ZELIO E: 1 ರೂ. ಖರ್ಚಿಲ್ಲದೆ 130 ಕಿ.ಮೀ ಓಡುವ ಸ್ಕೂಟರ್ ಬಿಡುಗಡೆ: ಕೇವಲ 54,000 ಬೆಲೆ

ಫೇಸ್‌ಲಿಫ್ಟೆಡ್ ಝೀಲಿಯೊ ಇ ಗ್ರೇಸಿ ಪ್ಲಸ್ ಲೋ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ನಗರ ಪ್ರಯಾಣಿಕರಿಗೆ ಹಲವಾರು ನವೀಕರಣಗಳನ್ನು ಪ್ರಸ್ತುತಪಡಿಸಲಾಗಿದೆ. ಈ ಸ್ಕೂಟರ್ ವೈಟ್, ಗ್ರೇ, ಬ್ಲಾಕ್ ಮತ್ತು ಬ್ಲೂನಂತಹ ನಾಲ್ಕು ಬಣ್ಣಗಳಲ್ಲಿ ಬರುತ್ತದೆ. ಆರಂಭಿಕ ಬೆಲೆ ರೂ. 54,000 (ಎಕ್ಸ್-ಶೋರೂಂ) ಇದ್ದು, ವಿದ್ಯಾರ್ಥಿಗಳು, ಕೆಲಸ ಮಾಡುವ ವೃತ್ತಿಪರರು ಮತ್ತು ಸಣ್ಣ ಕೆಲಸಗಾರರಿಗೆ ಸೂಕ್ತವಾದ ಆಯ್ಕೆಯಾಗಿದೆ. ನಗರಗಳಲ್ಲಿ ಓಡಿಸುವವರಿಗೆ ಸೂಕ್ತವಾದ ಆಧುನಿಕ ವಿನ್ಯಾಸವನ್ನು ನೀಡುತ್ತದೆ.

ಹೊಸ Gracy+ ವೈವಿಧ್ಯಮಯ ನಗರ ಪ್ರಯಾಣದ ಆದ್ಯತೆಗಳನ್ನು ಪೂರೈಸಲು ಆರು ಬ್ಯಾಟರಿ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಹಾಗೂ ಜೆಲ್ ಬ್ಯಾಟರಿ ಆಯ್ಕೆಗಳನ್ನು ಸಹ ನೀಡಲಾಗಿದೆ. ಜೆಲ್ ಬ್ಯಾಟರಿ ರೂಪಾಂತರಗಳಾದ 60V/32AH ಬೆಲೆಯು ರೂ. 54,000 ಇದ್ದು, 80 ಕಿ.ಮೀ ರೇಂಜ್ ನೀಡುತ್ತದೆ. 60V/42AH ಬೆಲೆಯು ರೂ. 58,000 ವಿದ್ದು, 100 ಕಿ.ಮೀ ರೇಂಜ್ ಹೊಂದಿದೆ.

zelio-e-gracy-plus-electric-scooter-top-things

ಮತ್ತೆರಡು ಜೆಲ್ ಬ್ಯಾಟರಿ ರೂಪಾಂತರಗಳಾದ 72V/32AH ಬೆಲೆಯು ರೂ. 56,500 ಇದ್ದು, 100 ಕಿ.ಮೀ ಓಡಬಲ್ಲದು. 72V/42AH ಬೆಲೆಯು ರೂ. 61,000 ಇದ್ದು 130 ಕಿ.ಮೀ ರೇಂಜ್ ನೀಡುತ್ತದೆ. ಇನ್ನು ಲಿಥಿಯಂ-ಐಯಾನ್ ಬ್ಯಾಟರಿ ವೇರಿಯೆಂಟ್‌ಗಳಾದ 60V/30AH ಬೆಲೆಯು 65,000 ರೂ. ಇದ್ದು, ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 110 ಕಿ.ಮೀ ಓಡಿಸಬಹುದು. ಹಾಗೆಯೇ 74V/32AH ಬೆಲೆಯು ರೂ. 69,500 ಇದ್ದು 130 ಕಿ.ಮೀ ಓಡಬಲ್ಲದು.

ಹೊಸ ಫೇಸ್‌ಲಿಫ್ಟೆಡ್ ಗ್ರೇಸಿ+ ಸ್ಕೂಟರ್ ಪೂರ್ಣ ಚಾರ್ಜ್‌ಗೆ ಕೇವಲ 1.8 ಯೂನಿಟ್ ವಿದ್ಯುತ್ ಅನ್ನು ಬಳಸುವ ಉನ್ನತ-ಕಾರ್ಯಕ್ಷಮತೆಯ 60/72V BLDC ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಒಂದೇ ಚಾರ್ಜ್‌ನಲ್ಲಿ 130 ಕಿಲೋಮೀಟರ್‌ಗಳವರೆಗೆ ವಿಸ್ತೃತ ರೇಂಜ್ ನೀಡುತ್ತದೆ. ಗಂಟೆಗೆ 25 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ.

ವಾಹನದ ಮೇಲೆ 2 ವರ್ಷಗಳ ವಾರೆಂಟಿ, ಲಿಥಿಯಂ - ಐಯಾನ್ ಬ್ಯಾಟರಿ ರೂಪಾಂತರಗಳ ಮೇಲೆ 3 ವರ್ಷಗಳ ವಾರೆಂಟಿ ಮತ್ತು ಜೆಲ್ ಬ್ಯಾಟರಿ ರೂಪಾಂತರಗಳ ಮೇಲೆ 1 ವರ್ಷದ ವಾರೆಂಟಿ ಒದಗಿಸುತ್ತದೆ. ಚಾರ್ಜಿಂಗ್ ಸಮಯವು ಬ್ಯಾಟರಿ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ಲಿಥಿಯಂ-ಐಯಾನ್ ರೂಪಾಂತರಗಳು 4 ಗಂಟೆಗಳಲ್ಲಿ ಚಾರ್ಜ್ ಆಗುತ್ತವೆ. ಜೆಲ್ ಬ್ಯಾಟರಿ ಮಾದರಿಗಳು 8 ರಿಂದ 12 ಗಂಟೆಗಳಲ್ಲಿ ಚಾರ್ಜ್ ಆಗುತ್ತವೆ.

ಈ ಸ್ಕೂಟರ್ ಡಿಜಿಟಲ್ ಡಿಸ್ಪ್ಲೇ, ಪಾರ್ಕಿಂಗ್ ಗೇರ್, USB ಚಾರ್ಜಿಂಗ್ ಪೋರ್ಟ್ ಮತ್ತು ಪ್ರಯಾಣಿಕರ ಫುಟ್‌ರೆಸ್ಟ್, ಡೇಟೈಮ್ ರನ್ನಿಂಗ್ ಲೈಟ್‌ಗಳು (DRL), ಕೀಲೆಸ್ ಡ್ರೈವ್, ಆಂಟಿ-ಥೆಫ್ಟ್ ಅಲಾರ್ಮ್ ಸೇರಿದಂತೆ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ. ವೈಟ್, ಗ್ರೇ, ಬ್ಲಾಕ್ ಮತ್ತು ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‌ಗಳೊಂದಿಗೆ ಸಂಯೋಜಿಸಲ್ಪಟ್ಟ ಈ ಸೆಟಪ್ ವಿವಿಧ ನಗರ ರಸ್ತೆ ಪರಿಸ್ಥಿತಿಗಳಲ್ಲಿ ವರ್ಧಿತ ಸ್ಥಿರತೆ ಮತ್ತು ಸೌಕರ್ಯವನ್ನು ಒದಗಿಸುತ್ತದೆ. ಫೇಸ್‌ಲಿಫ್ಟೆಡ್ ಗ್ರೇಸಿ+ ಮುಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದು, 90-90/12 ಮುಂಭಾಗ ಮತ್ತು 90-100/10 ಹಿಂಭಾಗದ ಟೈರ್‌ಗಳನ್ನು ಅಳವಡಿಸಲಾಗಿದೆ.

ಈ ಸ್ಕೂಟರ್ ಈಗ 180mm ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, 88kg ಒಟ್ಟು ತೂಕ ಮತ್ತು 150 ಕೆ.ಜಿ ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. 2,00,000 ಕ್ಕೂ ಹೆಚ್ಚು ಸವಾರರು ಮತ್ತು 400 ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಮೀರಿದ ಡೀಲರ್‌ಶಿಪ್ ಜಾಲವನ್ನು ಹೊಂದಿರುವ ಕಂಪನಿಯು, 2025 ರ ಅಂತ್ಯದ ವೇಳೆಗೆ 1,000 ಡೀಲರ್‌ಶಿಪ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ.

More from DriveSpark

Article Published On: Tuesday, July 22, 2025, 16:16 [IST]
English summary
Zelio e gracy plus electric scooter top things
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+