TVS: ಬಡವರ ಬಂಡಿ.. ಟಿವಿಎಸ್ ಎಕ್ಸ್ಎಲ್ 100ನ ಹೊಸ ವೇರಿಯೆಂಟ್ ಬಿಡುಗಡೆ, ಬೆಲೆಯೂ ಅಗ್ಗ.. ವಿಶೇಷತೆಗಳೇನು?

ಟಿವಿಎಸ್ ಮೋಟಾರ್ (TVS Motor), ಜಗಮೆಚ್ಚಿದ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ 'ಬಡವರ ಬಂಡಿ' ಎಂದೇ ಹೆಸರುವಾಸಿಯಾಗಿರುವ 'ಎಕ್ಸ್ಎಲ್100' ಮೊಪೆಡ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ಅತಿ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಕಂಪನಿಯು ಈ ಮೊಪೆಡ್‌ಗಾಗಿ ಹೊಚ್ಚ ಹೊಸ ರೂಪಾಂತರವನ್ನು ಪರಿಚಯಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ನೂತನ ಟಿವಿಎಸ್ ಎಕ್ಸ್ಎಲ್ 100 ಹೆವಿ ಡ್ಯೂಟಿ ಅಲಾಯ್ (TVS XL 100 Heavy Duty Alloy) ರೂಪಾಂತರ (ವೇರಿಯೆಂಟ್) ಅದ್ದೂರಿಯಾಗಿ ಮಾರಾಟಕ್ಕೆ ಬಂದಿದೆ. ಇದು ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.65,047 (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದೆ.

TVS XL 100 Heavy Duty Alloy Variant Launched In India Rs 65 047 Price Details

ಈ ಮೊಪೆಡ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. ಸವಾರರಿಗೆ ಆರಾಮದಾಯಕವಾಗಿ ಪ್ರಯಾಣವನ್ನು ಒದಗಿಸಲು 16-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ನವೀನವಾದ ಎಲ್ಇಡಿ ಹೆಡ್‌ಲ್ಯಾಂಪ್‌ನ್ನು ಹೊಂದಿದ್ದು, ರಾತ್ರಿ ಗೋಚರತೆಯನ್ನು ಮತಷ್ಟು ಹೆಚ್ಚಿಸುತ್ತದೆ. ಹೊಸ ಬಗೆಯ ಗ್ರಾಫಿಕ್ಸ್ ಮತ್ತು ಮರುವಿನ್ಯಾಸಕ್ಕೆ ಒಳಪಡಿಸಲಾದ ಟೈಲ್‌ಲೈಟ್‌ಗಳನ್ನು ಹೊಂದಿದೆ. ರೆಡ್, ಬ್ಲೂ ಹಾಗೂ ಗ್ರೇ ಎಂಬ 3 ಬಣ್ಣಗಳೊಂದಿಗೂ ದೊರೆಯುತ್ತದೆ.

ನೂತನ ಟಿವಿಎಸ್ ಎಕ್ಸ್ಎಲ್ 100 ಹೆವಿ ಡ್ಯೂಟಿ ಅಲಾಯ್ ಮೊಪೆಡ್ 1,895 ಎಂಎಂ ಉದ್ದ, 670 ಎಂಎಂ ಅಗಲ ಮತ್ತು 1,077 ಎಂಎಂ ಎತ್ತರವಿದೆ. ಜೊತೆಗಿದು 145 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1228 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಇದು ಹೆಚ್ಚು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 99.7 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, 4-ಸ್ಟ್ರೋಕ್ ಫ್ಯುಯೆಲ್-ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 6000 ಆರ್‌ಪಿಎಂನಲ್ಲಿ 4.3 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 3500 ಆರ್‌ಪಿಎಂನಲ್ಲಿ 6.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 55 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. 58 ಕೆಎಂಪಿಹೆಚ್ ಸ್ಪೀಡ್‌ನ್ನು ಹೊಂದಿದೆ.

ಈ ಮೊಪೆಡ್ ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಲೆಂಟ್ ಸ್ಟಾರ್ಟರ್, ಬಲ್ಬ್ ಇಂಡಿಕೇಟರ್‌ಗಳು ಹಾಗೂ ಮೊಬೈಲ್ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಇಟಿಎಫ್ಐ (ಇಕೋ ಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್) ಟೆಕ್ನಾಲಜಿಯನ್ನು ಒಳಗೊಂಡಿದ್ದು, ಶೇಕಡ 15% ಅಧಿಕ ಮೈಲೇಜ್ ನೀಡಲು ಸಹಾಯಕವಾಗಿದೆ. ಟಿಲ್ಟ್ ಸೆನ್ಸರ್ ಹೊಂದಿದ್ದು, ಒಂದೊಮ್ಮೆ ಮೊಪೆಡ್ ಬಿದ್ದರೆ ಕೇವಲ 3 ಸೆಕೆಂಡುಗಳಲ್ಲಿ ಎಂಜಿನ್ ಆಫ್ ಆಗುತ್ತದೆ.

ಹೊಸ ಟಿವಿಎಸ್ ಎಕ್ಸ್ಎಲ್ 100 ಹೆವಿ ಡ್ಯೂಟಿ ಅಲಾಯ್ ಮೊಪೆಡ್ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್ ರೇರ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಇದರೊಂದಿಗೆ ಡ್ರಮ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.

ಟಿವಿಎಸ್ ಎಕ್ಸ್ಎಲ್ 100 ಮೊಪೆಡ್‌ನ ವಿವಿಧ ರೂಪಾಂತರಗಳು ಖರೀದಿಗೆ ಲಭ್ಯ:

ಹೆವಿ ಡ್ಯೂಟಿ - ರೂ.47,754 (ಎಕ್ಸ್-ಶೋರೂಂ)
ಹೆವಿಡ್ಯೂಟಿ ಐ-ಟಚ್‌ಸ್ಟಾರ್ಟ್ - ರೂ 60,405
ಹೆವಿಡ್ಯೂಟಿ ಐ-ಟಚ್‌ಸ್ಟಾರ್ಟ್ ವಿನ್ ಎಡಿಷನ್ - ರೂ.63,347
ಕಂಫರ್ಟ್ ಐ-ಟಚ್‌ಸ್ಟಾರ್ಟ್ - ರೂ.63,705

ಒಟ್ಟಾರೆಯಾಗಿ ಹೊಸ 'ಟಿವಿಎಸ್ ಎಕ್ಸ್ಎಲ್ 100 ಹೆವಿ ಡ್ಯೂಟಿ ಅಲಾಯ್' ರೂಪಾಂತರವು ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅಗ್ಗದ ದರದಲ್ಲೂ ಸಿಗುತ್ತದೆ. ಮುಂಬರುವ ದಿನಗಳಲ್ಲಿ ಈ ಮೊಪೆಡ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Friday, September 19, 2025, 15:53 [IST]
English summary
Tvs xl100 heavy duty alloy variant launched in india rs 65047 price details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+