ್ಬಿಟರ್ ಇವಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 158 ಕಿ.ಮೀ ಓಡಬಲ್ಲದು. ಕ್ರೂಸ್ ಕಂಟ್ರೋಲ್, 34-ಲೀಟರ್ ಅಂಡರ್‌ ಸೀಟ್ ಸ್ಟೋರೇಜ್, ​​ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಸುಧಾರಿತ ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ.

ಟಿವಿಎಸ್ ಆರ್ಬಿಟರ್ ಸಂಪರ್ಕಿತ ಮೊಬೈಲ್ ಅಪ್ಲಿಕೇಶನ್, ವೈಸರ್‌ನೊಂದಿಗೆ ಮುಂಭಾಗದ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಇನ್‌ಕಮಿಂಗ್ ಕಾಲ್ ಡಿಸ್ಪ್ಲೆಯೊಂದಿಗೆ ಕಲರ್ ಎಲ್‌ಸಿಡಿ ಕ್ಲಸ್ಟರ್‌ನಂತಹ ಸುಧಾರಿತ ವೈಶಿಷ್ಟ್ಯಗಳಿಂದ ತುಂಬಿದೆ. ಇದರ 3.1 ಕಿಲೋವ್ಯಾಟ್ ಬ್ಯಾಟರಿ ಮತ್ತು ವರ್ಧಿತ ಏರೋಡೈನಮಿಕ್ ದಕ್ಷತೆಯು ಸ್ಥಿರ, ಪರಿಣಾಮಕಾರಿ ಪರ್ಫಾಮೆನ್ಸ್‌ನೊಂದಿಗೆ ವಿಸ್ತೃತ ರೇಂಜ್ ನೀಡುತ್ತದೆ ಎಂದು ಟಿವಿಎಸ್ ತಿಳಿಸಿದೆ.

tvs-orbiter-ev-launched-in-india-at-rs-99-900

ಹೆಚ್ಚಿನ ಸ್ಥಿರತೆ ಮತ್ತು ಸೌಕರ್ಯಕ್ಕಾಗಿ ಸ್ಕೂಟರ್ ವಿಶಿಷ್ಟವಾದ 14 - ಇಂಚಿನ ಮುಂಭಾಗದ ವೀಲ್ ಹೊಂದಿದೆ. ಇದರ 34 - ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಎರಡು ಹೆಲ್ಮೆಟ್‌ಗಳನ್ನು ಇಡಲು ಸಾಕಷ್ಟು ಜಾಗ ಹಾಗೂ ದೈನಂದಿನ ಸರಕುಗಳನ್ನು ಸಾಗಿಸಲು ಬೇಕಾದ ಶೇಖರಣಾ ಸ್ಥಳವನ್ನು ಹೊಂದಿದೆ. ಒಟ್ಟಾರೆ ನಗರ ಪ್ರಯಾಣಿಕರ ಆದ್ಯತೆಗಳಿಗೆ ತಕ್ಕಂತೆ ನಿರ್ಮಾಣವಾಗಿದೆ.

ವಿನ್ಯಾಸದ ದೃಷ್ಟಿಯಿಂದ, ಟಿವಿಎಸ್ ಆರ್ಬಿಟರ್ ಆಧುನಿಕ ಸುವ್ಯವಸ್ಥಿತ ಡಿಸೈನ್ ಹೊಂದಿದ್ದು, ಏರೋಡೈನಮಿಕ್ ಬಾಡಿ ಪ್ಯಾನೆಲ್‌ಗಳು ಇದಕ್ಕೆ ಆಕರ್ಷಕ ನೋಟವನ್ನು ನೀಡುತ್ತವೆ. ಪ್ರಯಾಣದ ಸೌಕರ್ಯಕ್ಕಾಗಿ ಉದ್ದವಾದ 845 ಎಂಎಂ ಫ್ಲಾಟ್ ಸೀಟ್, ಲೆಗ್‌ರೂಮ್‌ಗಾಗಿ ನೇರ ಫುಟ್‌ಬೋರ್ಡ್ ಮತ್ತು ಭಾರತೀಯ ರಸ್ತೆಗಳಿಗೆ ಸೂಕ್ತವಾದ 169 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

tvs-orbiter-ev-launched-in-india-at-rs-99-900

ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಕಾಲ್ ಡಿಸ್ಪ್ಲೇ ಮತ್ತು ಅಗತ್ಯ ಮಾಹಿತಿಯನ್ನು ನೀಡುವ ಕಲರ್ ಎಲ್‌ಸಿಡಿ ಕ್ಲಸ್ಟರ್‌ ಕೂಡ ನೀಡಲಾಗಿದೆ. ಇನ್ನು ಸುರಕ್ಷತೆ ಮತ್ತು ತಂತ್ರಜ್ಞಾನವು ಆರ್ಬಿಟರ್‌ನ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ. ಸ್ಕೂಟರ್ ಕ್ರ್ಯಾಶ್ ಅಲರ್ಟ್‌ಗಳು ಮತ್ತು ಫಾಲ್ ಡಿಟೆಕ್ಷನ್, ಜಿಯೋ-ಫೆನ್ಸಿಂಗ್ ಮತ್ತು ಟೈಮ್-ಫೆನ್ಸಿಂಗ್ ಎಚ್ಚರಿಕೆಗಳ ಮೂಲಕ ರೈಡರ್ ಸುರಕ್ಷತೆಯನ್ನು ಬಲಪಡಿಸುತ್ತದೆ.

ಇವಿಷ್ಟೇ ಅಲ್ಲದೆ ಲೈವ್ ಲೊಕೇಷನ್ - ಟ್ರ್ಯಾಕಿಂಗ್, ವೆಹಿಕಲ್ ನ್ಯಾವಿಗೇಟ್, ಕ್ರ್ಯಾಶ್ ಮತ್ತು ಫಾಲ್ ಅಲರ್ಟ್ ‌ಗಳು, ಎಮರ್ಜೆನ್ಸಿ ನೋಟಿಫಿಕೇಷನ್, ಟೋವಿಂಗ್ ಅಲರ್ಟ್ ‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ದೃಢವಾದ ಬಾಡಿ ಬ್ಯಾಲೆನ್ಸ್‌ನೊಂದಿಗೆ ಸಂಪರ್ಕಿತ ವೈಶಿಷ್ಟ್ಯಗಳ ಸುಧಾರಿತ ಸೂಟ್‌ನೊಂದಿಗೆ ಬರುತ್ತದೆ.

ಕಸ್ಟಮೈಸ್ ಮಾಡಬಹುದಾದ ಸೆಟ್ಟಿಂಗ್‌ಗಳೊಂದಿಗೆ ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, LCD ಡಿಜಿಟಲ್ ಕ್ಲಸ್ಟರ್‌ನಲ್ಲಿ ಕರೆಗಳು, SMS ಮತ್ತು ಕಸ್ಟಮೈಸ್ ಅಲರ್ಟ್‌ಗಳನ್ನು ಪಡೆಯಬಹುದು. ಜೊತೆಗೆ ಹಿಲ್ ಹೋಲ್ಡ್ ಅಸಿಸ್ಟ್, ಕ್ರೂಸ್ ಕಂಟ್ರೋಲ್ ಮತ್ತು ಪಾರ್ಕಿಂಗ್ ಅಸಿಸ್ಟ್ ಅನ್ನು ನೀಡಲಾಗಿದೆ. ಇಕೊ ಮತ್ತು ಪವರ್ ಎಂಬ ಡ್ಯುಯಲ್ ಮೋಡ್‌ಗಳು ಹಾಗೂ ರೇಂಜ್ ಹೆಚ್ಚಿಸುವ ರೀಜೆನ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ರಿಮೋಟ್ ಬ್ಯಾಟರಿ ಮಾನಿಟರಿಂಗ್, ಓಡೋಮೀಟರ್ ರೀಡಿಂಗ್‌ಗಳು ಮತ್ತು ಓವರ್ - ದಿ - ಏರ್ ನವೀಕರಣಗಳಿಗಾಗಿ ಮೊಬೈಲ್ ಅಪ್ಲಿಕೇಶನ್‌ನಿಂದ ಸಂಪರ್ಕ ವೈಶಿಷ್ಟ್ಯಗಳನ್ನು ವರ್ಧಿಸಲಾಗಿದೆ. ಇದು ವಾಹನವು ಇತ್ತೀಚಿನ ಅಪ್‌ಡೇಟ್‌ಗಳೊಂದಿಗೆ ನವೀಕೃತವಾಗಿರುವುದನ್ನು ಖಚಿತಪಡಿಸುತ್ತದೆ. ಒಟ್ಟಾರೆ ಇದು ಬಜೆಟ್ ಸ್ನೇಹಿ ಬೆಲೆ, ವಿಸ್ತೃತ ರೇಂಜ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಹೊರಹೊಮ್ಮಿದೆ.

ಟಿವಿಎಸ್ ಆರ್ಬಿಟರ್ ಅನ್ನು ಅತ್ಯಾಕರ್ಷಕ ಬಣ್ಣಗಳಾದ ನಿಯಾನ್ ಸನ್‌ಬರ್ಸ್ಟ್, ಸ್ಟ್ರಾಟೋಸ್ ಬ್ಲೂ, ಲೂನಾರ್ ಗ್ರೇ, ಸ್ಟೆಲ್ಲರ್ ಸಿಲ್ವರ್, ಕಾಸ್ಮಿಕ್ ಟೈಟಾನಿಯಂ ಮತ್ತು ಮಾರ್ಷಿಯನ್ ಕಾಪರ್ ಬಣ್ಣಗಳಲ್ಲಿ ನೀಡಲಾಗುತ್ತಿದೆ. ಇದರ ಪ್ರತಿಸ್ಪರ್ಧಿಗಳ ವಿಷಯಕ್ಕೆ ಬಂದರೆ ಹೀರೋ ವಿಡಾ ವಿಎಕ್ಸ್ 2, ಓಲಾ ಎಸ್ 1 ಎಕ್ಸ್ ಮತ್ತು ಬಜಾಜ್ ಚೇತಕ್ ಬೇಸ್ ವೇರಿಯೆಂಟ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಿ ಸವಾಲು ಹಾಕಲು ಸಿದ್ಧವಾಗಿದೆ.

More from DriveSpark

Article Published On: Thursday, August 28, 2025, 14:09 [IST]
English summary
Tvs orbiter ev launched in india at rs 99 900
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+