ಭಾರತದಲ್ಲಿ ಹೊಸ ಐಷಾರಾಮಿ ಸ್ಕೂಟರ್‌ಗಳನ್ನು ಪರಿಚಯಿಸಿದ ವೆಸ್ಪಾ: ವಿಶೇಷತೆಗಳೇನು?

ಪ್ರಸಿದ್ಧ ಸ್ಕೂಟರ್ ಬ್ರಾಂಡ್ ವೆಸ್ಪಾ, ಭಾರತದಲ್ಲಿ ಹೊಸ ಸ್ಕೂಟರ್‌ಗಳ ಪೋರ್ಟ್‌ಫೋಲಿಯೋವನ್ನು ಘೋಷಿಸಿದೆ. ಬೆಂಗಳೂರಿನಲ್ಲಿ ನಡೆದ ಆಕರ್ಷಕ ಅನಾವರಣ ಸಮಾರಂಭದಲ್ಲಿ, ಪಿಯಾಜಿಯೊ ಇಂಡಿಯಾ 2025ರ ಅದ್ಭುತ ವೆಸ್ಪಾ ಪೋರ್ಟ್‌ಫೋಲಿಯೊವನ್ನು ಪ್ರದರ್ಶಿಸಿತು. ಬೆಂಗಳೂರು ಯಾವಾಗಲೂ ನಮ್ಮ ಐಷಾರಾಮಿ ಸ್ಕೂಟರ್ ಬ್ರ್ಯಾಂಡ್‌ಗೆ ವಿಶೇಷ ಒಲವು ಹೊಂದಿದೆ. ನಮ್ಮ ಅತ್ಯಂತ ಮುಂದುವರಿದ 2025 ವೆಸ್ಪಾ ಪೋರ್ಟ್‌ಫೋಲಿಯೊವನ್ನು ನಗರಕ್ಕೆ ಪರಿಚಯಿಸಲು ನಾವು ತುಂಬಾ ಸಂತೋಷಪಡುತ್ತೇವೆ ಎಂದು ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ 2W ಡೊಮೆಸ್ಟಿಕ್ ಬ್ಯುಸಿನೆಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಅಜಯ್ ರಘುವಂಶಿ ಹೇಳಿದರು.

2025 ವೆಸ್ಪಾ ಪೋರ್ಟ್‌ಫೋಲಿಯೊ: 2025ರ ಪೋರ್ಟ್‌ ಫೋಲಿಯೊದಲ್ಲಿ ವಿವಿಧ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಹಲವು ಮಾಡಲ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಕ್ಲಾಸಿಕ್ ಸ್ಕೂಟರ್ ಇಷ್ಟಪಡುವವರಿಗಾಗಿ ''ವೆಸ್ಪಾ ಮತ್ತು ವೆಸ್ಪಾ ಎಸ್'', ತಾಂತ್ರಿಕವಾಗಿ ಆಧುನಿಕ ಡಿಸೈನ್ ಬಯಸುವವರಿಗಾಗಿ ''ವೆಸ್ಪಾ ಟೆಕ್ ಮತ್ತು ವೆಸ್ಪಾ ಎಸ್ ಟೆಕ್'' ಮತ್ತು ವಿಶೇಷ ಆವೃತ್ತಿಯ ಕಲಾಕೃತಿಯನ್ನು ಬಯಸುವವರಿಗಾಗಿ ''ವೆಸ್ಪಾ ಕ್ವಾಲಾ''ವನ್ನು ಆದ್ಯತೆಯ ಆಯ್ಕೆಯಾಗಿ ವಿನ್ಯಾಸಗೊಳಿಸಲಾಗಿದೆ.

vespa-introduced-a-new-luxury-scooter-portfolio-in-india

ವೆಸ್ಪಾ ಮತ್ತು ವೆಸ್ಪಾ ಎಸ್ ವಿಶೇಷತೆಗಳು: 2025 ರಿಂದ ವೆಸ್ಪಾ ಮತ್ತು ವೆಸ್ಪಾ ಎಸ್ ಹೊಸ ಎಂಜಿನ್ ಜೊತೆಗೆ ಹೊಸ ವಿನ್ಯಾಸ ಮತ್ತು ಬಣ್ಣಗಳನ್ನು ಹೊಂದಿರುತ್ತದೆ. ವೆಸ್ಪಾ ಮತ್ತು ವೆಸ್ಪಾ ಎಸ್ ಅನ್ನು ಅದರ ಕ್ಲಾಸಿಕ್ ವಿನ್ಯಾಸದೊಂದಿಗೆ ಹೊಸ ಪೀಳಿಗೆಯ ಗ್ರಾಹಕರಿಗೆ ಆಕರ್ಷಕವಾಗಿಸುವಂತಹ ಸೂಕ್ಷ್ಮ ವಿನ್ಯಾಸ ಬದಲಾವಣೆಗಳೊಂದಿಗೆ ಸಂಪೂರ್ಣವಾಗಿ ಮರುರೂಪಿಸಲಾಗಿದೆ.

ವೆಸ್ಪಾ ಮತ್ತು ವೆಸ್ಪಾ ಎಸ್ ಎರಡೂ 125 ಸಿಸಿ ಹಾಗೂ 150 ಸಿಸಿಯಲ್ಲಿ ಹೊಸ ಎಂಜಿನ್‌ಗಳೊಂದಿಗೆ ಸಜ್ಜುಗೊಂಡಿವೆ. ಸಾಮಾನ್ಯ ವೆಸ್ಪಾ 1,33,504 ರೂ. (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ವೆಸ್ಪಾ ಎಸ್ ವೇರಿಯೆಂಟ್ 1,37,380 ರೂ. (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

vespa-introduced-a-new-luxury-scooter-portfolio-in-india

ವೆಸ್ಪಾ ಟೆಕ್ ಮತ್ತು ವೆಸ್ಪಾ ಎಸ್ ಟೆಕ್: ವೆಸ್ಪಾ ಟೆಕ್ ಮತ್ತು ವೆಸ್ಪಾ ಎಸ್ ಟೆಕ್ ಉನ್ನತ - ಮಟ್ಟದ ತಾಂತ್ರಿಕ ವೈಶಿಷ್ಟ್ಯಗಳನ್ನು ಬಯಸುವವರಿಗೆ ಡಿಸೈನ್ ಮಾಡಲಾದ ವೆಸ್ಪಾ ಟೆಕ್ ಮತ್ತು ವೆಸ್ಪಾ ಎಸ್ ಟೆಕ್ ದಿಟ್ಟವಾಗಿದ್ದು, ಉನ್ನತ-ಮಟ್ಟದ ವೈಶಿಷ್ಟ್ಯಗಳಿಂದ ತುಂಬಿದ್ದು, ಅವು ಸುಲಭವಾಗಿ ಎದ್ದು ಕಾಣುವಂತೆ ಮಾಡುತ್ತದೆ.

125 ಸಿಸಿ ಅಥವಾ 150 ಸಿಸಿ ಹೊಸ ಸುಧಾರಿತ ಎಂಜಿನ್‌ಗಳನ್ನು ಹೊಂದಿರುವ ವೆಸ್ಪಾ ಟೆಕ್ ಮತ್ತು ವೆಸ್ಪಾ ಎಸ್ ಟೆಕ್, ಕೀ-ಲೆಸ್ ಇಗ್ನಿಷನ್‌ನಿಂದ ಟಿಎಫ್‌ಟಿ ಸ್ಮಾರ್ಟ್ ಡ್ಯಾಶ್, ಬ್ಲೂಟೂತ್ ಏಕೀಕರಣ ಮತ್ತು ನ್ಯಾವಿಗೇಷನ್ ಸಾಮರ್ಥ್ಯದವರೆಗೆ ಎಲ್ಲಾ ಆಧುನಿಕ ಫೀಚರ್‌ಗಳನ್ನು ಒಳಗೊಂಡಿದೆ. ಇವುಗಳ ಜೊತೆಗೆ ''ವೆಸ್ಪಾ ಟೆಕ್'' 'ವೆಸ್ಪಾ ಕ್ವಾಲಾ' ಎಂಬ ಹೆಸರಿನ ವಿಶೇಷ ಆವೃತ್ತಿಯ ವೆಸ್ಪಾವನ್ನು ಸಹ ನೀಡುತ್ತದೆ.

ರೂ. 1,93,307 (ಎಕ್ಸ್-ಶೋರೂಂ) ಆರಂಭಿಕ ಬೆಲೆಯೊಂದಿಗೆ ವೆಸ್ಪಾ ಟೆಕ್ 125cc ಮತ್ತು 150cc ಗಳಲ್ಲಿ ಲಭ್ಯವಿದೆ. ರೂ. 1,97,183 (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ವೆಸ್ಪಾ S ಟೆಕ್ 125cc ಮತ್ತು 150cc ಶ್ರೇಣಿಯಲ್ಲಿ 2 ಏಕವರ್ಣದ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಹೊಸ 2025 ವೆಸ್ಪಾ ಪೋರ್ಟ್‌ಫೋಲಿಯೊ ಈಗ ಕರ್ನಾಟಕದಾದ್ಯಂತ ಎಲ್ಲಾ ವೆಸ್ಪಾ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, April 26, 2025, 17:00 [IST]
English summary
Vespa introduced a new luxury scooter portfolio in india
Read more on vespa india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+