ಹೊಸ 'ಯಮಹಾ ಎಫ್‌ಝಡ್‌-ಎಸ್' ಹೈಬ್ರಿಡ್ ಬೈಕ್ ಕುರಿತ ಪ್ರಮುಖಾಂಶಗಳಿವು.. ಯಾರು ಹೇಳಲ್ಲ!

ಜಪಾನ್ ಮೂಲದ ಯಮಹಾ (Yamaha) ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ ನೂತನ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ (FZ-S Fi Hybrid) ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಬಜೆಟ್ ಬೆಲೆಯಲ್ಲಿಯೂ ಸಿಗುತ್ತದೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಎಕ್ಸ್-ಶೋರೂಂ ದರ ಹಾಗೂ ವಿಶೇಷತೆಗಳನ್ನು ಒಳಗೊಂಡಂತೆ ಪ್ರಮುಖಾಂಶಗಳನ್ನು ತಿಳಿಸಿಕೊಟ್ಟಿದ್ದೇವೆ.

ಬೆಲೆ (Price): ಹೊಚ್ಚ ಹೊಸ ಯಮಹಾ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ (Yamaha FZ-S Fi Hybrid) ಬೈಕ್ ಗ್ರಾಹಕರ ಕೈಗೆಟುಕುವಂತಿದ್ದು, ರೂ.1.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಈ 'ಎಫ್‌ಝಡ್‌-ಎಸ್ ಫೈ' 150 ಸಿಸಿ ವಿಭಾಗದಲ್ಲಿ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಟೆಕ್ನಾಲಜಿ ಹೊಂದಿರುವ ದೇಶದ ಮೊದಲ ಮೋಟಾರ್‌ಸೈಕಲ್‌ ಕೂಡ ಆಗಿದೆ.

Yamaha FZ-S Fi Hybrid Bike Top Things You Should Must Know

ವಿನ್ಯಾಸ & ಬಣ್ಣಗಳು (Design & Colors): ಈ ಬೈಕ್ ಅತ್ಯಾಧುನಿಕವಾದ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ. ಹೊಸದಾಗಿರುವ ಹೈಡ್‌ಲೈಟ್, ಬೃಹತ್ ಗಾತ್ರದ ಫ್ಯುಯೆಲ್ ಟ್ಯಾಂಕ್ & ಇಂಟಿಗ್ರೇಟೆಡ್ ಫ್ರಂಟ್ ಟರ್ನ್ ಸಿಗ್ನಲ್‌ಗಳನ್ನು ಹೊಂದಿದೆ. ಇದರೊಟ್ಟಿಗೆ ಉತ್ತಮವಾದ ರೇಸಿಂಗ್ ಬ್ಲೂ & ಸಯಾನ್ ಮೆಟಾಲಿಕ್ ಗ್ರೇ ಎಂಬ ಬಣ್ಣಗಳೊಂದಿಗೂ ಲಭ್ಯವಾಗುತ್ತದೆ.

ಕಾರ್ಯಕ್ಷಮತೆ (Performance): ನೂತನ ಯಮಹಾ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ ಮೋಟಾರ್‌ಸೈಕಲ್‌, ಒಬಿಡಿ-2ಬಿ (OBD-2B) ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಿದ 149 ಸಿಸಿ ಫೋರ್-ಸ್ಟ್ರೋಕ್ ಟೂ-ವಾಲ್ವ್, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್‌ನ್ನು ಪಡೆದಿದೆ. 12.4 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 13.3 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.

Yamaha FZ-S Fi Hybrid Bike Top Things You Should Must Know

ವೈಶಿಷ್ಟ್ಯಗಳು (Features): ಈ ಬೈಕ್ ಫುಲ್-ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಪಡೆದಿದೆ. ಇದು ಬ್ಲೂಟೂತ್ ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ, ಗೂಗಲ್ ಮ್ಯಾಪ್ಸ್, ಕಾಲ್ ಮತ್ತು ಎಸ್‌ಎಂಎಸ್ ಅಲರ್ಟ್‌ನ್ನು ಸಪೋರ್ಟ್ ಮಾಡುತ್ತದೆ. ಹಾಗೆಯೇ ಎಸ್‌ಎಂಜಿ (ಸ್ಮಾರ್ಟ್ ಮೋಟಾರ್ ಜನರೇಟರ್) & ಎಸ್‌ಎಸ್‌ಎಸ್ (ಸ್ಟಾಪ್ & ಸ್ಟಾರ್ಟ್ ಸಿಸ್ಟಮ್) ಟೆಕ್ನಾಲಜಿಯನ್ನು ಒಳಗೊಂಡಿದೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಹೊಸ ಯಮಹಾ ಎಫ್‌ಝಡ್‌-ಎಸ್ ಫೈ ಹೈಬ್ರಿಡ್ ಮೋಟಾರ್‌ಸೈಕಲ್‌, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಇನ್ನು, ಈ ಬೈಕ್ 138 ಕೆಜಿ ತೂಕವಿದ್ದು, 13 ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್ ಟೆಕ್ನಾಲಜಿ ಹೊಂದಿರುವುದರಿಂದ ಕಾರ್ಯಕ್ಷಮತೆಯೂ ಸುಧಾರಿಸಿದ್ದು, ಹೆಚ್ಚಿನ ಮೈಲೇಜ್ ನೀಡಲು ಕೂಡ ಸಹಕಾರಿಯಾಗಿದೆ. ಸರಿ ಸುಮಾರು 71 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ನೂತನ ಮೋಟಾರ್‌ಸೈಕಲ್‌ ಅತ್ಯುತ್ತಮವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ಹಿನ್ನೆಲೆ, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರ ಆಯ್ಕೆಯ ವಾಹನವಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 13, 2025, 8:30 [IST]
English summary
Yamaha fz s fi hybrid bike top things you should must know
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+