ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ 100 ಎಥರ್ ಜೂನಿಯರ್ ಹೆಲ್ಮೆಟ್‌ಗಳು: ಯಾಕೆ ಗೊತ್ತಾ...

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ (National Road Safety Mont) ಅಂಗವಾಗಿ, ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಎಥರ್ ಎನರ್ಜಿ ಇಂದು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ 100 ಐಎಸ್‌ಐ ಪ್ರಮಾಣೀಕೃತ ಎಥರ್ ಜೂನಿಯರ್ ಹೆಲ್ಮೆಟ್‌ಗಳನ್ನು ಹಸ್ತಾಂತರಿಸಿದೆ. ಯುವ ದ್ವಿಚಕ್ರ ವಾಹನ ಪ್ರಯಾಣಿಕರಲ್ಲಿ ಸುರಕ್ಷಿತ ಸವಾರಿ ಅಭ್ಯಾಸವನ್ನು ಉತ್ತೇಜಿಸಲು ಎಥರ್‌ನ ಉಪಕ್ರಮದ ಒಂದು ಭಾಗವಾಗಿದೆ. ಜಾಗೃತಿ ಮೂಡಿಸಲು ಮತ್ತು ಸುರಕ್ಷಿತ ಸವಾರಿ ಅಭ್ಯಾಸಗಳ ಆರಂಭಿಕ ಅಳವಡಿಕೆಯನ್ನು ಉತ್ತೇಜಿಸಲು ಬೆಂಗಳೂರು ಸಂಚಾರ ಪೊಲೀಸರು ನಗರದಾದ್ಯಂತ ಈ ಹೆಲ್ಮೆಟ್ ‌ಗಳನ್ನು ವಿತರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ರಸ್ತೆ ಅಪಘಾತ ಸಾವುಗಳಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚಿನ ಪಾಲನ್ನು ಹೊಂದಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ 2023 ರ ವಾರ್ಷಿಕ ವರದಿಯ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ 54,568 ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್‌ಗಳನ್ನು ಧರಿಸಿರಲಿಲ್ಲ, ಇದು ಒಟ್ಟು ಸಾವುಗಳಲ್ಲಿ ಶೇ 31 ಕ್ಕಿಂತ ಹೆಚ್ಚು ಎಂದು ತಿಳಿಸಿದೆ.

ather-hands-over-100-ather-junior-helmets-to-bengaluru-traffic-police

ಸಿಟಿಜನ್ ಕನ್ಸ್ಯೂಮರ್ ಮತ್ತು ಸಿವಿಕ್ ಆಕ್ಷನ್ ಗ್ರೂಪ್ (ಸಿಎಜಿ) ಜುಲೈ 2024 ರಲ್ಲಿ ನಡೆಸಿದ ಸಮೀಕ್ಷೆಯು ಮಕ್ಕಳಲ್ಲಿ ಹೆಲ್ಮೆಟ್ ಬಳಕೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಕಂಡುಹಿಡಿದಿದೆ. ಸೀಮಿತ ದೈಹಿಕ ಮತ್ತು ಅರಿವಿನ ಬೆಳವಣಿಗೆಯಿಂದಾಗಿ ಮಕ್ಕಳು ಅಪಘಾತಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಪೋಷಕರು ಅವರಿಗೆ ಸರಿಯಾಗಿ ಹೊಂದಿಕೊಳ್ಳುವ ಹೆಲ್ಮೆಟ್‌ಗಳನ್ನು ಹುಡುಕಲು ಹೆಣಗಾಡುತ್ತಾರೆ.

ಈ ಸಮಸ್ಯೆಯನ್ನು ನೀಗಿಸಲು ಎಥರ್ ಜೂನಿಯರ್ ಹೆಲ್ಮೆಟ್ ಅನ್ನು ವಿನ್ಯಾಸಗೊಳಿಸಲಾಗಿದೆ, ಇದನ್ನು ಐಎಸ್ಐ ಪ್ರಮಾಣೀಕೃತ ನಿರ್ಮಾಣದೊಂದಿಗೆ ಮಕ್ಕಳನ್ನು ಆಕರ್ಷಿಸಲು ಮತ್ತು ಅಭ್ಯಾಸವನ್ನು ಪ್ರೋತ್ಸಾಹಿಸಲು ಮಾಡಿದ ವಿಶಿಷ್ಟವಾದ ಹೆಲ್ಮೆಟ್ ಆಗಿದೆ. ಎಥರ್ ಜೂನಿಯರ್ ಹೆಲ್ಮೆಟ್‌ಗಳು ಆಸ್ಟ್ರೋ, ಬಿಗ್ ಬೀ ಮತ್ತು ಯೂನಿಕಾರ್ನ್ ಎಂಬ ಮೂರು ವೇರಿಯೆಂಟ್ ‌ಗಳಲ್ಲಿ ಲಭ್ಯವಿರುತ್ತವೆ. 3 ರಿಂದ 9 ವರ್ಷ ವಯಸ್ಸಿನ ಮಕ್ಕಳಿಗೆ ಬಹು - ಗಾತ್ರದ ಆಯ್ಕೆಗಳಲ್ಲಿ ಬರುತ್ತವೆ.

ಕೇವಲ ಹೆಲ್ಮೆಟ್ ಮಾತ್ರವಲ್ಲದೆ ಎಥರ್ ಕಂಪನಿಯು ತನ್ನ ಸ್ಕೂಟರ್‌ಗಳಲ್ಲಿ ಸುರಕ್ಷತಾ ಫೀಚರ್‌ಗಳನ್ನು ಸಹ ಪರಿಚಯಿಸಿದೆ. ಕೆಳಗೆ ಬಿದ್ದಾಗ ಪವರ್ ಕಡಿತಗೊಳಿಸುವ ಫಾಲ್‌ಸೇಫ್, ಅಸಮ ಅಥವಾ ಆರ್ದ್ರ ಮೇಲ್ಮೈಗಳಲ್ಲಿ ಚಕ್ರ ಜಾರಿಬೀಳುವುದನ್ನು ತಡೆಯುವ ಸ್ಕಿಡ್‌ಕಂಟ್ರೋಲ್, ಉತ್ತಮ ನಿಯಂತ್ರಣಕ್ಕಾಗಿ ರೈಡಿಂಗ್ ಮೋಡ್‌ಗಳಲ್ಲಿ ಟ್ರಾಕ್ಷನ್ ಮಟ್ಟವನ್ನು ಸರಿಹೊಂದಿಸುವ ಮಲ್ಟಿ-ಮೋಡ್ ಟ್ರಾಕ್ಷನ್ ಕಂಟ್ರೋಲ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.

ಇದಲ್ಲದೆ, ಕ್ರ್ಯಾಶ್ ಅಲರ್ಟ್‌ಗಳಂತಹ ಫೀಚರ್‌ಗಳು ತೀವ್ರ ಪರಿಣಾಮದ ಸಂದರ್ಭದಲ್ಲಿ ತುರ್ತು ಸಂಪರ್ಕಗಳಿಗೆ ತಿಳಿಸುತ್ತವೆ. ಲೈವ್ ಲೊಕೇಶನ್ ಹಂಚಿಕೆ, ರಿಮೋಟ್ ಕಂಟ್ರೋಲ್ ಮತ್ತು ಪಾರ್ಕ್‌ಸೇಫ್ ಸುರಕ್ಷತೆಯನ್ನು ಹೆಚ್ಚಿಸುತ್ತವೆ. ಇದು ಸವಾರರು ಮತ್ತು ಅವರ ಕುಟುಂಬಗಳಿಗೆ ಅಭಯ ನೀಡುವಂತಹ ಫೀಚರ್ಸ್ ಆಗಿವೆ ಎಂದು ಎಥರ್ ಹೇಳಿಕೊಂಡಿದೆ.

ಎಥರ್ ಎನರ್ಜಿಯ ಮಾರ್ಕೆಟಿಂಗ್ ಮುಖ್ಯಸ್ಥ ಸೌರಭ್ ಶರ್ಮಾ ಮಾತನಾಡಿ, "ನಾವು ಎಥರ್‌ನಲ್ಲಿ ನಿರ್ಮಿಸುವ ಪ್ರತಿ ಉತ್ಪನ್ನಕ್ಕೂ ಸುರಕ್ಷತೆಯು ಯಾವಾಗಲೂ ಪ್ರಮುಖ ತತ್ವವಾಗಿದೆ. ಎಥರ್ ಜೂನಿಯರ್ ಹೆಲ್ಮೆಟ್‌ಗಳೊಂದಿಗೆ, ನಾವು ಹಿಂಬದಿ ಸವಾರರಾಗಿ ಸವಾರಿ ಮಾಡುವ ಮಕ್ಕಳಿಗೆ ಆ ಬದ್ಧತೆಯನ್ನು ವಿಸ್ತರಿಸುತ್ತಿದ್ದೇವೆ. ಇದು ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಹೆಲ್ಮೆಟ್ ಧರಿಸ ಪ್ರಯಾಣಿಸಬೇಕು ಎಂಬ ಅರಿವನ್ನು ಮೂಡಿಸುತ್ತದೆ.

ಈ ಉಪಕ್ರಮದ ಮೂಲಕ, ದ್ವಿಚಕ್ರ ವಾಹನಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಕುಟುಂಬಗಳು ಮೊದಲೇ ಬಲವಾದ ಸುರಕ್ಷತಾ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇವೆ. ಎಥರ್ ಜೂನಿಯರ್ ಹೆಲ್ಮೆಟ್ ಮಕ್ಕಳಿಗೆ ದೈನಂದಿನ ಸವಾರಿಗಳನ್ನು ಸುರಕ್ಷಿತ ಮತ್ತು ಹೆಚ್ಚು ಒಳಗೊಳ್ಳುವಂತೆ ಮಾಡುವತ್ತ ಗಮನಹರಿಸುವುದನ್ನು ಮುಂದುವರಿಸುತ್ತದೆ" ಎಂದರು.

More from DriveSpark

Article Published On: Friday, January 23, 2026, 19:10 [IST]
English summary
Ather hands over 100 ather junior helmets to bengaluru traffic police
Read more on ather energy india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+