Hero Splendor: ಈ ವರ್ಷ ಸ್ಪ್ಲೆಂಡರ್ ಖರೀದಿಸುವವರಿಗೆ ಶಾಕ್ ಕೊಟ್ಟ ಕಂಪನಿ

ಹೀರೋ ಸ್ಪ್ಲೆಂಡರ್ (Hero Splendor) ಮೂರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹ ಹೆಸರಾಗಿದ್ದು, ಬಡವರ ಬಂಡಿ ಎಂದೇ ಜನಪ್ರಿಯತೆ ಪಡೆದುಕೊಂಡಿದೆ. ಈಗ ಸ್ಪ್ಲೆಂಡರ್ ಖರೀದಿದಾರರಿಗೆ ಕಹಿ ಸುದ್ದಿ ಏನೆಂದರೆ ಹೀರೋ ಮೋಟೋಕಾರ್ಪ್ 2026 ಕ್ಕೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆ ಏರಿಕೆಯನ್ನು ಘೋಷಿಸಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಸ್ಪ್ಲೆಂಡರ್ ಪ್ಲಸ್, ಸ್ಪ್ಲೆಂಡರ್ ಪ್ಲಸ್ i3S ಮತ್ತು ಸ್ಪ್ಲೆಂಡರ್ ಪ್ಲಸ್ Xtec ಟ್ರಿಮ್‌ಗಳಂತಹ ವೇರಿಯೆಂಟ್‌ಗಳು ಸೇರಿವೆ. ಆದರೆ ಈ ಬೆಲೆ ಏರಿಕೆಯು ಅಷ್ಟೇನೂ ಪ್ರಭಾವ ಬೀರುವುದಿಲ್ಲ, ಏಕೆಂದರೆ ಇದು ಸಣ್ಣ ಬೆಲೆ ಪರಿಷ್ಕರಣೆಯಾಗಿದೆ.

ಬೆಲೆ ಏರಿಕೆ ವಿವರಗಳು

ಸ್ಟ್ಯಾಂಡರ್ಡ್ ಸ್ಪ್ಲೆಂಡರ್ ಪ್ಲಸ್ ಡ್ರಮ್ ವೇರಿಯೆಂಟ್ ಹಳೆಯ ಬೆಲೆ ರೂ.73,902 ಇತ್ತು, ಈಗ ಹೊಸ ಬೆಲೆ ರೂ.74,152 ಆಗಿದೆ. ಸ್ಪ್ಲೆಂಡರ್ ಪ್ಲಸ್ i3S ಹಳೆಯ ಬೆಲೆ ರೂ.75,055 ಇತ್ತು, ಈಗ ಹೊಸ ಬೆಲೆ ರೂ.75,305 ಆಗಿದೆ. ಸ್ಪ್ಲೆಂಡರ್ ಪ್ಲಸ್ Xtec ಹಳೆಯ ಬೆಲೆ ರೂ.77,428 ಇತ್ತು, ಈಗ ಹೊಸ ಬೆಲೆ ರೂ. 77,678 ಆಗಿದೆ.

2026-hero-splendor-plus-price-hike-variant-wise-list

ಸ್ಪ್ಲೆಂಡರ್ ಪ್ಲಸ್ Xtec 2.0 ಡ್ರಮ್ ಹಳೆಯ ಬೆಲೆ ರೂ.79,964 ಹಾಗೂ ಡಿಸ್ಕ್ 80,471 ಇತ್ತು, ಈಗ ಹೊಸ ಬೆಲೆಗಳು ಕ್ರಮವಾಗಿ ರೂ. 80,214 ಹಾಗೂ 80,721 ಆಗಿದೆ. ಅಂದರೆ ಪ್ರತಿ ಮಾಡಲ್‌ ಮೇಲೆ ಕೇವಲ 250 ರೂ. ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆ ತೀರಾ ಕಡಿಮೆ ಮತ್ತು ಜನ ಬೈಕ್‌ನ್ನು ಖರೀದಿಸಲು ಹಿಂಜರಿಯುವುದಿಲ್ಲ. ಸ್ಪ್ಲೆಂಡರ್ ಇನ್ನೂ ಅದೇ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ನೀಡುವ ಹಣಕ್ಕಿಂತ ಅತ್ಯಧಿಕ ಮೌಲ್ಯ ನೀಡುವ ವಾಹನವಾಗಿದೆ.

ಕಡಿಮೆ ಮೇಂಟನೆನ್ಸ್ ಮತ್ತು ಇಂಧನ ವೆಚ್ಚದೊಂದಿಗೆ ವಿಶ್ವಾಸಾರ್ಹ ಪ್ರಯಾಣಿಕ ಬೈಕ್ ಅನ್ನು ನೀವು ಹುಡುಕುತ್ತಿದ್ದರೆ, ಸ್ಪ್ಲೆಂಡರ್ ಪ್ಲಸ್ ನಿಮ್ಮ ಆಯ್ಕೆಗೆ ಸರಿಯಾದ ಆಯ್ಕೆಯಾಗಿದೆ. ಆಕರ್ಷಕ ಡಿಸೈನ್, ಸಿಟಿ ರೈಡ್‌ಗೆ ಬೇಕಾದ ಕಡಿಮೆ ಪರ್ಫಾಮೆನ್ಸ್ ನೀಡುವ ಬೆಸ್ಟ್ ಬೈಕ್ ಆಗಿದೆ. ಮೊದಲ ಬಾರಿಗೆ ಖರೀದಿಸುವವರಿಗೆ ಅಥವಾ ಯಾವುದೇ ಅಲಂಕಾರಗಳಿಲ್ಲದೆ ಸಿಂಪಲ್ ಮೋಟಾರ್‌ಸೈಕಲ್‌ ಅಗತ್ಯವಿರುವವರು ಇದನ್ನು ಖರೀದಿಸಬಹುದು.

2026-hero-splendor-plus-price-hike-variant-wise-list

ಸ್ಪ್ಲೆಂಡರ್ ವಿಶೇಷತೆಗಳು

ಹೀರೋ ಸ್ಪ್ಲೆಂಡರ್ ಪ್ಲಸ್ 97.2cc, ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 7.09 bh ಪವರ್ ಮತ್ತು 8.05 Nm ಟಾರ್ಕ್ ಹೊರಹಾಕುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. 70 ಕಿ.ಮೀವರೆಗೂ ಮೈಲೇಜ್ ನೀಡಬಲ್ಲದು.

ಈ ಮೋಟಾರ್‌ಸೈಕಲ್‌ 115 ಕೆಜಿ ತೂಕವಿದ್ದು, 11 ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ವೇರಿಯೆಂಟ್‌ಗೆ ಅನುಗುಣವಾಗಿ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಬ್ಲೂಟೂತ್ ಕನೆಕ್ಟಿವಿಟಿ, ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಸಪೋರ್ಟ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

2026-hero-splendor-plus-price-hike-variant-wise-list

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಈ ಬೆಲೆ ಏರಿಕೆ ತೀರಾ ಕಡಿಮೆ ಮತ್ತು ಜನರು ಅದನ್ನು ಖರೀದಿಸಲು ಹಿಂಜರಿಯುವಂತೆ ಮಾಡುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಈ ಬೆಲೆ ಏರಿಕೆ ನಡುವೆಯೂ ಸ್ಪ್ಲೆಂಡರ್ ಇನ್ನೂ ಸಾಕಷ್ಟು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಹಾಗಾಗಿ ಹೀರೋ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಬೈಕ್ ಎಂಬ ತನ್ನ ಬಿರುದನ್ನು ಈ ವರ್ಷವೂ ಮುಂದುವರಿಸಲಿದೆ ಎಂದು ನಂಬುತ್ತಿದ್ದೇವೆ.

ಭಾರತದ ಅತ್ಯಂತ ಜನಪ್ರಿಯ ಪ್ರಯಾಣಿಕ ಮೋಟಾರ್‌ಸೈಕಲ್‌ಗಳಲ್ಲಿ ಒಂದೆಂದು ಸುಲಭವಾಗಿ ಪರಿಗಣಿಸಬಹುದಾದ ಈ ಬೈಕ್‌ಗೆ, ಹೊಸ ಬೆಲೆ ಏರಿಕೆ ಇದು ಅತ್ಯಂತ ಸಾಧಾರಣವಾಗಿದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 23, 2026, 14:52 [IST]
English summary
2026 hero splendor plus price hike variant wise list
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+