TVS: 1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಹೊಸ ಟಿವಿಎಸ್ ಇವಿ: ಇದೆ ತಿಂಗಳು ಬಿಡುಗಡೆ?
ಟಿವಿಎಸ್ (TVS) ಮೋಟಾರ್ ಈಗಾಗಲೇ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಇವಿ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಇದೀಗ ತನ್ನ ಎಲೆಕ್ಟ್ರಿಕ್ ವಿಭಾಗವನ್ನು ವಿಸ್ತರಿಸುವ ಸಲುವಾಗಿ ಇದೇ ತಿಂಗಳು 28 ರಂದು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು HT Auto ವರದಿ ಮಾಡಿದೆ. ಅಧಿಕೃತ ಬಿಡುಗಡೆಯ ಸಮಯದಲ್ಲಿ ಸ್ಕೂಟರ್ ಕುರಿತ ಪೂರ್ಣ ವಿಶೇಷಣಗಳು ಮತ್ತು ನಿಜವಾದ ಸ್ಕೂಟರ್ ಚಿತ್ರಗಳನ್ನು ಬಹಿರಂಗಪಡಿಸಲಾಗುತ್ತದೆ. ಈ ಹೊಸ ಸ್ಕೂಟರ್ ಪ್ರವೇಶದೊಂದಿಗೆ TVS ತನ್ನ EV ವ್ಯಾಪ್ತಿಯನ್ನು ಮೊದಲ ಬಾರಿಗೆ ಖರೀದಿದಾರರು ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ವಿಸ್ತರಿಸುವ ಗುರಿಯನ್ನು ಹೊಂದಿದೆ.
ಕೆಲವು ತಿಂಗಳ ಹಿಂದೆ ಭಾರತದಲ್ಲಿ ಆರ್ಬಿಟರ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಟಿವಿಎಸ್ ಟ್ರೇಡ್ ಮಾರ್ಕ್ ಮಾಡಿದೆ. ಈಗ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ನ ಉತ್ಪಾದನಾ ಆವೃತ್ತಿಯನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಕೆಲ ವರದಿಗಳ ಪ್ರಕಾರ, ಟಿವಿಎಸ್ ಆಗಸ್ಟ್ 28, 2025 ರಂದು ಭಾರತದಲ್ಲಿ 'ಆರ್ಬಿಟರ್' (TVS Orbiter) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ.

ಹೊಸ ಟಿವಿಎಸ್ ಆರ್ಬಿಟರ್, ತನ್ನ ಅಣ್ಣನಾದ ಐಕ್ಯೂಬ್ ಕೆಳಗೆ ಬ್ರ್ಯಾಂಡ್‌ನ ಅತ್ಯಂತ ಕೈಗೆಟುಕುವ ಇವಿ ಆಗಿ ಮಾರಾಟವಾಗಲಿದೆ. ಆರ್ಬಿಟರ್ ಕನಿಷ್ಠ ವಿನ್ಯಾಸ, ಹಬ್ - ಮೌಂಟೆಡ್ ಮೋಟಾರ್ ಮತ್ತು ವೆಚ್ಚವನ್ನು ಕಡಿಮೆ ಮಾಡಲು ಸಣ್ಣ ಬ್ಯಾಟರಿ ಪ್ಯಾಕ್ ಅನ್ನು ಪಡೆಯುವ ನಿರೀಕ್ಷೆಯಿದೆ, ಇದರ ನಿರೀಕ್ಷಿತ ಬೆಲೆ ರೂ. 1 ಲಕ್ಷಕ್ಕಿಂತ ಕಡಿಮೆ (ಎಕ್ಸ್-ಶೋರೂಂ) ಇರಬಹುದು ಎಂದು ಹೇಳಲಾಗುತ್ತಿದೆ.
ಅಂದರೆ ರೂ. 95,000 ದಿಂದ ರೂ. 1,00,000 ನಡುವೆ ಬೆಲೆ ಇರಲಿದೆ ಎಂದು ಅಂದಾಜಿಸಲಾಗಿದೆ, ಇದು ಅತ್ಯಂತ ಕೈಗೆಟುಕುವ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಆಗಲಿದ್ದು ಬಜೆಟ್ ಆಧಾರಿತ ಖರೀದಿದಾರರಿಗೆ ಬೆಸ್ಟ್ ಆಯ್ಕೆಯಾಗಲಿದೆ. ನಿರೀಕ್ಷಿತ ಹಬ್ - ಮೌಂಟೆಡ್ ಮೋಟಾರ್ ಮತ್ತು ಸಣ್ಣ ಬ್ಯಾಟರಿ (2.2 kWh ಬ್ಯಾಟರಿ, iQube ಪ್ಯಾಕ್‌ಗಿಂತ ಕಡಿಮೆ ಇರುವ ಸಾಧ್ಯತೆ ಇದೆ) ನೀಡಲಾಗುವುದು, ಬಿಡುಗಡೆಯ ಸಮಯದಲ್ಲಿ ವಿವರಗಳನ್ನು ಬಹಿರಂಗಪಡಿಸಲಾಗುವುದು.
ವೈಶಿಷ್ಟ್ಯಗಳು ಮತ್ತು ವಿನ್ಯಾಸದ ವಿಷಯಕ್ಕೆ ಬಂದರೆ ಪ್ರೀಮಿಯಂಗಿಂತ ಪ್ರಾಯೋಗಿಕತೆಯ ಮೇಲೆ ಕೇಂದ್ರೀಕರಿಸಿ, ಐಕ್ಯೂಬ್‌ಗೆ ಹೋಲಿಸಿದರೆ ಸರಳವಾದ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಆಧುನಿಕ ಸ್ಟೈಲಿಂಗ್, ವೆಚ್ಚವನ್ನು ನಿರ್ವಹಿಸಲು ಕ್ರಿಯಾತ್ಮಕ ಹಾರ್ಡ್‌ವೇರ್ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಒಟ್ಟಾರೆ ಸಿಟಿಯಲ್ಲಿ ಓಡಾಡಲು ಬೇಕಾದ ಕನಿಷ್ಟತೆಯನ್ನು ಪರಿಗಣಿಸಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಟಿವಿಎಸ್ ಪ್ರಸ್ತುತ ಐಕ್ಯೂಬ್ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಸುಮಾರು 1 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ, ಟಾಪ್ ವೇರಿಯೆಂಟ್ 1.59 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. ಮುಂಬರುವ ಟಿವಿಎಸ್ ಆರ್ಬಿಟರ್ ಐಕ್ಯೂಬ್ ಗಿಂತ ಹೆಚ್ಚು ಕೈಗೆಟುಕುವ ವಾಹನವಾಗಿ ಸಿಗಲಿದೆ. ಇದು ಬ್ರ್ಯಾಂಡ್ ನ ಹೊಸ ಎಂಟ್ರಿ ಲೆವೆಲ್ ಇವಿಯನ್ನಾಗಿ ಮಾಡುತ್ತದೆ.
ಮುಂಬರಲಿರುವ ಟಿವಿಎಸ್ ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಇವಿ ಮಾರುಕಟ್ಟೆಯಲ್ಲಿ ತಮ್ಮ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಇವಿ ಮಾರುಕಟ್ಟೆಯಲ್ಲಿ ಓಲಾ ಎಸ್ 1 ಎಕ್ಸ್, ವಿಡಾ ವಿಎಕ್ಸ್ 2 ಮತ್ತು ಬಜಾಜ್ ಚೇತಕ್‌ನ ಕಡಿಮೆ ಟ್ರಿಮ್‌ಗಳಂತಹ ಆರಂಭಿಕ ಹಂತದ ಮಾಡಲ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಟಿವಿಎಸ್ ಆರ್ಬಿಟರ್ ಸರಳತೆ ಮತ್ತು ಮೌಲ್ಯದ ಮೇಲೆ ಕೇಂದ್ರೀಕರಿಸುವ ಮೂಲಕ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲು ಕಂಪನಿ ನೋಡುತ್ತಿದೆ. ಆದರೆ ಇದು ಪ್ರೀಮಿಯಂ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳನ್ನು ಕೈಬಿಡಬೇಕಾಗುತ್ತದೆ. ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಸಿಟಿ ಸ್ಕೂಟರ್ ಸಿಕ್ಕರೆ ಜನ ಖಂಡಿತ ಖರೀದಿಸುತ್ತಾರೆ ಎಂಬ ವಿಶ್ವಾಸದಲ್ಲಿ ಕಂಪನಿಯಿದೆ.


Click it and Unblock the Notifications








