Ampere: ನಿನ್ನೆಯಷ್ಟೆ ಹೊಸ ಸ್ಕೂಟರ್ ಬಿಡುಗಡೆ: 1 ಪೈಸೆ ಖರ್ಚಿಲ್ಲದೆ 100 ಕಿ.ಮೀ ಓಡಿಸಬಹುದು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೊಸ ಬ್ರಾಂಡ್‌ಗಳಿಂದ ಸಾಲು ಸಾಲು ಇವಿ ದ್ವಿಚಕ್ರ ವಾಹನಗಳು ದೇಶದಲ್ಲಿ ಬಿಡುಗಡೆಯಾಗುತ್ತಿವೆ. ಉತ್ತಮ ಡಿಸೈನ್, ಆಕರ್ಷಕ ಫೀಚರ್ಸ್ ಹಾಗೂ ಅತ್ಯುತ್ತಮ ರೇಂಜ್ ನೀಡುವ ಮೂಲಕ ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತದಲ್ಲಿ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳಿಗೆ ಪೈಪೋಟಿ ನೀಡುತ್ತಿವೆ. ಮೊನ್ನೆಯಷ್ಟೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಆಂಪಿಯರ್, ತನ್ನ ಆಂಪಿಯರ್ ಮ್ಯಾಗ್ನಸ್ ಜಿ ಮ್ಯಾಕ್ಸ್ (Ampere Magnus G Max) ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು ಕೂಡ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಸ್ಕೂಟರ್‌ನ ಪ್ರಮುಖ ವಿಶೇಷತೆಗಳು ಇಲ್ಲಿವೆ.

ಹೊಸ ಆಂಪಿಯರ್ ಮ್ಯಾಗ್ನಸ್ ಜಿ ಮ್ಯಾಕ್ಸ್ ರೂ.94,999 (ಎಕ್ಸ್‌ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿ ಇಕೊ ಮೋಡ್‌ನಲ್ಲಿ 100 ಕಿ.ಮೀಗಿಂತ ಹೆಚ್ಚು ದೂರ ಓಡಿಸಬಹುದು. ದೊಡ್ಡ ಅಂಡರ್‌ ಸೀಟ್ ಸ್ಟೋರೇಜ್ ಮತ್ತು ವಿಶ್ವಾಸಾರ್ಹ ಎಲ್‌ಎಫ್‌ಪಿ ಬ್ಯಾಟರಿಯೊಂದಿಗೆ ಈ ಸ್ಕೂಟರ್ ಅನ್ನು ನಿರ್ಮಿಸಲಾಗಿದೆ. ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವವರಿಗೆ ವಿಶ್ವಾಸಾರ್ಹ ಸ್ಕೂಟರ್ ಆಗಿದೆ ಎಂದು ಕಂಪನಿ ಭರವಸೆ ನೀಡಿದೆ.

ampere-magnus-g-max-price-features-battery-and-range

ಸವಾರರಿಗೆ ಸ್ಪೋರ್ಟಿ ಸವಾರಿ ಅನುಭವ ನೀಡುವ ಹೊಸ ಆಂಪಿಯರ್ ಮ್ಯಾಗ್ನಸ್ ಜಿ ಮ್ಯಾಕ್ಸ್, ಸಿನ್ನಮನ್ ಕಾಪರ್, ಮಾನ್ಸೂನ್ ಬ್ಲೂ, ಮಚ್ಚಾ ಗ್ರೀನ್ ಎಂಬ ಬಣ್ಣಗಳ ಆಯ್ಕೆಗಳೊಂದಿಗೆ ಸ್ಕೂಟರ್ ಡ್ಯುಯಲ್ ಟೋನ್ ಡಿಸೈನ್‌ದೊಂದಿಗೆ ಆಕರ್ಷಕ ಡಿಸೈನ್ ಪಡೆದುಕೊಂಡಿದೆ. ರೇಂಜ್, ಸೌಕರ್ಯ, ಸಂಗ್ರಹಣೆ ಮತ್ತು ಬ್ಯಾಟರಿ ಸುರಕ್ಷತೆಯಾದ್ಯಂತ ಸ್ಥಿರತೆ, ವಿಶ್ವಾಸಾರ್ಹತೆ ಮತ್ತು ಉತ್ತಮ ಸವಾರಿ ಅನುಭವವನ್ನು ನೀಡುತ್ತದೆ.

ಹೊಸ ಮ್ಯಾಗ್ನಸ್ ಜಿ ಮ್ಯಾಕ್ಸ್ 3 ಕಿಲೋವ್ಯಾಟ್ ಲಿಥಿಯಂ ಫೆರೋ ಫಾಸ್ಫೇಟ್ (ಎಲ್‌ಎಫ್‌ಪಿ) ಬ್ಯಾಟರಿಯಿಂದ ಚಾಲಿತವಾಗಿದ್ದು, ಈ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಿದರೆ 100 ಕಿ.ಮೀ.ಗಿಂತ ಹೆಚ್ಚಿನ ರೇಂಜ್ ನೀಡುತ್ತದೆ. ಶೇ80 ವರೆಗೆ ಚಾರ್ಜ್ ಆಗಲು ಕೇವಲ 4.5 ಗಂಟೆಗಳ ಸಮಯವನ್ನು ತೆಗೆದುಕೊಳ್ಳುತ್ತದೆ. 5 ವರ್ಷಗಳು ಅಥವಾ 75,000 ಕಿ.ಮೀ ಬ್ಯಾಟರಿ ವಾರೆಂಟಿ ಹೊಂದಿದೆ.

ಇದು ಇಕೋ, ಸಿಟಿ ಮತ್ತು ರಿವರ್ಸ್ ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ. 33-ಲೀಟರ್ ಅಂಡರ್-ಸೀಟ್ ಬೂಟ್ ಸ್ಟೋರೇಜ್ ಅನುಕೂಲಕರ ಮತ್ತು ಕುಟುಂಬಗಳಿಗೆ ದಿನಸಿ ವಸ್ತುಗಳನ್ನು ಸಾಗಿಸಲು ಸುಲಭವಾಗಿಸುತ್ತದೆ. 65 ಕಿ.ಮೀ.ವರೆಗಿನ ಟಾಪ್ ಸ್ಪೀಡ್, ಡ್ಯುಯಲ್ ಫ್ರೇಮ್ ಚಾಸಿಸ್ ಮತ್ತು 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ನಿರ್ಮಿಸಲಾಗಿದೆ. ಇದಲ್ಲದೆ, ಸವಾರಿ ಅನುಭವವನ್ನು ಹೆಚ್ಚಿಸಲು ಹಬ್-ಮೌಂಟೆಡ್ ಮೋಟಾರ್‌ ಹೊಂದಿದೆ.

ಕಂಪನಿ ಪ್ರಕಟಣೆಯಲ್ಲಿ ತಿಳಿಸಿರುವ ಪ್ರಕಾರ, 142 ಕಿ.ಮೀಗಿಂತ ಹೆಚ್ಚು ಪ್ರಮಾಣೀಕೃತ ರೇಂಜ್ ಮತ್ತು 100 ಕಿ.ಮೀ ರಿಯಲ್-ವರ್ಲ್ಡ್ ರೇಂಜ್ ನೀಡುತ್ತದೆ. ಸ್ಕೂಟರ್ ಮೇಲೆ 5 ವರ್ಷಗಳು ಹಾಗೂ 75,000 ಕಿ.ಮೀ ಬ್ಯಾಟರಿ ವಾರೆಂಟಿ ನೀಡಲಾಗಿದೆ. ದೈನಂದಿನ ಶೇಖರಣಾ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾದ 33-ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಇತ್ತೀಚಿನ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬಹುದೊಡ್ಡದಾಗಿದೆ.

ನಗರ ಪ್ರಯಾಣಕ್ಕೆ 65 ಕಿ.ಮೀ ಟಾಪ್ ಸ್ಪೀಡ್ ಸಾಕಾಗಲಿದ್ದು, ಸಿಟಿಯಲ್ಲಿ ಗಮ್ಯ ಸ್ಥಳಗಳನ್ನು ವೇಗವಾಗಿ ತಲುಪಬಹುದಾಗಿದೆ. TCU ಮೂಲಕ ಐಚ್ಛಿಕ ಸಂಪರ್ಕಿತ ವೈಶಿಷ್ಟ್ಯಗಳೊಂದಿಗೆ LED ಹೆಡ್‌ಲ್ಯಾಂಪ್ ಮತ್ತು ಇಂಡಿಕೇಟರ್‌ಗಳನ್ನು ಒದಗಿಸಲಾಗಿದೆ. USB ಚಾರ್ಜಿಂಗ್ ಪೋರ್ಟ್‌ನೊಂದಿಗೆ 3.5-ಇಂಚಿನ LCD ಡಿಜಿಟಲ್ ಕ್ಲಸ್ಟರ್, ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, January 20, 2026, 14:37 [IST]
English summary
Ampere magnus g max price features battery and range
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+