ಯಮಹಾ ದೀಪಾವಳಿ ಆಫರ್: ರೂ. 20,000 ವರೆಗೆ ಬೆಲೆ ಇಳಿಕೆ... ಎಲ್ಲಾ ವಿವರ ಇಲ್ಲಿದೆ
ಕರ್ನಾಟಕದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿರುವ ಈ ಸಂದರ್ಭದಲ್ಲಿ ಯಮಹಾ ಕಂಪನಿಯು ತನ್ನ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಈ ಶುಭ ಸಂದರ್ಭದಲ್ಲಿ ಗ್ರಾಹಕರ ಸಂಭ್ರಮ ಹೆಚ್ಚಿಸುವ ನಿಟ್ಟಿನಲ್ಲಿ ಯಮಹಾ ತನ್ನ ಜನಪ್ರಿಯ ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಮೇಲೆ ಜಿಎಸ್‌ಟಿ ಲಾಭಗಳು, ವಿಮೆ ಆಫರ್‌ಗಳು ಮತ್ತು ಕ್ಯಾಶ್ ಬ್ಯಾಕ್ ಒದಗಿಸುವ ಮೂಲಕ ಹಲವಾರು ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಹಾಗಾಗಿ ಯಮಹಾವನ್ನು ಮನೆಗೆ ತೆಗೆದುಕೊಂಡು ಹೋಗಲು ಇದು ಸೂಕ್ತ ಸಮಯವಾಗಿದೆ.
ಯಮಹಾ ದೀಪಾವಳಿ ವಿಶೇಷ ಆಫರ್‌ಗಳು
ಯಮಹಾ R15 V4 ಮೋಟಾರ್‌ಸೈಕಲ್ ಮೇಲೆ ರೂ. 15,734 ವರೆಗೆ ಜಿಎಸ್‌ಟಿ ಇಳಿಕೆ ಮತ್ತು ರೂ. 6,560 ಮೌಲ್ಯದ ವಿಮಾ ಪ್ರಯೋಜನ ನೀಡುಲಾಗುತ್ತಿದೆ. ಮತ್ತೊಂದು ಜನಪ್ರಿಯ ಮೋಟಾರ್‌ಸೈಕಲ್ ಆಗಿರುವ MT-15 ಮೇಲೆ ರೂ. 14,964 ವರೆಗೆ ಜಿಎಸ್‌ಟಿ ಇಳಿಕೆ ಮತ್ತು ರೂ. 6,560 ಮೌಲ್ಯದ ವಿಮಾ ಪ್ರಯೋಜನ ನೀಡಲಾಗುತ್ತಿದೆ ಎಂದು ಯಮಹಾ ತಿಳಿಸಿದೆ.

ಹಾಗೆಯೇ ಯಮಹಾ FZ-S Fi ಹೈಬ್ರಿಡ್ ವಾಹನದ ಮೇಲೆ ರೂ. 12,031 ವರೆಗೆ ಜಿಎಸ್‌ಟಿ ಇಳಿಕೆ ಮತ್ತು ರೂ. 6,501 ಮೌಲ್ಯದ ವಿಮಾ ಪ್ರಯೋಜನ ನೀಡಲಾಗುತ್ತಿದೆ. ಹಾಗೆಯೇ ಯಮಹಾ ಫೆಸಿನೋ 125 ಹೈಬ್ರಿಡ್ ಸ್ಕೂಟರ್ ಮೇಲೆ ರೂ. 8,509 ವರೆಗೆ ಜಿಎಸ್‌ಟಿ ಇಳಿಕೆ ಮತ್ತು ರೂ. 5,401 ಮೌಲ್ಯದ ವಿಮಾ ಪ್ರಯೋಜನ ನೀಡಲಾಗುತ್ತಿದೆ.
ಇನ್ನು ಪ್ರಮುಖ ಯಮಹಾ ರೇಝಡ್ಆರ್ (RayZR) 125 Fi ಸ್ಕೂಟರ್ ಮೇಲೆ ರೂ. 7,759 ವರೆಗೆ ಜಿಎಸ್‌ಟಿ ಲಾಭ ಮತ್ತು ರೂ. 3,799 ವರೆಗೆ ಪ್ರಯೋಜನ ನೀಡಲಾಗುತ್ತಿದೆ ಎಂದು ಯಮಹಾ ಅಧಿಕೃತವಾಗಿ ಘೋಷಿಸಿದೆ. ಈ ಹಬ್ಬಕ್ಕೆ ಭರ್ಜರಿ ಬೆಲೆ ಇಳಿಕೆ ಘೋಷಣೆಯಾಗಿದ್ದು, ಗ್ರಾಹಕರಿಗೆ ಇದು ಯಮಹಾ ವಾಹನಗಳನ್ನು ಖರೀದಿಸಲು ಅತ್ಯುತ್ತಮ ಸಮಯ ಎಂದು ಹೇಳಬಹುದು.

ಯಮಹಾದ ಪ್ರೀಮಿಯಂ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳ ಜೊತೆ ಈ ಸಲದ ದೀಪಾವಳಿ ಹಬ್ಬವನ್ನು ಆಚರಿಸಿ. ಪ್ರತೀ ರೈಡ್‌ನಲ್ಲಿಯೂ ಹೆಚ್ಚು ಹುಮ್ಮಸ್ಸನ್ನು ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲು ಈ ವಾಹನಗಳನ್ನು ವಿನ್ಯಾಸಗೊಳಿಸಲಾಗಿದ್ದು, ತಕ್ಷಣವೇ ನಿಮ್ಮ ಹತ್ತಿರದ ಯಮಹಾ ಡೀಲರ್ ಶಿಪ್ ಗೆ ಭೇಟಿ ನೀಡಿ ಹಬ್ಬದ ಆಫರ್‌ಗಳನ್ನು ಪಡೆದುಕೊಳ್ಳಿ ಎಂದು ಯಮಹಾ ಹೇಳಿದೆ.
ಯಮಹಾ ಪೋರ್ಟ್‌ಫೋಲಿಯೋ: ಯಮಹಾದ ವೈವಿಧ್ಯಮಯ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ YZF-R3 (321cc), MT-03 (321cc), YZF-R15M (155cc), YZF-R15 V4 (155cc), YZF-R15S V3 (155cc), MT-15 V2 (155cc), ಮತ್ತು FZ-S Fi ಹೈಬ್ರಿಡ್ (149cc), FZ-S Fi (149cc), ಮತ್ತು FZ-X (149cc) ನಂತಹ FZ ಸರಣಿಯ ಬೈಕ್‌ಗಳು ಸೇರಿವೆ.

ಹೆಚ್ಚುವರಿಯಾಗಿ, ಯಮಹಾ ಏರೋಕ್ಸ್ 155 ಆವೃತ್ತಿ S (155cc), ಏರೋಕ್ಸ್ 155 (155cc), ಫ್ಯಾಸಿನೊ S 125 Fi ಹೈಬ್ರಿಡ್ (125cc), ಫ್ಯಾಸಿನೊ 125 Fi ಹೈಬ್ರಿಡ್ (125cc), ರೇಝಡ್ಆರ್ 125 Fi ಹೈಬ್ರಿಡ್ (125cc), ಮತ್ತು ರೇಝಡ್ಆರ್ ಸ್ಟ್ರೀಟ್ ರ್ಯಾಲಿ 125 Fi ಹೈಬ್ರಿಡ್ (125cc) ಸೇರಿದಂತೆ ಹಲವಾರು ಸ್ಕೂಟರ್‌ಗಳನ್ನು ನೀಡುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








