TVS: 93,800.. 56 ಕಿ.ಮೀ ಮೈಲೇಜ್, ಟಿವಿಎಸ್ ರೈಡರ್ ಬೈಕ್‌ನ ಹೊಸ ವೇರಿಯೆಂಟ್ ಕುರಿತ ಪ್ರಮುಖಾಂಶಗಳಿವು!
ಈಚೆಗೆ ಜನಪ್ರಿಯ ಟಿವಿಎಸ್ ರೈಡರ್ (TVS Raider) ಮೋಟಾರ್‌ಸೈಕಲ್‌ನ ನೂತನ ರೂಪಾಂತರವಾದ 'ಡುಯಲ್ ಡಿಸ್ಕ್ ಬ್ರೇಕ್'ನ್ನು ಮಾರಾಟಕ್ಕೆ ತರಲಾಗಿತ್ತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಸಾಕಷ್ಟು ಹೊಸತನಗಳಿಗೂ ಹೆಸರುವಾಸಿಯಾಗಿದೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ 'ರೈಡರ್ ಡುಯಲ್ ಡಿಸ್ಕ್ ಬ್ರೇಕ್' ರೂಪಾಂತರ (ವೇರಿಯೆಂಟ್) ಹೆಚ್ಚು ಸೂಕ್ತವಾಗಬಲ್ಲದು. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.
ಬೆಲೆ (Price):
ಇದು ಅತಿ ಕಡಿಮೆ ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದ್ದು, ಕನಿಷ್ಠ ರೂ.93,800 ಹಾಗೂ ಗರಿಷ್ಠ ರೂ.95,600 (ಎಕ್ಸ್-ಶೋರೂಂ - ನವದೆಹಲಿ) ಬೆಲೆಯನ್ನು ಹೊಂದಿದೆ. ಎಸ್‌ಎಕ್ಸ್‌ಸಿ ಡಿಡಿ (ಡುಯಲ್ ಡಿಸ್ಕ್) & ಟಿಎಫ್‌ಟಿ ಡಿಡಿ (ಡುಯಲ್ ಡಿಸ್ಕ್) ಎಂಬ ಎರಡು ರೂಪದಲ್ಲೂ ಸಿಗುತ್ತದೆ.

ವಿನ್ಯಾಸ & ಬಣ್ಣಗಳು (Design & Colors):
ನೂತನ 'ಟಿವಿಎಸ್ ರೈಡರ್ ಡುಯಲ್ ಡಿಸ್ಕ್ ಬ್ರೇಕ್' ರೂಪಾಂತರ, ನೋಡುಗರ ಕಣ್ಮನ ಸೆಳೆಯುವ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಅಲಾಯ್ ವೀಲ್‌ಗಳನ್ನು ಪಡೆದಿದೆ. ವಿಕೆಡ್ ಬ್ಲ್ಯಾಕ್, ಬ್ಲೇಜಿಂಗ್ ಬ್ಲೂ, ಬ್ಲ್ಯಾಕ್ ಪ್ಯಾಂಥರ್, ನಾರ್ಡೊ ಗ್ರೇ ಹಾಗೂ ಫಿಯರಿ ಯೆಲ್ಲೋ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.
ಸುತ್ತಳತೆ (Dimensions):
ಇದು ದೊಡ್ಡ ಗಾತ್ರದಲ್ಲಿದೆ. 2,070 ಮಿ.ಮೀ ಉದ್ದ, 785 ಮಿ.ಮೀ ಅಗಲ & 1,028 ಮಿ.ಮೀ ಎತ್ತರವಿದೆ. 180 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,326 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ. ಬರೋಬ್ಬರಿ 123 ಕೆಜಿ ತೂಕವಿದೆ. ಸೀಟ್ ಎತ್ತರವು 780 ಮಿ.ಮೀ ಇದೆ.
ಕಾರ್ಯಕ್ಷಮತೆ (Performance):
ಈ ಮೋಟಾರ್‌ಸೈಕಲ್ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 124.8 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 56 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಜೊತೆಗಿದು 10 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. 99 ಕೆಎಂಪಿಹೆಚ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ವೈಶಿಷ್ಟ್ಯಗಳು (Features):
ಹೊಸ 'ರೈಡರ್ ಡುಯಲ್ ಡಿಸ್ಕ್ ಬ್ರೇಕ್' ರೂಪಾಂತರವು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್/ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯನ್ನು ಪಡೆದಿದೆ. 90/90-17 & 110/80-17 ಅಳತೆಯ ಟೈರ್‌ಗಳನ್ನು ಹೊಂದಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking Systems):
ಇದು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) 5-ಸ್ಟೆಪ್ ಪ್ರಿಲೋಡ್ ಅಡ್ಜಸ್ಟೆಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಸಿಂಗಲ್ ಚಾನೆಲ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.
ಪ್ರತಿಸ್ಪರ್ಧಿ ಬೈಕ್‌ಗಳು (Rival Bikes):
ನೂತನ 'ಟಿವಿಎಸ್ ರೈಡರ್ ಡುಯಲ್ ಡಿಸ್ಕ್ ಬ್ರೇಕ್' ರೂಪಾಂತರಕ್ಕೆ ಸಾಲು ಸಾಲು ಪ್ರತಿಸ್ಪರ್ಧಿಗಳಿವೆ. ಬಜಾಜ್ ಪಲ್ಸರ್ 125, ಹೀರೋ ಗ್ಲಾಮರ್, ಹೋಂಡಾ ಎಸ್‌ಪಿ 125, ಹೀರೋ ಎಕ್ಸ್‌ಟ್ರೀಮ್ 125 ಆರ್, ಬಜಾಜ್ ಪಲ್ಸರ್ ಎನ್125 ಮತ್ತು ಬಜಾಜ್ ಪಲ್ಸರ್ ಎನ್ಎಸ್125 ಮೋಟಾರ್‌ಸೈಕಲ್‌ಗಳು ಪ್ರಬಲವಾದ ಎದುರಾಳಿಯಾಗಿವೆ.


Click it and Unblock the Notifications








