Yamaha: ಯಮಹಾ ಸಾಧಿಸಿಬಿಟ್ಟಿದೆ: ಹೈಬ್ರಿಡ್ ಬೈಕ್ ಅನಾವರಣ... ಬ್ರಾಂಡ್‌ಗಳಿಗೆ ನಡುಕ ಶುರು!

ಹೈಬ್ರಿಡ್ ತಂತ್ರಜ್ಞಾನವನ್ನು ಬಹಳ ಧೀರ್ಘ ಕಾಲದಿಂದ ಕಾರುಗಳಲ್ಲಿ ಬಳಸಲಾಗುತ್ತಿದೆ, ಆದರೆ ಹೈಬ್ರಿಡ್ ಸಿಸ್ಟಮ್ ಗಾತ್ರ ಮತ್ತು ಸಂಕೀರ್ಣತೆಯು ದ್ವಿಚಕ್ರ ವಾಹನ ತಯಾರಕ ಕಂಪನಿಗಳನ್ನು ಬೈಕುಗಳಲ್ಲಿ ಬಳಸದಂತೆ ತಡೆಯುತ್ತಿದೆ. ಇದೀಗ ಇವೆಲ್ಲವನ್ನು ಹಿಂದಿಕ್ಕಿ ಯಮಹಾ (Yamaha) ಕಂಪನಿಯು ತನ್ನ ಹೊಸ ಎಂಟಿ-09 ಹೈಬ್ರಿಡ್ ಬೈಕನ್ನು ಅನಾವರಣಗೊಳಿಸಿದೆ. ಈ ಬೈಕ್ ಯಮಹಾದ ಹೊಸ SPH EV (ಸೀರಿಸ್-ಪ್ಯಾರಲಲ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್) ಸಿಸ್ಟಂ ಅನ್ನು ಒಳಗೊಂಡಿದೆ. ಇದು ಎಲೆಕ್ಟ್ರಿಕ್ ವಾಹನಗಳು ನೀಡುವ ಇಂಗಾಲದ ತಟಸ್ಥತೆಯೊಂದಿಗೆ ಐಸಿಇ ವಾಹನಗಳ ಭಾವನೆಯನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ.

ಯಮಹಾ ಎಂಟಿ-09 ಹೈಬ್ರಿಡ್ ಬೈಕ್ ಅನ್ನು ಸಾರ್ವಜನಿಕರಿಗೆ ಯಾವಾಗ ಮಾರಾಟ ಮಾಡಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಮೂಲಮಾದರಿಯು ಉತ್ತಮವಾಗಿ ಪೂರ್ಣಗೊಂಡಿದೆ ಎಂಬ ಅಂಶವನ್ನು ಪರಿಗಣಿಸಿ ಮತ್ತು ಯಮಹಾ ಕಂಪನಿಯು ಪರೀಕ್ಷಾರ್ಥ ಚಾಲನೆಗೆ ಒಳಗಾಗುತ್ತಿರುವ ಬೈಕಿನ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ಬೈಕಿನ ಬಗ್ಗೆ ಮುಂದಿನ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.

yamaha-unveiled-mt-09-hybrid-prototype-motorcycle

ಯಮಹಾದ SPH EV ಸಿಸ್ಟಮ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ಸ್ಕೂಟರ್ ಮೂಲಮಾದರಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಈಗ ಇದನ್ನು ಬೈಕಿನಲ್ಲಿ ಬಳಸುವ ಮೂಲಕ, ಕಂಪನಿಯು ತನ್ನ ಹೈಬ್ರಿಡ್ ವ್ಯವಸ್ಥೆಯ ಪ್ರಯೋಜನಗಳನ್ನು ಪರ್ಫಾಮೆನ್ಸ್ ಮೋಟಾರ್ಸೈಕಲ್ ‌ನಲ್ಲಿಯೂ ಪಡೆಯಬಹುದು ಎಂದು ತೋರಿಸಲು ಸಜ್ಜಾಗಿದೆ.

ಇದರ ಎಂಜಿನ್ ಹಾಗೂ ಮೋಟಾರು ಡಿಸೈನ್‌ಗೆ ಸಂಬಂಧಿಸಿದಂತೆ, ಎಂಜಿನ್ ಮೇಲ್ಭಾಗದಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ. ಕಡಿಮೆ ವೇಗದಲ್ಲಿ ಯಮಹಾ ಎಂಟಿ -09 ಹೈಬ್ರಿಡ್ ಇವಿಯಂತೆ ಚಲಿಸುತ್ತದೆ. ಕೇವಲ ಮೋಟರ್ ಚಾರ್ಜ್ ತೆಗೆದುಕೊಳ್ಳುತ್ತದೆ. ವೇಗ ಹೆಚ್ಚಾದಂತೆ ಐಸಿಇ ಎಂಜಿನ್ ಅನ್ನು ಸೇರಿಕೊಂಡು ಮೋಟಾರ್‌ಸೈಕಲ್ ಹೆಚ್ಚಿನ ವೇಗದಲ್ಲಿ ಓಡುತ್ತದೆ.

yamaha-unveiled-mt-09-hybrid-prototype-motorcycle

ಎಲೆಕ್ಟ್ರಿಕ್ ನಿಂದ ಹೈಬ್ರಿಡ್‌ ಬದಲಾವಣೆ ಸ್ವಯಂಚಾಲಿತವಾಗಿ ನಡೆಯುತ್ತದೆ. ಇದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಡೆರಹಿತ ಟಾರ್ಕ್ ಸಮೃದ್ಧ ರೈಡಿಂಗ್ ಅನುಭವವನ್ನು ಐಸಿಇ ಎಂಜಿನ್ ಸಾಮಾನ್ಯವಾಗಿ ನೀಡುವ ಅನುಭವ ಮತ್ತು ವೇಗದೊಂದಿಗೆ ಸಂಯೋಜಿಸುತ್ತದೆ. ಒಟ್ಟಾರೆ ಕಾರುಗಳಲ್ಲಿ ಬಳಕೆಯಾಗುವ ಅದೇ ಸಿಸ್ಟಮ್ ಇಲ್ಲಿಯೂ ಕೆಲಸ ಮಾಡುತ್ತದೆ ಎಂದು ಹೇಳಬಹುದು.

ಮುಂಬರಲಿರುವ ಯಮಹಾ ಎಂಟಿ -09 ಹೈಬ್ರಿಡ್ ಮೋಟಾರ್‌ಸೈಕಲ್ ವಿನ್ಯಾಸದ ಬಗ್ಗೆ ಹೇಳುವುದಾದ್ರೆ, ನಿಲುವು ಅದರ ಇಂಧನ ಚಾಲಿತ ಬೈಕ್‌ನಂತೆಯೇ ಇರುತ್ತದೆ. ಆದರೆ ಇದು ಹೈಬ್ರಿಡ್ ಬೈಕ್ ಎಂದು ತಿಳಿಯಲು ಅವುಗಳನ್ನು ಪ್ರತ್ಯೇಕಿಸಲು ಕೆಲವು ಸ್ಪಷ್ಟ ವ್ಯತ್ಯಾಸಗಳನ್ನು ನೀಡಲಾಗಿದೆ. ಈ ಕೆಳಗಿನ ಅಂಶಗಳು ಹೈಬ್ರಿಡ್ ಹಾಗೂ ಐಸಿಇ ಮಾದರಿಗಳ ನಡುವಿನ ವ್ಯತ್ಯಾಸಗಳಾಗಿವೆ.

yamaha-unveiled-mt-09-hybrid-prototype-motorcycle

ಹೈಬ್ರಿಡ್ ಬೈಕ್‌ನ ಮುಂಭಾಗದ ಡಿಸೈನ್ ಹೆಚ್ಚು ಆಮೂಲಾಗ್ರ ಮತ್ತು ಫ್ಯೂಚರಿಸ್ಟಿಕ್ ಆಗಿ ಕಾಣುತ್ತದೆ. ಇದು ಫ್ಯೂಯಲ್ ಟ್ಯಾಂಕ್ ಮೇಲೆ ದೊಡ್ಡ ಹೀಟ್ ಸಿಂಕ್ ಅನ್ನು ಪಡೆಯುತ್ತದೆ. ಜೊತೆಗೆ ಮುಖ್ಯ ಟಿಎಫ್‌ಟಿ ಡ್ಯಾಶ್‌ನೊಂದಿಗೆ ಹೆಚ್ಚುವರಿ, ಸಣ್ಣ ಎಲ್‌ಸಿಡಿಯನ್ನು ಸಹ ಪಡೆಯುತ್ತದೆ. ಜೊತೆಗೆ, ಇಂಧನ ಟ್ಯಾಂಕ್ ಅಡಿಯಲ್ಲಿ ದೊಡ್ಡ ಏರ್‌ ಇನ್‌ಟೇಕ್ ತರಹದ ಪ್ಯಾನಲ್‌ಗಳನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 24, 2025, 10:15 [IST]
English summary
Yamaha unveiled mt 09 hybrid prototype motorcycle
Read more on yamaha india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+