ZELIO: ಹೊಸ ಸ್ಕೂಟರ್ ಬಿಡುಗಡೆಗೆ ಸಜ್ಜು: 150 ಕೆ.ಜಿ ಹೊರುವ ಸಾಮರ್ಥ್ಯ, 120 ಕಿ.ಮೀ ರೇಂಜ್!
ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ ಜೀಲಿಯೋ ಇ (ZELIO E) ಮೊಬಿಲಿಟಿ, ಜುಲೈ 2025 ರಲ್ಲಿ ತನ್ನ ಕಡಿಮೆ-ವೇಗದ ಕಾರ್ಗೋ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಲೋಜಿಕ್ಸ್ (Logix)ನ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸಣ್ಣ ಕೆಲಸಗಾರರು, ಡೆಲಿವರಿ ಬಾಯ್ಸ್ ಮತ್ತು ಸಣ್ಣ ವ್ಯಾಪಾರ ಮಾಲೀಕರಿಗಾಗಿ ನಿರ್ಮಿಸಲಾದ ಹೊಸ Logix, ಉತ್ತಮ ಪರ್ಫಾಮೆನ್ಸ್, ಹೆಚ್ಚಿನ ರೇಂಜ್ ಮತ್ತು ವರ್ಧಿತ ವಿಶ್ವಾಸಾರ್ಹತೆಯ ಮೂಲಕ ಭಾರತದ ನಗರ ಮತ್ತು ಅರೆ-ನಗರ ಮಾರುಕಟ್ಟೆಗಳಲ್ಲಿ ಕೊನೆಯ ಮೈಲಿ ಲಾಜಿಸ್ಟಿಕ್ಸ್‌ಗೆ ಬೆಸ್ಟ್ ಆಯ್ಕೆಯಾಗಲಿದೆ ಎಂದು ಕಂಪನಿ ಹೇಳಿದೆ.
ಮುಂಬರಲಿರುವ ಫೇಸ್‌ಲಿಫ್ಟೆಡ್ ಲೋಜಿಕ್ಸ್ ಇವಿ ಸ್ಕೂಟರ್ ಬಲವಾದ ಮತ್ತು ಹೆಚ್ಚು ಪ್ರಾಯೋಗಿಕ ಉಪಸ್ಥಿತಿಗಾಗಿ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್‌ನೊಂದಿಗೆ ಪಾದಾರ್ಪಣೆ ಮಾಡಲಿದೆ. ಗ್ರೇ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ದಕ್ಷ 60/72V BLDC ಮೋಟಾರ್‌ನಿಂದ ನಡೆಸಲ್ಪಡುವ ಈ ಸ್ಕೂಟರ್, 25 ಕಿ.ಮೀ ಗರಿಷ್ಠ ವೇಗ ಮತ್ತು ಪ್ರತಿ ಚಾರ್ಜ್‌ಗೆ 120 ಕಿಮೀ ರೇಂಜ್ ನೀಡಲಿದೆ.

ಸದ್ಯ ಮಾರಾಟದಲ್ಲಿರುವ ಹಳೆಯ ಲೋಜಿಕ್ಸ್ ಮಾದರಿಯು ಸಿಂಗಲ್ ಚಾರ್ಜ್‌ನಲ್ಲಿ 90 ಕಿಮೀ ರೇಂಜ್ ನೀಡುತ್ತದೆ. ಇದು ಪೂರ್ಣ ಚಾರ್ಜ್‌ಗೆ ಕೇವಲ 1.5 ಯೂನಿಟ್ ವಿದ್ಯುತ್ ಬಳಸುತ್ತದೆ, 150 ಕೆ.ಜಿ ಭಾರ ಹೊರುವ ಸಾಮರ್ಥ್ಯದೊಂದಿಗೆ ಸ್ಕೂಟರ್ ಹೆಚ್ಚಿನ ಪ್ರಮಾಣದ ಡೆಲಿವರಿ ಅಗತ್ಯಗಳಿಗೆ ದೃಢವಾದ ಮತ್ತು ವೆಚ್ಚ - ಪರಿಣಾಮಕಾರಿ ಆಯ್ಕೆಯಾಗಿದೆ.
ಹೊಸ ಮುಂಬರಲಿರುವ ಕಡಿಮೆ-ವೇಗದ ಕಾರ್ಗೋ ಲೋಜಿಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ZELIO E ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕುನಾಲ್ ಆರ್ಯ, "ಭಾರತದ ಡೆಲಿವರಿ ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್‌ನ್ನು ಬೆಂಬಲಿಸಲು ಮತ್ತು ಸಬಲೀಕರಣಗೊಳಿಸಲು ನಮ್ಮ ಕೇಂದ್ರೀಕೃತ ಪ್ರಯತ್ನವನ್ನು 'ಲೋಜಿಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಪ್ರತಿನಿಧಿಸುತ್ತದೆ.
ಸುಧಾರಿತ ರೇಂಜ್, ದೃಢವಾದ ವಿನ್ಯಾಸ ಮತ್ತು ನಿರಂತರ ಕಾರ್ಯಾಚರಣೆಯ ದಕ್ಷತೆಯೊಂದಿಗೆ ಈ ಸ್ಕೂಟರ್ ತಮ್ಮ ಆರ್ಥಿಕತೆಯನ್ನು ಮುನ್ನಡೆಸುವವರಿಗಾಗಿ ನಿರ್ಮಿಸಲಾಗಿದೆ. ನಾವು Logix ಅನ್ನು ಕೇವಲ ವಾಹನವಾಗಿ ನೋಡುವುದಿಲ್ಲ, ಅದರ ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಇಂದಿನ ಶ್ರಮಶೀಲ ವೃತ್ತಿಪರರಿಗೆ ಪ್ರಗತಿಯನ್ನು ಹೆಚ್ಚಿಸುವ ವಿಶ್ವಾಸಾರ್ಹ ಪಾಲುದಾರನಾಗಿ ನೋಡುತ್ತೇವೆ" ಎಂದರು.
ಪ್ರಾರಂಭದಿಂದಲೂ, ZELIO E ಮೊಬಿಲಿಟಿ ಭಾರತದ ವಿದ್ಯುತ್ ದ್ವಿಚಕ್ರ ವಾಹನ ವಿಭಾಗದಲ್ಲಿ ಅಸಾಧಾರಣ ಶಕ್ತಿಯಾಗಿ ಹೊರಹೊಮ್ಮಿದೆ. 2,00,000 ಕ್ಕೂ ಹೆಚ್ಚು ತೃಪ್ತ ಸವಾರರು ಮತ್ತು 400 ಕ್ಕೂ ಹೆಚ್ಚು ಸ್ಥಳಗಳಲ್ಲಿ ವ್ಯಾಪಿಸಿರುವ ಡೀಲರ್‌ಶಿಪ್ ಜಾಲದೊಂದಿಗೆ, ಕಂಪನಿಯು 2025 ರ ಅಂತ್ಯದ ವೇಳೆಗೆ 1,000 ಡೀಲರ್‌ಶಿಪ್‌ಗಳ ಮಹತ್ವಾಕಾಂಕ್ಷೆಯ ಗುರಿಯತ್ತ ಸಕ್ರಿಯವಾಗಿ ಮುಂದುವರಿಯುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಜೀಲಿಯೋ ಬಗ್ಗೆ: ZELIO E ಮೊಬಿಲಿಟಿ ಲಿಮಿಟೆಡ್, 2021 ರಲ್ಲಿ ಸ್ಥಾಪನೆಯಾದ ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾಗಿದೆ. ಇದು ವಿವಿಧ ರೋಮಾಂಚಕ ಬಣ್ಣಗಳಲ್ಲಿ ಲಭ್ಯವಿರುವ ಗಟ್ಟಿಮುಟ್ಟಾದ ಮತ್ತು ಆರಾಮದಾಯಕವಾದ ಇ-ಸ್ಕೂಟರ್‌ಗಳನ್ನು ನೀಡುತ್ತಿದೆ. ಪವರ್‌ಫುಲ್ ವೈಶಿಷ್ಟ್ಯಗಳು ಮತ್ತು ಅತ್ಯುತ್ತಮ ಮೈಲೇಜ್‌ಗೆ ಹೆಸರುವಾಸಿಯಾಗಿದೆ.
ದೇಶಾದ್ಯಂತ 100 ಕ್ಕೂ ಹೆಚ್ಚು ಡೀಲರ್‌ಗಳನ್ನು ಹೊಂದಿರುವ ಈ ಕಂಪನಿಯು, ತನ್ನ ಉತ್ಪನ್ನಗಳ ಮೂಲಕ ತಂತ್ರಜ್ಞಾನ ಮತ್ತು ಬಳಕೆದಾರ ಅನುಭವದ ವಿಷಯದಲ್ಲಿ ಮುಂಚೂಣಿಯಲ್ಲಿದೆ. ZELIO E-ಮೊಬಿಲಿಟಿ ವಿಶ್ವಾಸಾರ್ಹ ಗ್ರಾಹಕ ಸೇವೆಯಿಂದ ಬೆಂಬಲಿತವಾದ ನಿರ್ವಹಿಸಲು ಸುಲಭವಾದ, ಪರಿಸರ ಸ್ನೇಹಿ ವಾಹನಗಳನ್ನು ಒದಗಿಸಲು ಬದ್ಧವಾಗಿದೆ ಎಂದು ಹೇಳಿಕೊಂಡಿದೆ.


Click it and Unblock the Notifications








