ಕೇವಲ 51 ಸಾವಿರಕ್ಕೆ ಹೊಸ ಸ್ಟೈಲಿಷ್ ಸ್ಕೂಟರ್ ಬಿಡುಗಡೆ: ಖರ್ಚಿಲ್ಲದೆ 90 ಕಿ.ಮೀ ಓಡಿಸಬಹುದು!

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಝೀಲಿಯೊ ಇ-ಮೊಬಿಲಿಟಿ, ತನ್ನ ಈವಾ ಶ್ರೇಣಿಯ ಅಡಿಯಲ್ಲಿ ಮೂರು ನವೀಕರಿಸಿದ ಸ್ಕೂಟರ್‌ಗಳನ್ನು ಪರಿಚಯಿಸುವ ಮೂಲಕ ಕಡಿಮೆ-ವೇಗದ ಇವಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ. ಕಂಪನಿಯು ಹೊಸ ಈವಾ ಇಕೋ ಎಲ್‌ಎಕ್ಸ್ ಮತ್ತು ಈವಾ ಇಕೋ ಝೆಡ್‌ಎಕ್ಸ್ ಜೊತೆಗೆ ನವೀಕರಿಸಿದ ಈವಾ ಝೆಡ್‌ಎಕ್ಸ್ ಪ್ಲಸ್ ಅನ್ನು ಈಗ ಬಿಡುಗಡೆ ಮಾಡಿದೆ. ಇದನ್ನು ದೈನಂದಿನ ನಗರ ಪ್ರಯಾಣಕ್ಕಾಗಿ ದಕ್ಷತೆ, ಸೌಕರ್ಯ ಮತ್ತು ಶೈಲಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಯುವ ಸವಾರರು, ಮಹಿಳಾ ಪ್ರಯಾಣಿಕರು ಮತ್ತು ಸುರಕ್ಷಿತ, ಪ್ರಾಯೋಗಿಕತೆಗೆ ಆದ್ಯತೆ ನೀಡುವ ಕುಟುಂಬಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಈವಾ ಶ್ರೇಣಿಯನ್ನು ರಚಿಸಲಾಗಿದೆ. ಮಾಡಲ್‌ಗಳು ಈಗ ದೇಶಾದ್ಯಂತ ಝೀಲಿಯೊ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಬುಕಿಂಗ್‌ಗಳು ಅಧಿಕೃತವಾಗಿ ತೆರೆದಿವೆ, ಇವು ಗ್ರಾಹಕರಿಗೆ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹೆಚ್ಚಿನ ಆಯ್ಕೆ ಮತ್ತು ಮೌಲ್ಯವನ್ನು ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

zelio-expands-eeva-series-with-two-new-scooters-and-one-facelift

ಈವಾ ಇಕೋ ಎಲ್‌ಎಕ್ಸ್: ಈವಾ ಇಕೋ ಎಲ್‌ಎಕ್ಸ್ ಆರಂಭಿಕ ಬೆಲೆಯು ರೂ.51,551 (ಎಕ್ಸ್-ಶೋರೂಂ) ಇದೆ. ಅನ್ನು ಪ್ರಾಯೋಗಿಕ ದೈನಂದಿನ ನಗರ ಪ್ರಯಾಣಕ್ಕಾಗಿ ನಿರ್ಮಿಸಲಾಗಿದೆ. 48/60V BLDC ಮೋಟಾರ್‌ನಿಂದ ಚಾಲಿತವಾಗಿದ್ದು, ಪ್ರತಿ ಚಾರ್ಜ್‌ಗೆ 60-90 ಕಿ.ಮೀ ಓಡಿಸಬಹುದು. ಗ್ಲೋಸಿ ಬ್ಲ್ಯಾಕ್, ಗ್ಲೋಸಿ ಗ್ರೇ, ಗ್ಲೋಸಿ ರೆಡ್ ಮತ್ತು ಗ್ಲೋಸಿ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು.

ಪೂರ್ಣ ಚಾರ್ಜ್‌ಗೆ ಕೇವಲ 1.5 ಯೂನಿಟ್ ವಿದ್ಯುತ್ ಬಳಸುತ್ತದೆ. 48-60V/32Ah GEL ಮತ್ತು 60V/30Ah ಲಿಥಿಯಂ ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿರುವ Eco LX, ಸ್ಥಿರ, ಆರಾಮದಾಯಕ ನಗರ ಸವಾರಿಗೆ ಬೆಸ್ಟ್ ಆಯ್ಕೆಯಾಗಿದೆ. ಹೊಸ ಈವಾ ಇಕೋ ಎಲ್‌ಎಕ್ಸ್ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳು, ಹೈಡ್ರಾಲಿಕ್ ಸಸ್ಪೆನ್ಷನ್ ಮತ್ತು ಮುಂಭಾಗ - ಹಿಂಭಾಗದಲ್ಲಿ 3.00-10 ಟೈರ್‌ಗಳನ್ನು ಹೊಂದಿದೆ. ಸ್ಕೂಟರ್ ವಿಶಾಲವಾದ 36-ಲೀಟರ್ ಬೂಟ್, ಬಾಳಿಕೆ ಬರುವ ಚಾಸಿಸ್ ಹೊಂದಿದೆ.

zelio-expands-eeva-series-with-two-new-scooters-and-one-facelift

ಈವಾ ಇಕೋ ಝೆಡ್‌ಎಕ್ಸ್: ಈವಾ ಇಕೋ ಝೆಡ್‌ಎಕ್ಸ್ ಆರಂಭಿಕ ಬೆಲೆಯು ರೂ. 53,551 (ಎಕ್ಸ್-ಶೋರೂಂ)ಇದೆ. ವಿಶ್ವಾಸಾರ್ಹ 48/60V BLDC ಮೋಟಾರ್, ಪ್ರತಿ ಚಾರ್ಜ್‌ಗೆ 60-90 ಕಿ.ಮೀ ಓಡಿಸಬಹುದು. ಪ್ರತಿ ಚಾರ್ಜ್‌ಗೆ 1.5 ಯೂನಿಟ್‌ ವಿದ್ಯುತ್ ಬಳಕೆ ಮಾಡುತ್ತದೆ. 12-32Ah GEL ಮತ್ತು 60V/30Ah ಲಿಥಿಯಂ ಬ್ಯಾಟರಿ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ಹೊಸ ಈವಾ ಇಕೋ ಝೆಡ್‌ಎಕ್ಸ್ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳು, ಹೈಡ್ರಾಲಿಕ್ ಸಸ್ಪೆನ್ಷನ್ ಮತ್ತು 90-90/12 ಮುಂಭಾಗ ಮತ್ತು 90-100/10 ಹಿಂಭಾಗದ ಟೈರ್‌ಗಳನ್ನು ಹೊಂದಿದ್ದು, ಉತ್ತಮ ರಸ್ತೆ ಉಪಸ್ಥಿತಿ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಇದು ಗ್ಲೋಸಿ ಬ್ಲ್ಯಾಕ್, ಗ್ಲೋಸಿ ಗ್ರೇ, ಗ್ಲೋಸಿ ರೆಡ್, ಗ್ಲೋಸಿ ಬ್ಲೂ ಮತ್ತು ಗ್ಲೋಸಿ ವೈಟ್ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.

zelio-expands-eeva-series-with-two-new-scooters-and-one-facelift

ಈವಾ ಝೆಡ್‌ಎಕ್ಸ್ (ಫೇಸ್‌ಲಿಫ್ಟ್): ಫೇಸ್‌ಲಿಫ್ಟೆಡ್ Eeva ZX ಆರಂಭಿಕ ಬೆಲೆಯು ರೂ. 65,051 (ಎಕ್ಸ್-ಶೋರೂಂ) ಇದೆ. 60/72V BLDC ಮೋಟಾರ್ ಆಯ್ಕೆಗಳು ಮತ್ತು 12-32Ah/42Ah GEL ನಿಂದ 60V/30Ah-72V/32Ah ಲಿಥಿಯಂ ಕಾನ್ಫಿಗರೇಶನ್‌ಗಳವರೆಗಿನ ಬಹು ಬ್ಯಾಟರಿ ಆಯ್ಕೆಗಳೊಂದಿಗೆ ಕಾರ್ಯಕ್ಷಮತೆಯ ಪ್ರೊಫೈಲ್ ಅನ್ನು ಅಪ್‌ಗ್ರೇಡ್ ಮಾಡಲಾಗಿದೆ. ಪೂರ್ಣ ಚಾರ್ಜ್‌ಗೆ 60-90 ಕಿಮೀ ಓಡಿಸಬಹುದು.

ಇದು ಈಗ ಹಿಂಭಾಗದ ಡ್ರಮ್ ಬ್ರೇಕ್, ಹೈಡ್ರಾಲಿಕ್ ಸಸ್ಪೆನ್ಷನ್ ಮತ್ತು ಎರಡೂ ಚಕ್ರಗಳಲ್ಲಿ 90-90/12 ಟೈರ್‌ಗಳೊಂದಿಗೆ ಜೋಡಿಸಲಾದ ಮುಂಭಾಗದ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಗ್ಲೋಸಿ ಬ್ಲ್ಯಾಕ್, ಗ್ಲೋಸಿ ಗೋಲ್ಡನ್, ಗ್ಲೋಸಿ ರೆಡ್, ಮ್ಯಾಟ್ ಬ್ಲೂ ಮತ್ತು ಗ್ಲೋಸಿ ವೈಟ್ ಸೇರಿದಂತೆ ಹೊಸ ಬಣ್ಣ ಆಯ್ಕೆಗಳೊಂದಿಗೆ, ZX ಬಾಳಿಕೆ ಬರುವ ಎಂಜಿನಿಯರಿಂಗ್ ಅನ್ನು ಉಳಿಸಿಕೊಂಡು ರಿಫ್ರೆಶ್, ಪ್ರೀಮಿಯಂ ಆಕರ್ಷಣೆಯನ್ನು ತರುತ್ತದೆ ಎಂದು ಕಂಪನಿ ತಿಳಿಸಿದೆ.

More from DriveSpark

Article Published On: Friday, November 7, 2025, 12:39 [IST]
English summary
Zelio expands eeva series with two new scooters and one facelift
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+