TVS: 'ರೋನಿನ್ ಅಗೊಂಡಾ' ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ಟಿವಿಎಸ್: ವಿಶೇಷತೆಗಳುನು?

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿಯು ಇತ್ತೀಚೆಗೆ ತನ್ನ ಐದನೇ ವರ್ಷದ 'ಟಿವಿಎಸ್ ಮೋಟೋಸೌಲ್' ಈವೆಂಟ್‌ನಲ್ಲಿ 'ರೋನಿನ್ ಅಗೊಂಡಾ' ಎಂಬ ಬೈಕ್ ಬಿಡುಗಡೆ ಮಾಡಿದೆ. ಇದು ಸ್ಟ್ಯಾಂಡರ್ಡ್ ರೋನಿನ್‌ನ ಸ್ಪೆಷಲ್ ಎಡಿಷನ್ ಆಗಿದ್ದು, ಹೆಚ್ಚುವರಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟಿ ಡಿಸೈನ್ ಹೊಂದಿದೆ. ವಾರಾಂತ್ಯದಲ್ಲಿ ನಿಧಾನವಾದ ಕರಾವಳಿ ಅಥವಾ ಕೆಫೆ ಸವಾರಿಗಳನ್ನು ಬಯಸುವ ಅನೇಕ ನಗರ ಸವಾರರಿಗೆ ರೋನಿನ್ ಅಗೊಂಡಾದ ವಿನ್ಯಾಸವು ಹೇಳಿಮಾಡಿಸಿದಂತಿರುತ್ತದೆ ಎಂದು ಟಿವಿಎಸ್ ಹೇಳಿದೆ.

ಬೈಕ್ ಬಾಡಿವರ್ಕ್ ‌ನಾದ್ಯಂತ ಸ್ಪೋರ್ಟಿ ಡಿಸೈನ್ ಮಾಡಲಾಗಿದೆ. ಟಿವಿಎಸ್ ರೋನಿನ್‌ನ ಬ್ರ್ಯಾಂಡ್ ಕಥೆಯನ್ನು ರೂಪಿಸಿದ ಕಸ್ಟಮ್ - ಕಲ್ಚರ್ ವಿನ್ಯಾಸ ನೀತಿಯಿಂದ ಪ್ರೇರಿತರಾಗಿ, ಟಿವಿಎಸ್ ಮೊದಲ - ಇನ್ - ಲೈನ್ ಲಿಮಿಟೆಡ್ - ಎಡಿಷನ್ 'ರೋನಿನ್ ಅಗೊಂಡಾ' ವನ್ನು ಬಿಡುಗಡೆ ಮಾಡಿದೆ. ಹೊಸ ಟಿವಿಎಸ್ ರೋನಿನ್ ಅಗೊಂಡಾ ಬೆಲೆಯು ರೂ. 1,30,990 (ಎಕ್ಸ್ ಶೋ ರೂಂ) ಇದೆ.

tvs-ronin-agonda-limited-edition-top-things

ಈ ಬೈಕ್ ನಿರ್ಮಾಣದ ಹಿಂದೆ ದೊಡ್ಡ ಕಾರಣವಿದೆ, ಗೋವಾದ ಅಗೊಂಡಾ ಬೀಚ್‌ನಿಂದ ಹೆಸರು ಮತ್ತು ದೃಶ್ಯ ನಿರ್ದೇಶನವನ್ನು ಪಡೆದು ಬೈಕ್ ಡಿಸೈನ್ ಮಾಡಲಾಗಿದೆ. ಈ ಅಗೊಂಡಾ ಗೋವಾ ರಾಜ್ಯದ ಹೆಚ್ಚು ಶಾಂತ ಕರಾವಳಿ ಪ್ರದೇಶಗಳಲ್ಲಿ ಒಂದಾಗಿದೆ. ಟಿವಿಎಸ್ ಹೇಳುವಂತೆ ರೋನಿನ್ ಅಗೊಂಡಾ "ಶಾಂತ ಆತ್ಮವಿಶ್ವಾಸದ" ನಿಲುವನ್ನು ಪ್ರತಿಬಿಂಬಿಸುತ್ತದೆ. ಕರಾವಳಿ ಪ್ರದೇಶಗಳಲ್ಲಿ ಈ ಬೈಕ್ ಓಡಿಸಲು ಮಜವಾಗಿರುತ್ತದೆ ಎಂದು ಟಿವಿಎಸ್ ಹೇಳಿದೆ.

ಹೊಸ ವಿನ್ಯಾಸದ ಅಡಿಯಲ್ಲಿ, ಬೈಕ್ ಪ್ರಮಾಣಿತ ಮಾಡಲ್‌ನಿಂದ ಹೆಚ್ಚಾಗೇನು ಬದಲಾಗಿಲ್ಲ. ಜೊತೆಗೆ ರೋನಿನ್ ಅಗೊಂಡಾ ಪರ್ಫಾಮೆನ್ಸ್ ಅಥವಾ ವೈಶಿಷ್ಟ್ಯಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಕೇವಲ ಗ್ರಾಫಿಕ್ಸ್‌ನಲ್ಲಿ ಮಾತ್ರ ಮಾಡಲಾಗಿದೆ. ಉಳೀದಂತೆ ಎಲ್ಲವು ಸ್ಟ್ಯಾಂಡರ್ಡ್ ರೋನಿನ್ ನಂತೆಯೇ ಇದೆ. ಸಂಭಾವ್ಯ ಖರೀದಿದಾರರಿಗೆ ಅದೇ ಮೂಲ ಪ್ಯಾಕೇಜ್‌ನಲ್ಲಿ ಹೆಚ್ಚುವರಿ ಡಿಸೈನ್‌ನೊಂದಿಗೆ ನೀಡಲಾಗುತ್ತದೆ.

ಈ ಮೋಟಾರ್ ಸೈಕಲ್ ಬಿಳಿ ಬಣ್ಣದ ಪ್ಯಾಲೆಟ್ ಅನ್ನು ಹೊಂದಿದ್ದು, ಐದು ರೆಟ್ರೊ - ಪಟ್ಟಿಯ ಗ್ರಾಫಿಕ್ಸ್‌ನೊಂದಿಗೆ ಆಧುನಿಕ - ರೆಟ್ರೊ ವಿನ್ಯಾಸವನ್ನು ಪ್ರತಿಬಿಂಬಿಸುತ್ತದೆ. ಅಗೊಂಡಾ ಸ್ಪೆಷಲ್ ಎಡಿಷನ್ ಪ್ರತ್ಯೇಕತೆ, ಕರಕುಶಲತೆ ಮತ್ತು ಸವಾರ ಕೇಂದ್ರಿತ ಅಭಿವ್ಯಕ್ತಿಯಲ್ಲಿ ಬೇರೂರಿರುವ ಟಿವಿಎಸ್ ರೋನಿನ್ ಶ್ರೇಣಿಯ ವಿಕಸನಗೊಳ್ಳುತ್ತಿರುವ ವಿನ್ಯಾಸ ತತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿದೆ.

ವೈಶಿಷ್ಟ್ಯಗಳಲ್ಲಿ ಅದೇ ಡಿಜಿಟಲ್ LCD ಕನ್ಸೋಲ್, ಸಿಂಗಲ್-ಚಾನೆಲ್ ABS, USB ಚಾರ್ಜಿಂಗ್, ಬ್ಲೂಟೂತ್ ಸಂಪರ್ಕ ಸೇರಿವೆ. ಅದೇ ಸಿಂಗಲ್ - ಸಿಲಿಂಡರ್, ಆಯಿಲ್ - ಕೂಲ್ಡ್ 225.9cc ಎಂಜಿನ್ ಅನ್ನು ಉಳಿಸಿಕೊಂಡಿದೆ, 5 - ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದರ ಎಂಜಿನ್ 7,750 rpm ನಲ್ಲಿ 20.4 PS ಮತ್ತು 3,750 rpm ನಲ್ಲಿ 19.93 Nm ಉತ್ಪಾದಿಸುತ್ತದೆ.

ಟಿವಿಎಸ್ ಮೋಟೋಸೌಲ್ ಉದ್ಘಾಟನಾ ದಿನದ ಬಗ್ಗೆ ಮಾತನಾಡಿದ ಟಿವಿಎಸ್ ಮೋಟಾರ್ ಕಂಪನಿಯ ಪ್ರೀಮಿಯಂ ವ್ಯವಹಾರದ ಮುಖ್ಯಸ್ಥ ವಿಮಲ್ ಸಂಬ್ಲಿ, " ಹೊಸ ಟಿವಿಎಸ್ ಅಗೋಂಡಾ ರೋನಿನ್ ಸ್ಪೆಷಲ್ ಎಡಿಷನ್ ಆವೃತ್ತಿಯು ಹೆಚ್ಚು ಪ್ರಗತಿಪರ ಮತ್ತು ಅಭಿವ್ಯಕ್ತಿಶೀಲ ಮೋಟಾರ್‌ಸೈಕ್ಲಿಂಗ್ ಸಂಸ್ಕೃತಿಯನ್ನು ಆಚರಿಸುತ್ತದೆ. ನಮ್ಮ ಸವಾರರ ಉತ್ಸಾಹವು ಪ್ರತಿ ವರ್ಷ ಬಲವಾಗಿ ಬೆಳೆಯುವುದನ್ನು ನೋಡುವುದು ಸ್ಪೂರ್ತಿದಾಯಕವಾಗಿದೆ.

ಹೊಸ ಟಿವಿಎಸ್ ರೋನಿನ್ ಅಗೊಂಡಾದೊಂದಿಗೆ, ಟಿವಿಎಸ್ ಬ್ರ್ಯಾಂಡ್ ಉದ್ದೇಶ ಮತ್ತು ಸೃಜನಶೀಲತೆಯೊಂದಿಗೆ ಹೇಗೆ ವಿಕಸನಗೊಳ್ಳುತ್ತಿವೆ ಎಂಬುದನ್ನು ನಾವು ಪ್ರದರ್ಶಿಸುತ್ತಿದ್ದೇವೆ. ಇದು ಹೀಗೇ ಮುಂದುವರಿಯಲಿದೆ, ನಮ್ಮ ವಾಹನಗಳು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ. ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಮಾಡಲ್‌ಗಳನ್ನು ಪರಿಚಯಿಸಲಿದ್ದೇವೆ" ಎಂದರು.

More from DriveSpark

Article Published On: Tuesday, December 9, 2025, 12:09 [IST]
English summary
Tvs ronin agonda limited edition top things
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+