ಯಮಹಾ ದ್ವಿಚಕ್ರ ವಾಹನಗಳ ಬೆಲೆ ಭಾರೀ ಇಳಿಕೆ: ರೂ. 17,000 ವರೆಗೆ ದರ ಕಡಿತ
ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್ ಇಂದು ತನ್ನ ದ್ವಿಚಕ್ರ ವಾಹನಗಳ ಮೇಲೆ ಜಿಎಸ್‌ಟಿ ಪರಿಷ್ಕರಣೆಯ ಸಂಪೂರ್ಣ ಲಾಭವನ್ನು ತನ್ನ ಗ್ರಾಹಕರಿಗೆ ಒದಗಿಸುವುದಾಗಿ ಘೋಷಿಸಿದ್ದು, ಈ ಬೆಲೆ ಕಡಿತವು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿದೆ. 350 ಸಿಸಿ ವರೆಗಿನ ಮೋಟಾರ್‌ಸೈಕಲ್‌ಗಳ ಮೇಲಿನ ಜಿಎಸ್‌ಟಿ ದರವನ್ನು 28% ರಿಂದ 18% ಕ್ಕೆ ಇಳಿಸಲಾಗಿದೆ. ಈ ವರ್ಗಕ್ಕೆ ಸೇರುವ ಯಮಹಾದ ಸಂಪೂರ್ಣ ದ್ವಿಚಕ್ರ ವಾಹನಗಳ ಪೋರ್ಟ್‌ಫೋಲಿಯೊ ಹೊಸ ತೆರಿಗೆ ದರಕ್ಕೆ ಅನುಗುಣವಾಗಿ ಬೆಲೆ ಕಡಿತವನ್ನು ಕಾಣಲಿದೆ.
ಬೆಲೆ ಕಡಿತವು ಮಾಡಲ್ ಅವಲಂಬಿಸಿ ಸುಮಾರು 7,700 ರಿಂದ 17,500 ರೂ.ಗಳವರೆಗೆ ಇರುತ್ತದೆ. ಉದಾಹರಣೆಗೆ, ಜನಪ್ರಿಯ ಯಮಹಾ R15 ಬೆಲೆ ಈಗ 2,12,020 ರೂ.ಗಳಿಂದ 17,581 ರೂ.ಗಳ ದರ ಕಡಿತದ ನಂತರ 1,94,439 ರೂ.ಗಳ ಬೆಲೆಯನ್ನು ಹೊಂದಿದೆ. MT-15, FZ-S Fi ಹೈಬ್ರಿಡ್, FZ-X ಹೈಬ್ರಿಡ್, Aerox 155 Version S, Fascino ಮತ್ತು RayZR ನಂತಹ ಇತರ ಮಾದರಿಗಳು ಸಹ ಗಮನಾರ್ಹ ಬೆಲೆ ಕಡಿತವನ್ನು ಪಡೆದುಕೊಂಡಿವೆ.

ಹಬ್ಬದ ಋತುವಿನಲ್ಲಿ ಯಮಹಾದ ಈ ಕ್ರಮವು ಬಂದಿದ್ದು, ದ್ವಿಚಕ್ರ ವಾಹನಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡದೆ. ಬೇಡಿಕೆಯನ್ನು ಹೆಚ್ಚಿಸುವುದು ಮತ್ತು ಉದ್ಯಮದಲ್ಲಿ ಒಟ್ಟಾರೆ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಹೊಸ ಬೆಲೆಗಳು ಮತ್ತು ಹಬ್ಬದ ಕೊಡುಗೆಗಳನ್ನು ಪಡೆಯಲು ಗ್ರಾಹಕರು ಮುಂಚಿತವಾಗಿ ಬುಕ್ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ. ನವರಾತ್ರಿ - ದೀಪಾವಳಿ ಅವಧಿಯಲ್ಲಿ ವಿತರಣೆಗಳು ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ.
ಈ ಕುರಿತು ಮಾತನಾಡಿದ ಯಮಹಾ ಮೋಟಾರ್ ಇಂಡಿಯಾ ಗ್ರೂಪ್‌ನ ಅಧ್ಯಕ್ಷ ಇಟಾರು ಒಟಾನಿ, "ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಸಕಾಲದಲ್ಲಿ ಕಡಿಮೆ ಮಾಡಿದ ಭಾರತ ಸರ್ಕಾರಕ್ಕೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಈ ಕ್ರಮದಿಂದ ಹಬ್ಬದ ಸೀಸನ್‌ನಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ದ್ವಿಚಕ್ರ ವಾಹನಗಳನ್ನು ಹೆಚ್ಚು ಕೈಗೆಟುಕುವ ಬೆಲೆಗೆ ದೊರಕುವಂತೆ ಮಾಡುವ ಮೂಲಕ ಯಮಹಾ ಗ್ರಾಹಕರಿಗೆ ನೇರವಾಗಿ ಲಾಭವನ್ನು ಒದಗಿಸುವುದರ ಜೊತೆಗೆ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಲಿದೆ.

ಯಮಹಾ ಸಂಸ್ಥೆಯು ಈ ಕಡಿತದ ಸಂಪೂರ್ಣ ಲಾಭವನ್ನು ಭಾರತದಾದ್ಯಂತ ನಮ್ಮ ಗ್ರಾಹಕರಿಗೆ ಒದಗಿಸಲು ಸಂತೋಷಪಡುತ್ತದೆ. ಯಮಹಾದ ದ್ವಿಚಕ್ರ ವಾಹನಗಳ ಶ್ರೇಣಿಯಲ್ಲಿ ಸಂಭಾವ್ಯ ಬೆಲೆ ಇಳಿಕೆಯು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ಗ್ರಾಹಕರು ಮುಂಬರುವ ಹಬ್ಬದ ಸೀಸನ್‌ನಲ್ಲಿ ಈ ಲಾಭವನ್ನು ಪಡೆಯಲು ಬೇಗನೇ ಬುಕ್ ಮಾಡಬಹುದು ಎಂದು ಹೇಳಿದರು.
| ಮಾಡಲ್ | ಹಳೆಯ ಬೆಲೆ | ಹೊಸ ಬೆಲೆ | ಬೆಲೆ ಇಳಿಕೆ |
| R15 | 2,12,020 | 1,94,439 | 17,581 |
| MT15 | 1,80,500 | 1,65,536 | 14,964 |
| FZ-S Fi ಹೈಬ್ರಿಡ್ | 1,45,190 | 1,33,159 | 12,031 |
| FZ-X ಹೈಬ್ರಿಡ್ | 1,49,990 | 1,37,560 | 12,430 |
| ಏರಾಕ್ಸ್ 155 ವರ್ಷನ್ S | 1,53,890 | 1,41,137 | 12,753 |
| ರೇಝಡ್‌ಆರ್ | 93,760 | 86,001 | 7,759 |
| ಫ್ಯಾಸಿನೊ | 1,02,790 | 94,281 | 8,509 |

ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುವ ಪ್ರಮುಖ ಮಾದರಿ ಬೆಲೆ ಕಡಿತಗಳನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ: ಯಮಹಾ R15 ಮೇಲೆ ರೂ. 17,581 ಕಡಿತ, MT-15 ಮೇಲೆ ರೂ. 14,964 ಕಡಿತ, FZ-S Fi ಹೈಬ್ರಿಡ್ ಮೇಲೆ ರೂ. 12,031 ಕಡಿತ, FZ-X ಹೈಬ್ರಿಡ್ ಮೇಲೆ ರೂ. 12,430 ಕಡಿತವಾಗಿದೆ.
ಹಾಗೆಯೇ ಯಮಹಾದ ಪ್ರಮುಖ ಸ್ಕೂಟರ್‌ಗಳಾದ ಏರಾಕ್ಸ್ 155 ವರ್ಷನ್ S ಮೇಲೆ ರೂ. 12,753 ಕಡಿತ, ಫ್ಯಾಸಿನೊ ಮೇಲೆ ರೂ. 8,509 ಕಡಿತ, RayZR ಮೇಲೆ ರೂ. 7,759 ಕಡಿತವಾಗಿದೆ. ಯಮಹಾದ ಈ ನಿರ್ಧಾರವು ತೆರಿಗೆ ಕಡಿತಕ್ಕಾಗಿ ಭಾರತ ಸರ್ಕಾರಕ್ಕೆ ಕೃತಜ್ಞತೆಯನ್ನು ಪ್ರತಿಬಿಂಬಿಸುತ್ತದೆ. ಭಾರತದಲ್ಲಿನ ವಿವಿಧ ವಿಭಾಗಗಳ ದ್ವಿಚಕ್ರ ವಾಹನಗಳ ಮಾರಾಟದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications








