TVS: ನಿಮ್ಮ ಹೆಂಡ್ತಿಗೆ ಹೊಸ ಸ್ಕೂಟರ್ ಕೊಡಿಸಬೇಕೇ.. ಇದು ಬೆಸ್ಟ್ ಚಾಯ್ಸ್, 50 ಕಿ.ಮೀ ಮೈಲೇಜ್.. 70,000 ರೂಪಾಯಿ!
ಟಿವಿಎಸ್ ಜೆಸ್ಟ್ 110 (TVS Zest 110) ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದು ಕಡಿಮೆ ತೂಕವನ್ನು ಹೊಂದಿದ್ದು, ಮಹಿಳೆಯರು ಸುಲಭವಾಗಿ ಬಳಕೆ ಮಾಡಲು ಸಾಧ್ಯವಾಗಲಿದೆ. ನಿಮ್ಮ ಪತ್ನಿಗೆ ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಉಡೊಗೊರೆಯಾಗಿ ನೀಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಜೆಸ್ಟ್ 110' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ, ಈ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
ಬೆಲೆ & ರೂಪಾಂತರಗಳು (Price & Variants):
ನೂತನ 'ಟಿವಿಎಸ್ ಜೆಸ್ಟ್ 110' ಸ್ಕೂಟರ್, ಅಗ್ಗದ ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಕನಿಷ್ಠ ರೂ.70,600 ಹಾಗೂ ಗರಿಷ್ಠ ರೂ.75,500 (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಒಳಗೊಂಡಿದೆ. ಗ್ಲಾಸ್, ಮ್ಯಾಟ್ ಸೀರೀಸ್ ಹಾಗೂ ಎಸ್ಎಕ್ಸ್‌ಸಿ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ವಿನ್ಯಾಸ & ಬಣ್ಣಗಳು (Design & Colors):
ಇದು ತುಂಬಾ ಅಚ್ಚುಕಟ್ಟಾದ ಸರಳವಾದ ವಿನ್ಯಾಸವನ್ನು ಹೊಂದಿದೆ. ಉತ್ತಮವಾದ ಬಾಡಿ ಪ್ಯಾನೆಲ್‌ಗಳನ್ನು ಪಡೆದಿದೆ. ಶಾರ್ಪ್ ಹೆಡ್‌ಲ್ಯಾಂಪ್ ಹಾಗೂ ಇಂಡಿಕೇಟರ್‌ಗಳನ್ನು ಪಡೆದಿದೆ. ಬೋಲ್ಡ್ ಬ್ಲ್ಯಾಕ್, ಗ್ರ್ಯಾಫೈಟ್ ಗ್ರೇ, ಮ್ಯಾಟ್ ಬ್ಲ್ಯಾಕ್, ಮ್ಯಾಟ್ ಬ್ಲೂ, ಪರ್ಪಲ್, ಮ್ಯಾಟ್ ರೆಡ್, ಪರ್ಲ್ ವೈಟ್ ಹಾಗೂ ಟರ್ಕೋಯಿಸ್ ಬ್ಲೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ಸುತ್ತಳತೆ (Dimensions):
ಹೊಸ 'ಟಿವಿಎಸ್ ಜೆಸ್ಟ್ 110' ಪುಟ್ಟ ಗಾತ್ರದಲ್ಲಿದ್ದರೂ, ಸಾಕಷ್ಟು ವಿಶಾಲವಾಗಿದೆ. 1,770 ಮಿ.ಮೀ ಉದ್ದ, 660 ಮಿ.ಮೀ ಅಗಲ ಮತ್ತು 1,139 ಮಿ.ಮೀ ಎತ್ತರವಿದೆ. 150 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,250 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಬರೋಬ್ಬರಿ 103 ಕೆಜಿ ತೂಕವಿದೆ.
ಕಾರ್ಯಕ್ಷಮತೆ (Performance):
ಈ ಸ್ಕೂಟರ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 109.7-ಸಿಸಿ ಏರ್-ಕೋಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 7500 ಆರ್‌ಪಿಎಂನಲ್ಲಿ 8.19 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 5500 ಆರ್‌ಪಿಎಂನಲ್ಲಿ 8.8 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದು ಉತ್ತಮ ಇಂಧನ ದಕ್ಷತೆಯಿಂದಲೂ ಮನೆ ಮಾತಾಗಿದೆ. 45 ರಿಂದ 50 ಕಿ.ಮೀ ವರೆಗೆ ಮೈಲೇಜ್ ನೀಡಲಿದೆ. 5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೆಲವೇ 11 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ವೈಶಿಷ್ಟ್ಯಗಳು (Features):
ನೂತನ 'ಟಿವಿಎಸ್ ಜೆಸ್ಟ್ 110' ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, 9 ಲೀಟರ್‌ನಷ್ಟು ಅಂಡರ್ ಸೀಟ್ ಸ್ಟೋರೇಜ್, ಲಗೇಜ್ ಹುಕ್, ಕಿಕ್ & ಸೆಲ್ಫ್ ಸ್ಟಾರ್ಟ್‌ನ್ನು ಒಳಗೊಂಡಿದೆ. ಇದರೊಂದಿಗೆ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಸೀಟ್ ಎತ್ತರವು 760 ಮಿ.ಮೀ ಇದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಈ ಸ್ಕೂಟರ್ ಸವಾರರಿಗೂ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಡಬಲ್ ರೇಟೆಡ್ ಹೈಡ್ರಾಲಿಕ್ ಮೊನೊ-ಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಜೊತೆಗೆ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಪ್ರತಿಸ್ಪರ್ಧಿ ಸ್ಕೂಟರ್‌ಗಳು (Rival Scooters):
ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಬಹುಮುಖ್ಯವಾಗಿ ಹೀರೋ ಪ್ಲೆಷರ್ ಪ್ಲಸ್, ಹೀರೋ ಜೂಮ್, ಹೋಂಡಾ ಡಿಯೋ. ಹೀರೋ ಡೆಸ್ಟಿನಿ, ಸುಜುಕಿ ಆಕ್ಸೆಸ್ ಹಾಗೂ ಹೋಂಡಾ ಆಕ್ಟಿವಾಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿವೆ.


Click it and Unblock the Notifications








