ಮೊನ್ನೆಯಷ್ಟೆ ಬಿಡುಗಡೆ: ಕೇವಲ 54 ಸಾವಿರ ಬೆಲೆ: ಖರ್ಚಿಲ್ಲದೆ 140 ಕಿ.ಮೀ ಓಡುವ ಸ್ಕೂಟರ್
ಝೀಲಿಯೊ ಇ (ZELIO E) ಮೊಬಿಲಿಟಿ ಭಾರತದಲ್ಲಿ ಮುಂದಿನ ಪೀಳಿಗೆಯ ಗ್ರೇಸಿ (Gracyi) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಇದು ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಬೆಲೆಯು ರೂ. 54,000 (ಎಕ್ಸ್ - ಶೋರೂಂ) ದಿಂದ ರೂ. 66,000 (ಎಕ್ಸ್ - ಶೋರೂಂ) ವರಗೆ ಇದೆ. ಭಾರತದಲ್ಲಿ ಬೆಳೆಯುತ್ತಿರುವ ಇವಿ ಮಾರುಕಟ್ಟೆಯಲ್ಲಿ, ಸಮತೋಲನ ಶ್ರೇಣಿ, ಕೈಗೆಟುಕುವ ಬೆಲೆ, ಸುರಕ್ಷತೆ ಮತ್ತು ದೈನಂದಿನ ನಗರ ಸವಾರಿಗಳಿಗೆ ಆಧುನಿಕ ವೈಶಿಷ್ಟ್ಯಗಳಲ್ಲಿ ಬಲವಾದ ಎಲೆಕ್ಟ್ರಿಕ್ ಸ್ಕೂಟರ್ ಆಯ್ಕೆಯಾಗಿದೆ. ಈ ಸ್ಕೂಟರ್ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.
ಪರ್ಫಾಮೆನ್ಸ್ ಮತ್ತು ವೈಶಿಷ್ಟ್ಯಗಳು: ಗ್ರೇಸಿ 60/72V BLDC ಮೋಟಾರ್‌ನಿಂದ ಚಾಲಿತವಾಗಿದ್ದು, ಗಂಟೆಗೆ 25 ಕಿ.ಮೀ. ಗರಿಷ್ಠ ವೇಗವನ್ನು ಹೊಂದಿದೆ. ನಗರ ಪ್ರಯಾಣದ ಅಗತ್ಯಗಳಿಗೆ ಹೊಂದಿಕೊಳ್ಳುವಂತೆ ಡಿಸೈನ್ ಮಾಡಲಾಗಿದೆ. ಇದರ ಟಾಪ್ ವೇರಿಯೆಂಟ್ ಒಂದೇ ಚಾರ್ಜ್‌ನಲ್ಲಿ 140 ಕಿ.ಮೀ.ವರೆಗೆ ರೇಂಜ್ ನೀಡುತ್ತದೆ. ಪ್ರತಿ ಚಾರ್ಜ್‌ಗೆ ಕೇವಲ 1.5 ಯೂನಿಟ್ ವಿದ್ಯುತ್ ಬಳಸುತ್ತದೆ.

ಚಾರ್ಜಿಂಗ್ ಸಮಯವು 4 ಗಂಟೆಗಳು (ಲಿಥಿಯಂ - ಐಯಾನ್) ಹಾಗೂ 8 ಗಂಟೆಗಳು (ಜೆಲ್ - ಬ್ಯಾಟರಿಗಳು) ತೆದುಕೊಳ್ಳುತ್ತದೆ. ಭಾರತೀಯ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಇದು 180 ಮಿಮೀ ವರ್ಧಿತ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. 85 ಕೆ.ಜಿ ತೂಗುತ್ತದೆ ಮತ್ತು 150 ಕೆಜಿ ವರೆಗೆ ಪೇಲೋಡ್ ಅನ್ನು ಹೊರಬಲ್ಲದು ಎಂದು ಕಂಪನಿ ಹೇಳಿದೆ.
ಹೊಸ ಗ್ರೇಸಿ ಎಲೆಕ್ಟ್ರಿಕ್ ಸ್ಕೂಟರ್ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಮುಂಭಾಗದ ಡಿಸ್ಕ್ ಬ್ರೇಕ್, ಹಿಂಭಾಗದ ಡ್ರಮ್ ಬ್ರೇಕ್, ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್‌ಗಳು ಮತ್ತು ಎರಡೂ ಚಕ್ರಗಳಲ್ಲಿ 90 - 90/12 ಟೈರ್‌ಗಳು ಸೇರಿವೆ. ಈ ವೈಶಿಷ್ಟ್ಯಗಳು ವೈವಿಧ್ಯಮಯ ನಗರ ಭೂಪ್ರದೇಶಗಳಲ್ಲಿ ಸ್ಥಿರತೆ, ಸುರಕ್ಷತೆ ಮತ್ತು ಸೌಕರ್ಯವನ್ನು ಖಚಿತಪಡಿಸುತ್ತವೆ.

ಹೊಸ ಗ್ರೇಸಿ ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್ ವಿಷಯಕ್ಕೆ ಬಂದರೆ ಸ್ಕೂಟರ್ ಡಿಜಿಟಲ್ ಮೀಟರ್, ಎಲ್‌ಇಡಿ ಹೆಡ್ ಲ್ಯಾಂಪ್, ಕೀಲೆಸ್ ಡ್ರೈವ್ ಸಿಸ್ಟಮ್, ಆಂಟಿ-ಥೆಫ್ಟ್ ಅಲಾರ್ಮ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಪ್ರಯಾಣಿಕರ ಫುಟ್‌ರೆಸ್ಟ್ ಅನ್ನು ಹೊಂದಿದೆ. ಬಿಳಿ, ಕಪ್ಪು, ಬಿಳಿ - ಕಪ್ಪು, ಹಳದಿ - ನೀಲಿ ಮತ್ತು ಕಪ್ಪು - ಕೆಂಪು ಎಂಬ ಐದು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.
ವೇರಿಯೆಂಟ್‌ಗಳು ಮತ್ತು ಬೆಲೆ: ಹೊಸ ಫೇಸ್‌ಲಿಫ್ಟ್ ಗ್ರೇಸಿ ಅನ್ನು ವಿವಿಧ ಪ್ರಯಾಣದ ಅಗತ್ಯಗಳನ್ನು ಪೂರೈಸಲು ಮೂರು ವಿಭಿನ್ನ ಬ್ಯಾಟರಿ ಸಂರಚನೆಗಳಲ್ಲಿ ನೀಡಲಾಗುತ್ತಿದೆ. ಲಿಥಿಯಂ - ಐಯಾನ್ ಬ್ಯಾಟರಿ ವೇರಿಯೆಂಟ್ 60V/30Ah ಪ್ಯಾಕ್‌ನಲ್ಲಿ ಲಭ್ಯವಿದ್ದು, ರೂ. 66,000 (ಎಕ್ಸ್ - ಶೋರೂಂ) ಬೆಲೆಯಲ್ಲಿ ಸಿಗಲಿದೆ ಒಮ್ಮೆ ಚಾರ್ಜ್ ಮಾಡಿದ್ರೆ ಇದು 90 ರಿಂದ 100 ಕಿ.ಮೀ ಕ್ರಮಿಸಬಲ್ಲದು.
ಜೆಲ್ ಬ್ಯಾಟರಿ ವೇರಿಯೆಂಟ್‌ಗಳಲ್ಲಿ ಮೊದಲನೆಯದು 60V/32Ah ಪ್ಯಾಕ್ ಹೊಂದಿದ್ದು ರೂ. 54,000 ಎಕ್ಸ್ - ಶೋರೂಂ ಬೆಲೆಯನ್ನು ಹೊಂದಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 80 ರಿಂದ 90 ಕಿ.ಮೀ ಚಲಿಸಬಲ್ಲದು. ಎರಡನೇಯದು 72V/42Ah ಪ್ಯಾಕ್ ಹೊಂದಿದ್ದು, ಇದರ ಬೆಲೆಯು ರೂ. 58,500 ಎಕ್ಸ್ - ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 130 ರಿಂದ 140 ಕಿ.ಮೀ ರೇಂಜ್ ನೀಡುತ್ತದೆ.
ವಾರೆಂಟಿ: ಝೀಲಿಯೊ ಮೋಟಾರ್ ನಿಯಂತ್ರಕ ಮತ್ತು ಚೌಕಟ್ಟಿನಲ್ಲಿ 2 ವರ್ಷಗಳ ವಾರೆಂಟಿ, ಲಿಥಿಯಂ - ಐಯಾನ್ ಬ್ಯಾಟರಿಗಳಿಗೆ 3 ವರ್ಷಗಳು ಮತ್ತು ಜೆಲ್ ಬ್ಯಾಟರಿಗಳಿಗೆ 1 ವರ್ಷ ವಾರೆಂಟಿ ನೀಡುತ್ತದೆ. ಭಾರತೀಯ ಪ್ರಯಾಣಿಕರ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸಲು ಫೇಸ್‌ಲಿಫ್ಟ್ ಮಾಡಿದ ಗ್ರೇಸಿ ವಿನ್ಯಾಸ, ದಕ್ಷತೆ ಮತ್ತು ನಾವೀನ್ಯತೆಯ ಸಂಯೋಜನೆಯನ್ನು ಸಾಕಾರಗೊಳಿಸುತ್ತದೆ ಎಂದು ಕಂಪನಿಯ ಸಹ-ಸಂಸ್ಥಾಪಕ ಕುನಾಲ್ ಆರ್ಯ ಹೇಳಿದರು.


Click it and Unblock the Notifications