ವಿಶ್ವ ಪರಿಸರ ದಿನ: ಪೆಟ್ರೋಲ್‌ಗೆ ಹೇಳಿ No.. ಈ ಅಗ್ಗದ ಎಲೆಕ್ಟ್ರಿಕ್ ಟೂ-ವೀಲರ್‌ಗಳನ್ನು ಖರೀದಿಸಿ.. ದುಡ್ಡು ಉಳಿಸಿ!

ಇಂದು ಭಾರತವು ಸೇರಿದಂತೆ ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನ (World Environment Day) ಆಚರಿಸಲಾಗುತ್ತಿದೆ. ಈ ದಿನದಂದು ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ವಿಶ್ವಸಂಸ್ಥೆಯು 1973ರಲ್ಲಿ ಮೊದಲ ಬಾರಿಗೆ ವಿಶ್ವ ಪರಿಸರ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿ ವರ್ಷ ಜೂನ್ 5ರಂದು ಚಾಚೂ ತಪ್ಪದೆ ಈ ದಿನವನ್ನು ಆಯೋಜಿಸುತ್ತಾ ಬರಲಾಗಿದೆ. ವಾಯು ಮಾಲಿನ್ಯವೆಂಬುದು ಪರಿಸರಕ್ಕೆ ಹೆಚ್ಚು ಮಾರಕವಾಗಿದೆ. ಪೆಟ್ರೋಲ್ ಚಾಲಿತ ವಾಹನಗಳು ಹೆಚ್ಚು ಇಂಗಾಲವನ್ನು ಹೊರಸೂಸುತ್ತವೆ. ಹಾಗಾಗಿ, ವಿವಿಧೆಡೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವಂತೆ ವಾಹನ ಸವಾರರಿಗೂ ಮನವರಿಕೆ ಮಾಡಿಕೊಡಲಾಗುತ್ತದೆ.

ನೀವು ದಿನನಿತ್ಯದ ಬಳಕೆಗಾಗಿ ಹೊಚ್ಚ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ ಹೋಂಡಾ ಆಕ್ಟಿವಾ ಇ, ಹೀರೋ ವಿಡಾ ವಿ2, ಬಜಾಜ್ ಚೇತಕ್ 3503, ಓಲಾ ರೋಡ್‌ಸ್ಟರ್ ಎಕ್ಸ್ ಹಾಗೂ ಹೋಂಡಾ ಕ್ಯೂಸಿ1 ಮಾಡೆಲ್‌ಗಳು ಹೆಚ್ಚು ಸೂಕ್ತವಾಗಲಿವೆ. ಇವುಗಳು ಕಡಿಮೆ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದ್ದು, ನಿರ್ವಹಣಾ ವೆಚ್ಚವು ಬಹಳ ಕಡಿಮೆಯಿದೆ.

World Environment Day Buy Best 5 Electric Two wheelers Activa e Vida V2 Chetak To QC1

ಹೋಂಡಾ ಆಕ್ಟಿವಾ ಇ (Honda Activa e)..

ಇದು ಬಜೆಟ್ ಬೆಲೆಯಲ್ಲಿಯೂ ಗ್ರಾಹಕರಿಗೆ ಲಭ್ಯವಾಗಲಿದೆ. ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ, ರೂ.1.17 ಲಕ್ಷದಿಂದ ರೂ.1.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಸ್ಕೂಟರ್ 1.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯವಿರುವ 2 ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 102 ಕಿಲೋಮೀಟರ್ ಓಡುತ್ತದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ (7.0-ಇಂಚು) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೀರೋ ವಿಡಾ ವಿ2 ಲೈಟ್ (Hero Vida V2 Lite)..

ಈ ಎಲೆಕ್ಟ್ರಿಕ್ ಸ್ಕೂಟರ್ ರೂ.85,000 (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 94 ಕಿಲೋಮೀಟರ್‌ ಕ್ರಮಿಸುತ್ತದೆ. ಟಿಎಫ್‌ಟಿ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (7-ಇಂಚು), ರೀ-ಜೆನ್ ಬ್ರೇಕಿಂಗ್ ಮತ್ತು ಕೀಲೆಸ್ ಎಂಟ್ರಿ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

World Environment Day Buy Best 5 Electric Two wheelers Activa e Vida V2 Chetak To QC1

ಬಜಾಜ್ ಚೇತಕ್ 3503 (Bajaj Chetak 3503)..

ಇದು ಅತಿ ಕಡಿಮೆ ಬೆಲೆಗೆ ಖರೀದಿಗೆ ಸಿಗುತ್ತದೆ. ರೂ.1.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 150 ರೇಂಜ್ (ಮೈಲೇಜ್) ನೀಡುತ್ತದೆ. 63 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮ್ಯೂಸಿಕ್ ಕಂಟ್ರೋಲ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಓಲಾ ರೋಡ್‌ಸ್ಟರ್ ಎಕ್ಸ್ (Ola Roadster X)..

ಈ ಎಲೆಕ್ಟ್ರಿಕ್ ಬೈಕ್ ರೂ.85,000 ಲಕ್ಷದಿಂದ ರೂ.1.05 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು ವಿವಿಧ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 117 ರಿಂದ 200 ಕಿಲೋಮೀಟರ್ ಓಡುತ್ತದೆ. ಎಲ್‌ಸಿಡಿ ಸೆಗ್ಮೆಂಟ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

World Environment Day Buy Best 5 Electric Two wheelers Activa e Vida V2 Chetak To QC1

ಹೋಂಡಾ ಕ್ಯೂಸಿ1 (Honda QC1)..

ಇದು ರೂ.90,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 1.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 80 ಕಿಲೋಮೀಟರ್ ಕ್ರಮಿಸುತ್ತದೆ. ಎಲ್‌ಸಿಡಿ ಡಿಸ್‌ಪ್ಲೇ ಮತ್ತು ಅನಲಾಗ್ ಕೀ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, June 5, 2025, 13:12 [IST]
English summary
World environment day buy best 5 electric two wheelers activa e vida v2 chetak to qc1
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+