ಈ ಬೈಕ್‌ಗಳನ್ನು ಕಂಡ್ರೆ ಯೂತ್ಸ್ ಐ ಲೈಕ್ ಇಟ್ ಎನ್ನುವರು.. ಬೆಲೆಯೂ ಜಾಸ್ತಿಯಿಲ್ಲ, ಲಕ್ಷುರಿ ಫೀಚರ್ಸ್!
ಯುವ ಜನತೆಗೆ ಬೈಕ್‌ಗಳ ಮೇಲೆ ವಿಶೇಷವಾದ ಪ್ರೀತಿ ಇರುತ್ತದೆ. ಆದರೆ, ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಕೊಳ್ಳುವಷ್ಟು ಹಣವಿರುವುದಿಲ್ಲ. ಹೀಗಾಗಿ, ಬಹುತೇಕ ಯುವಕರು ಬಜಾಜ್ ಪಲ್ಸರ್, ಟಿವಿಎಸ್ ಅಪಾಚೆ ಹಾಗೂ ಹೀರೋ ಎಕ್ಸ್‌ಪಲ್ಸ್ ಬೈಕ್‌ಗಳ ಮೊರೆ ಹೋಗುತ್ತಾರೆ. ಇವು ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದ್ದು, ಅದಕ್ಕೆ ತಕ್ಕಂತೆ ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸ ಮತ್ತು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿವೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
ಬಜಾಜ್ ಪಲ್ಸರ್ (Bajaj Pulsar):
ಇದು ಯುವಕರ ನೆಚ್ಚಿನ ಬೈಕ್ ಆಗಿದ್ದು, ದಶಕಗಳಿಂದ ಮನೆ ಮಾತಾಗಿದೆ. ಆಕರ್ಷಕವಾದ ನೋಟವನ್ನು ಹೊಂದಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಕೂಡ ಸಿಗುತ್ತದೆ. ಕನಿಷ್ಠ ರೂ.85,549 ಹಾಗೂ ಗರಿಷ್ಠ ರೂ.1.92 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಪಲ್ಸರ್ 125 ಪಲ್ಸರ್ ಎನ್125, ಪಲ್ಸರ್ 150, ಪಲ್ಸರ್ ಎನ್160, ಪಲ್ಸರ್ ಎನ್ಎಸ್200 ಹಾಗೂ ಪಲ್ಸರ್ ಎನ್ಎಸ್400ಜಡ್ ಸೇರಿದಂತೆ ವಿವಿಧ ರೂಪದಲ್ಲೂ ಗ್ರಾಹಕರ ಖರೀದಿಗೆ ಲಭ್ಯವಿದೆ.

ಈ ಪಲ್ಸರ್ 124.4 ಸಿಸಿಯಿಂದ 373.27 ಸಿಸಿ ಸಾಮರ್ಥ್ಯವಿರುವ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 51 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. ಡಿಜಿಟಲ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಟಿವಿಎಸ್ ಅಪಾಚೆ (Tvs Apache):
ಇದೊಂದು ಪ್ರಖ್ಯಾತ ಮೋಟಾರ್‌ಸೈಕಲ್ ಆಗಿದ್ದು, ಯುವ ಜನತೆ ಮುಗಿಬಿದ್ದು ಖರೀದಿ ಮಾಡುತ್ತಾರೆ. ಬಜೆಟ್ ಬೆಲೆಯಲ್ಲಿಯೂ ಸಿಗಲಿದ್ದು, ರೂ. 1.25 ಲಕ್ಷದಿಂದ ರೂ.2.72 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅಪಾಚೆ ಆರ್‌ಟಿಆರ್ 160, ಅಪಾಚೆ ಆರ್‌ಆರ್ 310, ಅಪಾಚೆ ಆರ್‌ಟಿಆರ್ 160 4ವಿ, ಅಪಾಚೆ ಆರ್‌ಟಿಆರ್ 200 4ವಿ ಮತ್ತು ಅಪಾಚೆ ಆರ್‌ಟಿಆರ್ 180 ಒಳಗೊಂಡಂತೆ ಹಲವು ವಿಧದಲ್ಲೂ ಸಿಗುತ್ತದೆ.

ನೂತನ ಅಪಾಚೆ ಬೈಕ್ 159.7 ಸಿಸಿಯಿಂದ 312.2 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 33 ರಿಂದ 50 ಕಿ.ಮೀ ವರೆಗೆ ಮೈಲೇಜ್ ಕೊಡಬಲ್ಲದು. ಡಿಜಿಟಲ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಟಿವಿಎಸ್ ಸ್ಮಾರ್ಟ್ ಕನೆಕ್ಟ್ ಅಪ್ಲಿಕೇಶನ್ ಹಾಗೂ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಹೀರೋ ಎಕ್ಸ್‌ಪಲ್ಸ್ (Hero Xpulse):
ಈ ಬೈಕ್‌ನ್ನು ಯುವಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಇದು ಆಫ್-ರೋಡ್ ಚಾಲನೆಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ಕಡಿಮೆ ದರದಲ್ಲೂ ಲಭ್ಯವಿದೆ. ಕನಿಷ್ಠ ರೂ.1.52 ಲಕ್ಷ ಹಾಗೂ ಗರಿಷ್ಠ ರೂ.1.86 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಎಕ್ಸ್‌ಪಲ್ಸ್ 210 ಹಾಗೂ ಎಕ್ಸ್‌ಪಲ್ಸ್ 200 4ವಿ ರೂಪದಲ್ಲೂ ದೊರೆಯುತ್ತದೆ.

ಹೊಸ ಎಕ್ಸ್‌ಪಲ್ಸ್ ಮೋಟಾರ್‌ಸೈಕಲ್ ಎರಡು ವಿಧದಲ್ಲಿ ಸಿಗುವುದರಿಂದ 199.6 ಸಿಸಿ & 210 ಸಿಸಿ ಸಾಮರ್ಥ್ಯವಿರುವ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 36 ರಿಂದ 40 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. ಡಿಜಿಟಲ್ ಎಲ್‌ಸಿಡಿ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನಾವಿಗೇಷನ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಒಟ್ಟಾರೆಯಾಗಿ ಬಜಾಜ್ ಪಲ್ಸರ್, ಟಿವಿಎಸ್ ಅಪಾಚೆ ಹಾಗೂ ಹೀರೋ ಎಕ್ಸ್‌ಪಲ್ಸ್ ಬೈಕ್‌ಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಜೊತೆಗೆ ಪ್ರೀಮಿಯಂ ಮೋಟಾರ್‌ಸೈಕಲ್‌ಗಳು ಸವಾಲೆಸೆಯುವ ರೀತಿಯಲಿದ್ದು, ತುಂಬಾ ಚೆನ್ನಾಗಿರುವ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಇದರಿಂದಾಗಿಯೇ ಪ್ರತಿ ತಿಂಗಳು ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿತ್ತು. ಗ್ರಾಹಕರು ಕೂಡ ಮೆಚ್ಚಿಕೊಂಡಿದ್ದಾರೆ.


Click it and Unblock the Notifications