ಆಫೀಸ್‌ಗೆ ಹೋಗುವವರಿಗೆ ಬೆಸ್ಟ್ ಚಾಯ್ಸ್! ರೂ.100 ಪೆಟ್ರೋಲ್ ಹಾಕಿಸಿ.. 70 ಕಿ.ಮೀ ಓಡಾಡಿ, ರೂ.73,000ಕ್ಕೆ ಸಿಗುತ್ತೆ ಈ ಬೈಕ್!

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಚೇರಿಗೆ ತೆರಳುವುದು ತುಂಬಾ ಪ್ರಯಾಸದ ಕೆಲಸ. ಇಂತಹ ಸಂದರ್ಭದಲ್ಲಿ ಬೈಕ್‌ಗಳು ತೀರಾ ಅನಿವಾರ್ಯ. ಅದರಲ್ಲೂ ಟಿವಿಎಸ್ ರೇಡಿಯನ್ (Tvs Radeon) ಎಲ್ಲ ವಿಧದಲ್ಲೂ ನೆರವಾಗಬಲ್ಲದು. ಇದು ಬಹುತೇಕರ ಆಯ್ಕೆಯ ದ್ವಿಚಕ್ರ ವಾಹನವಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನೀವು ದಿನಬಳಕೆಗಾಗಿ ಈ ಮೋಟಾರ್‌ಸೈಕಲ್‌ನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ನಾವಿಲ್ಲಿ ಇದರ ಬೆಲೆ, ವಿನ್ಯಾಸ, ಮೈಲೇಜ್ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಬೆಲೆ & ರೂಪಾಂತರಗಳು (Price & Variants):

ನೂತನ ಟಿವಿಎಸ್ ರೇಡಿಯನ್ ಅಗ್ಗದ ದರದಲ್ಲೂ ಲಭ್ಯವಿದ್ದು, ರೂ.73,518 ರಿಂದ ರೂ. 86,845 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಶ್ರೀಸಾಮಾನ್ಯರು ಕೂಡ ಸುಲಭವಾಗಿ ಕೊಂಡುಕೊಳ್ಳಬಹುದು. ಬ್ಲ್ಯಾಕ್ ಎಡಿಷನ್, ಬೇಸ್ ಎಡಿಷನ್, ಡಿಜಿಟಲ್ ಕ್ಲಸ್ಟರ್ ಡ್ರಮ್ ಹಾಗೂ ಡಿಜಿಟಲ್ ಕ್ಲಸ್ಟರ್ ಡಿಸ್ಕ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

Tvs Radeon Price Design Mileage Features And Every Top Things Best Choice For Office Going People

ವಿನ್ಯಾಸ & ಬಣ್ಣಗಳು (Design & Colors):

ಹೊಸ ಟಿವಿಎಸ್ ರೇಡಿಯನ್ ಬೈಕ್ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ರೌಂಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು ಮತ್ತು 18-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಮೆಟಲ್ ಬ್ಲ್ಯಾಕ್, ಆಲ್ ಬ್ಲ್ಯಾಕ್, ಟೈಟಾನಿಯಂ ಗ್ರೇ, ರಾಯಲ್ ಪರ್ಪಲ್ ಹಾಗೂ ಸ್ಟಾರ್‌ಲೈಟ್ ಬ್ಲ್ಯೂ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

ಸುತ್ತಳತೆ (Measurements):

ಈ ಮೋಟಾರ್‌ಸೈಕಲ್‌ 2025 ಎಂಎಂ ಉದ್ದ, 705 ಎಂಎಂ ಅಗಲ ಮತ್ತು 1080 ಎಂಎಂ ಎತ್ತರವು ಇದೆ. ಜೊತೆಗೆ 180 ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1265 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 115 ಕೆಜಿ ತೂಕವಿದ್ದು, 10 ಲೀಟರ್‌ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಕಾರ್ಯಕ್ಷಮತೆ (Permanence):

ಇದು 109.7 ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 7350 ಆರ್‌ಪಿಎಂನಲ್ಲಿ 8.19 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 4500 ಆರ್‌ಪಿಎಂನಲ್ಲಿ 8.7 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 73 ಕಿ.ಮೀಗೂ ಅಧಿಕ ಮೈಲೇಜ್ ನೀಡಬಲ್ಲದು.

ವೈಶಿಷ್ಟ್ಯಗಳು (Features):

ಟಿವಿಎಸ್ ರೇಡಿಯನ್ ಬೈಕ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಗ್ರಾಬ್ ರೈಲ್‌ಗಳು, ಲಗೇಜ್‌ ಹುಕ್, ಎಲೆಕ್ಟ್ರಿಕ್ ಸೆಲ್ಫ್-ಸ್ಟಾರ್ಟ್,ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್‌ಗಳನ್ನು ಪಡೆದಿದೆ.

ಸಸ್ಪೆನ್ಷನ್ ಸೆಟಪ್‌ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):

ಈ ಮೋಟಾರ್‌ಸೈಕಲ್‌ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) 5-ಸ್ಟೆಪ್ ಪ್ರಿ ಲೋಡ್ ಅಡ್ಜಸ್ಟೇಬಲ್ ಟ್ವಿನ್ -ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ರೂಪಾಂತರಗಳಿಗೆ ಅನುಗುಣವಾಗಿ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಇದಕ್ಕೆ ಹೋಂಡಾ ಸಿಡಿ 110 ಡ್ರೀಮ್ ಹಾಗೂ ಬಜಾಜ್ ಪ್ಲಾಟಿನಾ 110ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಟಿವಿಎಸ್ ರೇಡಿಯನ್ ಮಾರಾಟ ಹೇಗಿದೆ:

ಈ ಜೂನ್ ತಿಂಗಳು 'ರೇಡಿಯನ್' ಬೈಕ್‌ಗಳನ್ನು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟಗೊಳಿಸಲಾಗಿದೆ. ಒಟ್ಟು 8,863 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 10,274 ಯುನಿಟ್‌ಗಳನ್ನು ಮಾರಲಾಗದೆ. ಈ ಅಂಕಿ ಅಂಶಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -13.73% ಇಳಿಕೆಯಾಗಿದೆ.

More from DriveSpark

Article Published On: Thursday, July 31, 2025, 17:12 [IST]
English summary
Tvs radeon price design mileage features and every top things best choice for office going people
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+