ಮೊಬೈಲ್‌ಗಿಂತ ಕಡಿಮೆ ಬೆಲೆಯಲ್ಲಿ ಸ್ಕೂಟರ್ ಬಿಡುಗಡೆ: ಪ್ರತಿಸ್ಪರ್ಧಿ ಕಂಪನಿಗಳಿಗೆ ನಡುಕ ಶುರು!
ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ ಝೀಲಿಯೋ ಎಲೆಕ್ಟ್ರಿಕ್ (ZELO ELECTRIC), ಇದುವರೆಗಿನ ಅತ್ಯಂತ ಮುಂದುವರಿದ ಮತ್ತು ಕೈಗೆಟುಕುವ ಬೆಲೆಯ ಹೊಸ ನೈಟ್+ (Knight+) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್ ಆ್ಯಪಲ್ ಐಫೋನ್ 15 ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ನಗರ ಸಂಚಾರ, ಸಣ್ಣ ಪಟ್ಟಣಗಳಲ್ಲಿ ಸವಾರಿ ಅಥವಾ ದೀರ್ಘ ಗ್ರಾಮೀಣ ಮಾರ್ಗಗಳನ್ನು ಒಳಗೊಂಡಂತೆ ಭಾರತೀಯ ಸವಾರರ ದೈನಂದಿನ ಅಗತ್ಯಗಳನ್ನು ಪೂರೈಸಲು ನೈಟ್+ ಸ್ಕೂಟರ್‌ನ್ನು ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿದೆ.
ಈ ಸ್ಕೂಟರ್ 1.8kWh ಪೋರ್ಟಬಲ್ LFP ಬ್ಯಾಟರಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ ವಿಶ್ವಾಸಾರ್ಹ 100 ಕಿಮೀ ಓಡಬಲ್ಲದು, ಹೀಟ್ ಸುರಕ್ಷತೆ ಮತ್ತು ಸುಲಭವಾದ ಮನೆ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಅಳವಡಿಸಲಾದ 1.5kW ಮೋಟಾರ್ 55 km/h ಟಾಪ್ ಸ್ಪೀಡ್ ಸಾಮರ್ಥ್ಯವನ್ನು ಹೊಂದಿದೆ.

"ನೈಟ್+ ನೊಂದಿಗೆ, ನಾವು ಕೇವಲ ಸ್ಕೂಟರ್ ಅನ್ನು ಬಿಡುಗಡೆ ಮಾಡುತ್ತಿಲ್ಲ, ಬದಲಾಗಿ ಭಾರತದಲ್ಲಿ ಪ್ರೀಮಿಯಂ ಕೈಗೆಟುಕುವ EV ಗಳನ್ನು ಪ್ರತಿಯೊಬ್ಬರಿಗೆ ತಲುಪಿಸುತ್ತಿದ್ದೇವೆ. ಈ ಸ್ಕೂಟರ್ ತನ್ನ ವರ್ಗದಲ್ಲಿಯೇ ಅತ್ಯಂತ ವೈಶಿಷ್ಟ್ಯಪೂರ್ಣ, ಮೌಲ್ಯಯುತ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಜನರು ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬದಲಾಗಲು ಇದಕ್ಕಿಂತ ಬೆಸ್ಟ್ ಆಯ್ಕೆ ಮತ್ತೊಂದಿಲ್ಲ ಎಂದು ಕಂಪನಿಯ ಸಹ-ಸಂಸ್ಥಾಪಕ ಮುಕುಂದ್ ಬಹೇತಿ ಹೇಳಿದರು.
ಈ ಸ್ಕೂಟರ್ ಬೆಲೆಯು ಕೇವಲ ರೂ.59,990 (ಎಕ್ಸ್-ಶೋರೂಂ) ಅಷ್ಟೆ. ಇದು ಆ್ಯಪಲ್ ಐಫೋನ್ 15 ಗಿಂತ ಕಡಿಮೆ ಬೆಲೆಯಾಗಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಉತ್ತಮ ಪರ್ಫಾಮೆನ್ಸ್, ಸುರಕ್ಷತೆ ಮತ್ತು ಆಕರ್ಷಕ ಡಿಸೈನ್ ಮಿಶ್ರಣದೊಂದಿಗೆ ಪ್ರೀಮಿಯಂ ಅನುಭವ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ನೈಟ್+ ವಿಶೇಷತೆಗಳು
ಹಿಲ್ ಹೋಲ್ಡ್ ಕಂಟ್ರೋಲ್ ನಂತಹ ಆಧುನಿಕ ಫೀಚರ್ ಒಳಗೊಂಡಿರುವ ಈ ಸ್ಕೂಟರ್, ಇಳಿಜಾರುಗಳಲ್ಲಿ ಸ್ಕೂಟರ್ ಅನ್ನು ಹಿಂದಕ್ಕೆ ಉರುಳುವುದನ್ನು ತಡೆದು ಹತ್ತುವಿಕೆಯ ಆರಂಭವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿಸುತ್ತದೆ. ಹಾಗೆಯೇ ಕ್ರೂಸ್ ಕಂಟ್ರೋಲ್ ನಂತಹ ಮತ್ತೊಂದು ಉಪಯುಕ್ತ ಫೀಚರ್‌ನೊಂದಿಗೆ ದೂರದ ಪ್ರಯಾಣಗಳಲ್ಲಿ ಸ್ಥಿರವಾದ ಸವಾರಿ ಅನುಭವ ನೀಡುತ್ತದೆ.
ಫಾಲೋ- ಮಿ -ಹೋಮ್ ಹೆಡ್‌ಲ್ಯಾಂಪ್‌ಗಳನ್ನು ಇದರಲ್ಲಿ ಒದಗಿಸಲಾಗಿದ್ದು, ಪಾರ್ಕಿಂಗ್ ನಂತರ ಹೆಡ್‌ಲ್ಯಾಂಪ್ ಅನ್ನು ಸಂಕ್ಷಿಪ್ತವಾಗಿ ಆನ್ ಮಾಡುತ್ತದೆ. ಕಡಿಮೆ-ಬೆಳಕಿನ ಪರಿಸ್ಥಿತಿಗಳಲ್ಲಿ ಸವಾರನ ಮಾರ್ಗಕ್ಕೆ ಲ್ಯಾಂಪ್‌ಗಳನ್ನು ಬೆಳಗಿಸುತ್ತದೆ. ಹಾಗೆಯೇ USB ಚಾರ್ಜಿಂಗ್ ಪೋರ್ಟ್ ನೀಡಲಾಗಿದ್ದು, ಸವಾರರು ಪ್ರಯಾಣದಲ್ಲಿರುವಾಗ ತಮ್ಮ ಫೋನ್ ಅಥವಾ ಗ್ಯಾಜೆಟ್‌ಗಳನ್ನು ಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.
ಪೋರ್ಟಬಲ್ ಬ್ಯಾಟರಿ ಹೊಂದಿರುವ ಈ ಸ್ಕೂಟರ್ ತೆಗೆಯಬಹುದಾದ ಮತ್ತು ಎಲ್ಲಿಯಾದರೂ ಚಾರ್ಜ್ ಮಾಡಲು ಸುಲಭ, ಗರಿಷ್ಠ ಅನುಕೂಲತೆ ಮತ್ತು ನಮ್ಯತೆಯನ್ನು ನೀಡುತ್ತದೆ. 6 ಬಣ್ಣಗಳಲ್ಲಿ ಸ್ಕೂಟರ್ ಲಭ್ಯವಿದ್ದು, ಗ್ಲಾಸಿ ವೈಟ್ ಮತ್ತು ಗ್ಲಾಸಿ ಬ್ಲ್ಯಾಕ್ ಬಣ್ಣಗಳು ಸಿಂಗಲ್ ಟೋನ್‌ನಲ್ಲಿ ಸಿಗುತ್ತವೆ. ಮ್ಯಾಟ್ ಬ್ಲೂ & ವೈಟ್, ಮ್ಯಾಟ್ ರೆಡ್ & ವೈಟ್, ಮ್ಯಾಟ್ ಯೆಲ್ಲೋ & ವೈಟ್, ಮ್ಯಾಟ್ ಗ್ರೇ & ವೈಟ್ ಬಣ್ಣಗಳು ಡ್ಯುಯಲ್ ಟೋನ್‌ನಲ್ಲಿ ಸಿಗುತ್ತವೆ.
ನೈಟ್+ ಈಗ ಎಲ್ಲಾ ZELO ELECTRIC ಡೀಲರ್‌ಶಿಪ್‌ಗಳಲ್ಲಿ ಮುಂಗಡ ಬುಕಿಂಗ್‌ಗೆ ಮುಕ್ತವಾಗಿದೆ. ವಿತರಣೆಗಳು ಆಗಸ್ಟ್ 20, 2025 ರಿಂದ ಪ್ರಾರಂಭವಾಗುತ್ತವೆ. ನೈಟ್+ ನೊಂದಿಗೆ, ಬ್ರ್ಯಾಂಡ್ ಅತ್ಯಾಧುನಿಕ ನಾವೀನ್ಯತೆ, ಆಕರ್ಷಕ ವಿನ್ಯಾಸ ಮತ್ತು ನೈಜ-ಪ್ರಪಂಚದ ಕಾರ್ಯಕ್ಷಮತೆಗೆ ಕಂಪನಿಯ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಹೇಳಿಕೊಂಡಿದೆ.


Click it and Unblock the Notifications








