TVS: ಟಿವಿಎಸ್ ಟೂ-ವೀಲರ್‌ಗಳಿಗೆ ಮುಗಿಬಿದ್ದ ಗ್ರಾಹಕರು.. ಜುಪಿಟರ್ & ಐಕ್ಯೂಬ್ ಸ್ಕೂಟರ್‌ಗಳು ಬೇಕೆಂದು ಹಠ!

ಟಿವಿಎಸ್ ಮೋಟಾರ್ (TVS Motor) ನಂಬಿಕಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಳೆದ ತಿಂಗಳು (ಮಾರ್ಚ್-2025) ಒಟ್ಟು 2,97,622 ಯುನಿಟ್ ದ್ವಿಚಕ್ರ ವಾಹನಗಳನ್ನು (ಬೈಕ್ & ಸ್ಕೂಟರ್‌ಗಳು) ಮಾರಾಟ ಮಾಡಿದೆ. 2024ರ ಇದೇ ಅವಧಿಯಲ್ಲಿ 2,60,532 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ಶೇಕಡ 14.2% ಬೆಳವಣಿಗೆಯಾಗಿದೆ. ಇದರೊಂದಿಗೆ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸುವ ಕಂಪನಿಗಳ ಪಟ್ಟಿಯಲ್ಲಿ ಟಿವಿಎಸ್ ಮೋಟಾರ್ 3ನೇ ಸ್ಥಾನದಲ್ಲಿದೆ. ಮೊದರೆಡು ಸ್ಥಾನಗಳು ಹೀರೋ ಹಾಗೂ ಹೋಂಡಾ ಕಂಪನಿಯ ಪಾಲಾಗಿದೆ. ನಾವಿಲ್ಲಿ ಟಿವಿಎಸ್ ಕಂಪನಿಯ ಪ್ರತಿಯೊಂದು ದ್ವಿಚಕ್ರ ವಾಹನಗಳ ಮಾರಾಟದ ಅಂಕಿಅಂಶದ ಕುರಿತಂತೆ ವಿವರಿಸಿದ್ದೇವೆ.

ಟಿವಿಎಸ್ ಜುಪಿಟರ್ (TVS Jupiter): ಹೋದ ತಿಂಗಳು ಈ ಸ್ಕೂಟರ್‌ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಕಂಪನಿಯು ಬರೋಬ್ಬರಿ 1,05,834 ಯುನಿಟ್ ಜುಪಿಟರ್ ಸ್ಕೂಟರ್‌ಗಳನ್ನು ಮಾರಾಟಗೊಳಿಸಿದೆ. 2024ರ ಮಾರ್ಚ್‌ನಲ್ಲಿ 71,390 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಮೂಲಕ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ 48% ಪ್ರಗತಿಯಾಗಿದೆ.

Tvs Two Wheelers Model Wise Sales March 2025 Jupiter Apache XL 100 TO iQube

ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಜುಪಿಟರ್ ಎರಡು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಇದರ ಜುಪಿಟರ್ 110 ಮಾಡೆಲ್, ರೂ.80,391 ರಿಂದ ರೂ.92,691 ಬೆಲೆಯನ್ನು ಒಳಗೊಂಡಿದೆ. 113.3 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 48 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಜುಪಿಟರ್ 125 ಮಾಡೆಲ್, ರೂ.89,396 ರಿಂದ ರೂ.99,805 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 124.8 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಪಡೆದಿದ್ದು, 57.27 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಟಿವಿಎಸ್ ಅಪಾಚೆ (TVS Apache): ಇದು ಜನಪ್ರಿಯ ಬೈಕ್ ಆಗಿದ್ದು, ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಕಳೆದ ತಿಂಗಳು (ಮಾರ್ಚ್-2025) ಸರಿ ಸುಮಾರು 44,214 ಯುನಿಟ್ ಅಪಾಚೆ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 34,237 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಅಂಕಿಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇಕಡ 29% ಬೆಳವಣಿಗೆಯಾಗಿದೆ.

Tvs Two Wheelers Model Wise Sales March 2025 Jupiter Apache XL 100 TO iQube

ಈ ಟಿವಿಎಸ್ ಅಪಾಚೆ ಮೋಟಾರ್‌ಸೈಕಲ್‌ ಕೂಡ ಹಲವು ರೂಪದಲ್ಲಿ ಖರೀದಿಗೆ ದೊರೆಯುತ್ತದೆ. ಇದರ ಅಪಾಚೆ ಆರ್‌ಟಿಆರ್ 160 ಮಾಡೆಲ್, ರೂ.1.11 ಲಕ್ಷದಿಂದ ರೂ.1.31 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 159.7 ಸಿಸಿ ಪೆಟ್ರೋಲ್ ಎಂಜಿನ್ ಪಡೆದಿದ್ದು, 47 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಬಗ್ಗೆ ಹೇಳುವುದಾದರೆ, ಇದು ರೂ.1.20 ಲಕ್ಷದಿಂದ ರೂ.1.40 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಮೋಟಾರ್‌ಸೈಕಲ್‌ 159.7 ಸಿಸಿ ಏರ್/ಆಯಿಲ್-ಕೋಲ್ಡ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 45 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

Tvs Two Wheelers Model Wise Sales March 2025 Jupiter Apache XL 100 TO iQube

ನೂತನ ಟಿವಿಎಸ್ ಅಪಾಚೆ ಆರ್‌ಆರ್ 310 ಕುರಿತಂತೆ ಮಾತನಾಡುವುದಾದರೆ, ಈ ಮೋಟಾರ್‌ಸೈಕಲ್‌ ರೂ.2.75 ಲಕ್ಷದಿಂದ ರೂ.3 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 312.2 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 34 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಪ್ರಯಾಣಿಕರ ರಕ್ಷಣೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಟಿವಿಎಸ್ ಎಕ್ಸ್ಎಲ್ 100 (TVS XL 100): ಇದು ಜನಪ್ರಿಯ ಮೊಪೆಡ್ ಆಗಿದೆ. ಹೋದ ತಿಂಗಳು (ಮಾರ್ಚ್-2025) ಬರೋಬ್ಬರಿ 35,181 ಯುನಿಟ್ ಎಕ್ಸ್ಎಲ್ 100 ಮೊಪೆಡ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಮಾರ್ಚ್‌ನಲ್ಲಿ 40,867 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಆದರೂ ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣ ಶೇಕಡ -14% ಇಳಿಕೆಯಾಗಿದೆ.

Tvs Two Wheelers Model Wise Sales March 2025 Jupiter Apache XL 100 TO iQube

ಸದ್ಯ, ದೇಶೀಯವಾಗಿ ಟಿವಿಎಸ್ ಎಕ್ಸ್ಎಲ್ 100 ಮೊಪೆಡ್‌ನ ವಿವಿಧ ರೂಪಾಂತರಗಳು (ವೇರಿಯೆಂಟ್) ಗ್ರಾಹಕರ ಖರೀದಿಗೆ ಲಭ್ಯವಿವೆ. ಇವುಗಳು ರೂ.46,354 ರಿಂದ ರೂ.60,399 (ಎಕ್ಸ್-ಶೋರೂಂ) ದರವನ್ನು ಪಡೆದಿವೆ. 99.7 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 65 ಕೆಎಂಪಿಎಲ್‌ವರೆಗೆ ಕೊಡುತ್ತವೆ. ಪ್ರಯಾಣಿಕರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿವೆ.

ಟಿವಿಎಸ್ ರೈಡರ್ (TVS Raider): ಕಳೆದ ತಿಂಗಳು ಸರಿ ಸುಮಾರು 30,988 ಯುನಿಟ್ ರೈಡರ್ ಬೈಕ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಮಾರ್ಚ್‌ನಲ್ಲಿ 38,026 ಯುನಿಟ್‌ಗಳನ್ನು ಮಾರಲಾಗಿದೆ. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಅಂಕಿಸಂಖ್ಯೆ ವರ್ಷದಿಂದ ವರ್ಷಕ್ಕೆ ಶೇಕಡ -19% ಕುಸಿತವಾಗಿದೆ.

ಟಿವಿಎಸ್ ರೈಡರ್ ಮೋಟಾರ್‌ಸೈಕಲ್‌ ಬಜೆಟ್ ಬೆಲೆಯಲ್ಲಿಯೇ ಖರೀದಿಗೆ ದೊರೆಯುತ್ತದೆ. ಇದು ರೂ.90,990 ರಿಂದ ರೂ.1.02 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 124.8 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 71.94 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ ಸ್ಟ್ರೈಕಿಂಗ್ ರೆಡ್ ಹಾಗೂ ವಿಕೆಡ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಟಿವಿಎಸ್ ಐಕ್ಯೂಬ್ (TVS iQube): ಇದೊಂದು ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಹೋದ ತಿಂಗಳು (ಮಾರ್ಚ್-2025) 26,531 ಯುನಿಟ್ ಐಕ್ಯೂಬ್ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇಂದೇ ಅವಧಿಯಲ್ಲಿ 14,326 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇಕಡ 85% ಪ್ರಗತಿಯನ್ನು ಸಾಧಿಸಲಾಗಿದೆ.

ದೇಶೀಯವಾಗಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಸ್ಟ್ಯಾಂಡರ್ಡ್ ಹಾಗೂ ಎಸ್‌ಟಿ ಎಂಬ ರೂಪಾಂತರಗಳೊಂದಿಗೆ (ವೇರಿಯೆಂಟ್) ಸಿಗುತ್ತದೆ. ಸ್ಟ್ಯಾಂಡರ್ಡ್ ಐಕ್ಯೂಬ್ ಮಾಡೆಲ್, ಕನಿಷ್ಠ ರೂ.1.07 ಹಾಗೂ ಗರಿಷ್ಠ ರೂ.1.37 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.2 ಕೆಡಬ್ಲ್ಯೂಹೆಚ್ ಮತ್ತು 3.4 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 75 ರಿಂದ 100 ಕಿಲೋಮೀಟರ್‌ ಓಡುತ್ತದೆ.

ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾಡೆಲ್ ಕುರಿತಂತೆ ಹೇಳುವುದಾದರೆ, ಇದು ರೂ.1.56 ಲಕ್ಷದಿಂದ ರೂ.1.85 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. ಹೆಚ್ಚು ಶಕ್ತಿಯುತವಾದ 3.4 ಕೆಡಬ್ಲ್ಯೂಹೆಚ್ ಮತ್ತು 5.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 100 ರಿಂದ 150 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಇನ್ನುಳಿದಂತೆ ಟಿವಿಎಸ್ ಕಂಪನಿಯ ಇತರೆ ದ್ವಿಚಕ್ರ ವಾಹನಗಳು ಸಹ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಎನ್‌ಟಾರ್ಕ್ ಸ್ಕೂಟರ್‌ನ 21,948 ಯುನಿಟ್, ರೇಡಿಯನ್ ಬೈಕ್‌ನ 10,093 ಯುನಿಟ್, ಜೆಸ್ಟ್ ಸ್ಕೂಟರ್‌ನ 7,768 ಯುನಿಟ್, ಸ್ಪೋರ್ಟ್ ಮೋಟಾರ್‌ಸೈಕಲ್‌ನ 7,073 ಯುನಿಟ್, ರೋನಿನ್ ಬೈಕ್‌ನ 5,037 ಯುನಿಟ್, ಹಾಗೂ ಸ್ಟಾರ್ ಸಿಟಿ ಮೋಟಾರ್‌ಸೈಕಲ್‌ನ 2,855 ಯುನಿಟ್‌ಗಳನ್ನು ಯಶಸ್ವಿಯಾಗಿ ಮಾರಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, April 26, 2025, 18:52 [IST]
English summary
Tvs two wheelers model wise sales march 2025 jupiter apache xl 100 to iqube
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+